ಅರಿವು ಕೇಂದ್ರಗಳ ಅಳಲೊಂದು – ಕನಿಷ್ಠ ವೇತನಕ್ಕೂ ಕಣ್ಮರೆಯಾದ ಸರಕಾರ!
ಗ್ರಂಥಪಾಲಕರಿಗೆ ಗೌರವವಿಲ್ಲದ ರಾಜ್ಯದ ನಿರ್ಲಕ್ಷ್ಯ – ಏ.26ರಿಂದ ಬೃಹತ್ ಹೋರಾಟಕ್ಕೆ ಬೆಂಗಳೂರಿನಲ್ಲಿ ದಂಡೇರು
ಬೆಳಗಾವಿ
ಅರಿವು ಬೆಳಗಿಸುವ ಗ್ರಂಥಾಲಯಗಳಲ್ಲಿ ಈಗ ಆಕ್ರೋಶದ ಸ್ಪೋಟ. ಅರಿವಿನ ಬಿತ್ತನೆಗೂ ಮುನ್ನ, ಬದುಕಿನ ಹಕ್ಕಿಗಾಗಿ ಹೋರಾಟವೇ ಈ ತಲೆಮಾರಿನ ಗ್ರಂಥಪಾಲಕರ ದಿಕ್ಕಾಗಿದೆ.
ಗ್ರಾಮೀಣ ಪ್ರದೇಶಗಳ ಅರಿವು ಕೇಂದ್ರಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಾವಿರಾರು ಗ್ರಂಥಪಾಲಕರು ಈಗ ರಾಜ್ಯ ಸರ್ಕಾರದ ನಿರ್ಲಕ್ಷ್ಯ ಮತ್ತು ವೈಷಮ್ಯ ನೀತಿಗೆ ಒಳಗಾಗುತ್ತಿದ್ದಾರೆ. ಕಾನೂನು ಬಲ ಹೊಂದಿರುವ ಕನಿಷ್ಠ ವೇತನಕ್ಕೂ, ಗ್ರಂಥಪಾಲಕರು ಹೋರಾಟ ಮಾಡಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ಅಸಮಾನತೆಯ ವಿರುದ್ಧ ಧ್ವನಿಯೆತ್ತಲು ರಾಜ್ಯದ ಗ್ರಂಥಪಾಲಕರು ಏ.26ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಬೃಹತ್ ಹೋರಾಟ ನಡೆಸಲಿದ್ದಾರೆ.
“ವೇತನವಿಲ್ಲ, ಗೌರವವಿಲ್ಲ –
ಸರ್ಕಾರ 2023ರಲ್ಲಿ ಕನಿಷ್ಠ ವೇತನದ ಜಾರಿಗೆ ಆದೇಶ ಹೊರಡಿಸಿದರೂ ಹಲವು ಜಿಲ್ಲೆಗಳಲ್ಲಿ ಈ ನಿಯಮ ಕೇವಲ ಕಾಗದದ ಮೇಲೆಯೇ ಉಳಿದಿದೆ.
ಕೆಲವರು ವರ್ಷಗಟ್ಟಲೆ ವೇತನವಿಲ್ಲದೆ ಜೀವಿಸುತ್ತಿದ್ದಾರೆ. ಯೋಜನೆ ಅನುಷ್ಠಾನವಾಗದೇ, ಪಾವತಿ ಗ್ರಾಮ ಪಂಚಾಯಿತಿ ಖಾತೆಗೆ ತಲುಪಿದರೂ, ನೌಕರರ ಖಾತೆಗೆ ಅದು ತಲುಪದ ವೈಷಮ್ಯ ಇನ್ನೂ ಮುಂದುವರಿದಿದೆ.

ಸಾಂದರ್ಭಿಕ ಚಿತ್ರ
ತಿಂಗಳ ಕೊನೆಯಲ್ಲಿ ಬಾಡಿಗೆ, ಶಾಲಾ ಶುಲ್ಕ, ವೈದ್ಯಕೀಯ ವೆಚ್ಚಗಳು ಋಣದ ನೆರಳಲ್ಲಿ ನಿಂತಿವೆ. ಆದರೆ ಸರ್ಕಾರಕ್ಕೆ ಈ ನಿಜವಾದ ಸಮಸ್ಯೆ “ಮೌನದ ಧ್ವನಿಯಂತೆ” ಕಾಣಿಸುತ್ತಿಲ್ಲ ಎಂಬುದು ಗ್ರಂಥಪಾಲಕರ ಬೇಸರ.
ಮರೆಯಾದ ಸೇವೆ, ಮರೆಯಾದ ನ್ಯಾಯ – ಕೋವಿಡ್‌ಕಾಲದ ತೀವ್ರ ನೆನೆಪು!
