ಮುಜಮಿಲ್ ನಾಮಕಾವಾಸ್ತೆ ವಿರೋಧ ಪಕ್ಷದ ನಾಯಕ..!

Oplus_16777216

ವಿರೋಧ ಪಕ್ಷದ ನಾಯಕನ ಆಸನದಲ್ಲಿ ಪಕ್ಷೇತರ ನಗರಸೇವಕಿ ಪುತ್ರನ ಅತಿಕ್ರಮಣ.

ವಿಪಕ್ಷ ನಾಯಕ ಮುಜಮಿಲ್ ಡೋಣಿಯ ಮೌನ: ಹುದ್ದೆಯ‌ ಮರ್ಯಾದೆ ತಗೆದ ಡೋಣಿ.

ಬೆಳಗಾವಿ ಪಾಲಿಕೆಯಲ್ಲಿ ಡೋಣಿ ಅಡ್ಜೆಸ್ಟಮೆಂಟ್ ಅಂತೆ

ಪಾಲಿಕೆಯಲ್ಲಿ ಖುರ್ಚಿ ಖಾಲಿ ಇದ್ದರೆ ಸಾಕು..ಯಾರು ಬೇಕಾದವರು ಕುಳಿತುಕೊಳ್ಳಬಹುದು.

ಎಲ್ಲಿಗೆ ಬಂತು ಪಾಲಿಕೆ ಆಡಳಿತ ವ್ಯವಸ್ಥೆ.

ಅಶೋಕ ನಗರ ವಲಯ ಕಚೇರಿಯಲ್ಲಿ PID ಕಡತ ಹಿಡಿದು ಕೊಂಡು‌ ನಿಲ್ಲೋರು ಯಾರು?

ಕಡತ ಕಳ್ಳತನದ ನಡುವೆ ಇದೊಂದು ಹೊಸ ತಲೆನೋವು.

ಬೆಳಗಾವಿ:
ಇದು ರಾಜಕೀಯ ಕುರ್ಚಿಯ ವಿಷಯವಲ್ಲ. ಇದು ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಹಾಳುಮಾಡುವ ದೃಶ್ಯ!

ಪಾಲಿಕೆಯ ವಿರೋಧ ಪಕ್ಷದ ನಾಯಕ ಮುಜಮಿಲ್ ಡೋಣಿಗೆ ಮೀಸಲಾದ, ಶ್ರೇಯೋಭಿವೃದ್ಧಿ ಚರ್ಚೆಗೆ ವೇದಿಕೆಯಾಗಬೇಕಾದ ಕೊಠಡಿಯಲ್ಲಿ ಇವತ್ತು ಕುಳಿತಿರುವವರು ಯಾವುದೇ ಅಧಿಕಾರವಿಲ್ಲದ ವ್ಯಕ್ತಿ — ಇಮ್ರಾನ್ ಪತ್ತೇಖಾನ್. ಅವರ ಖಾತೆ, ಪಠ್ಯ, ಸ್ಥಾನ ಯಾವುದೂ ಈ ವ್ಯವಸ್ಥೆಯಲ್ಲಿ ಮಾನ್ಯವಲ್ಲ. ಆದರೆ ಅವರು ಕುಳಿತಿದ್ದಾರೆ. ಯಾಕೆಂದರೆ ಅವರು ಪಕ್ಷೇತರ ಸದಸ್ಯೆ ಪತ್ತೇಖಾನ್ ಅವರ ಪುತ್ರ.! ಇಮ್ರಾನ್..!

ಇದಕ್ಕಿಂತ ನೈಜ ಅಧಿಕಾರ ದುರುಪಯೋಗದ ಉದಾಹರಣೆ ಬೇರೆ ಬೇಕಾ?

ಇದೇನು ನಿರ್ಲಕ್