ಕೊರೊನಾ ಕಾಲದಲ್ಲಿ ಕರ್ತವ್ಯ ನಿರ್ವಹಿಸಿ ಮೃತಪಟ್ಟ ಗ್ರಂಥಪಾಲಕರ ಕುಟುಂಬಗಳು ಈಗಲೂ ಪರಿಹಾರದ ನಿರೀಕ್ಷೆಯಲ್ಲಿವೆ. ಅವಕಾಶವಿಲ್ಲ, ಸಮಾಧಾನವಿಲ್ಲ, ಮಾನವೀಯತೆಯ ಅಭಾವ ಎಲ್ಲರಲ್ಲೂ ಅಸಹನೆಯಾಗಿ ಮೂಡಿದೆ. “ಅನುಕಂಪದ ನೌಕರಿ” ನೀಡುವ ಬೇಡಿಕೆಗೂ ಸರ್ಕಾರದ ಪ್ರತಿಕ್ರಿಯೆ ನಿರೀಕ್ಷೆಯಲ್ಲಿಯೇ ಉಳಿದಿದೆ.
, ಶೂನ್ಯ ಗೌರವ: ರಜೆಯಲ್ಲೂ ಕರ್ತವ್ಯ, ಸಂಬಳವಿಲ್ಲ!
ಕಾನೂನು ಪ್ರಕಾರ ರಜಾದಿನಗಳಲ್ಲಿ ಕೆಲಸ ಮಾಡಿದರೆ ದ್ವಿಗುಣ ಸಂಬಳ ಲಭ್ಯವಾಗಬೇಕಾದರೂ, ಗ್ರಂಥಪಾಲಕರಿಗೆ ಅದು ಕನಸು ಮಾತ್ರ. ಸರ್ಕಾರ ದಿನಗಟ್ಟಲೆ ಹೆಚ್ಚು ಕೆಲಸವನ್ನು ಒಪ್ಪಿಸುತ್ತಿದ್ದು, ಅದಕ್ಕೆ ಪರಿಹಾರವಿಲ್ಲ. ಇದರ ಜೊತೆಗೆ ಹೊಸ 6000 ಅರಿವು ಕೇಂದ್ರ ಸ್ಥಾಪನೆಗೆ ಯೋಜನೆ ರೂಪಿಸುತ್ತಿರುವ ಸರ್ಕಾರ, ಈಗಿರುವ ನೌಕರರ ಬಗ್ಗೆಯೇ ಕಾಳಜಿವಹಿಸುತ್ಯಿಲ್ಲ ಎನ್ನುವುದು ಬಹುತೇಕರ ಅಭಿಪ್ರಾಯ.
ಹೋರಾಟದ ಧ್ವನಿ – ಇಲ್ಲಿದೆ ಗ್ರಂಥಪಾಲಕರ ಬೇಡಿಕೆಗಳ ಪಟ್ಟಿ:
ಗ್ರಂಥಪಾಲಕರನ್ನು ಅಧಿಕೃತವಾಗಿ ಆರ್ಡಿಪಿಆರ್ ಇಲಾಖೆಯ ನೌಕರರಾಗಿ ಪರಿಗಣಿಸಬೇಕು ಅಥವಾ ಸಾರ್ವಜನಿಕ ಗ್ರಂಥಾಲಯ ಇಲಾಖೆಗೆ ಮರಳಿಸಬೇಕು.
ದಿನವೂ ಸಂಜೆ 6ಕ್ಕೆ ಕಾರ್ಯಾವಧಿ ಅಂತ್ಯವಾಗಬೇಕು.
ಗ್ರಾಚ್ಯುಟಿ, ನಿವೃತ್ತಿ ಸೌಲಭ್ಯ ನೀಡಬೇಕು.
ಅನುಕಂಪದ ಹುದ್ದೆಗೆ ಅರ್ಹತೆಯ ನಿಯಮ ಸಡಿಲಗೊಳಿಸಬೇಕು.
ಬೇರೆ ಇಲಾಖಾ ಕೆಲಸಗಳಿಗೆ ನಿಯೋಜನೆ ನಿಲ್ಲಿಸಬೇಕು.
ಪ್ರತಿಮಾಸ 5ನೇ ತಾರೀಖಿನಲ್ಲಿ ವೇತನ ಪಾವತಿ ಖಚಿತಗೊಳಿಸಬೇಕು.
ಬಾಕಿ ವೇತನವನ್ನು ತಕ್ಷಣ ಪಾವತಿಸಬೇಕು.
ಸಂಬಳ ನೇರವಾಗಿ ನೌಕರರ ಖಾತೆಗೆ ಜಮೆ ಮಾಡುವ ವ್ಯವಸ್ಥೆ ಮಾಡಬೇಕು.
:
ಅರಿವಿಗೆ ಸಿಂಚನ ನೀಡುವ ಗ್ರಂಥಪಾಲಕರಿಗೆ, ಸರ್ಕಾರವೇ ಅನಿವಾರ್ಯವಾಗಿ ಅನ್ಯಾಯದ ಮೋಡ ಕವಿಸಿದ್ದಂತಾಗಿದೆ. ಕನಿಷ್ಠ ವೇತನದ ಹೋರಾಟ, ಕೇವಲ ಹಣಕ್ಕಲ್ಲ, ಮಾನವೀಯತೆಯ ನ್ಯಾಯಕ್ಕಾಗಿ ಎಂಬ ವಿಷಯವನ್ನು ಈಗ ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಲೇಬೇಕು. ಇಲ್ಲದಿದ್ದರೆ ಈ ಹೋರಾಟ, ಹೊಸ ಅರಿವಿಗೆ ದಾರಿ ತರಲಿದೆ!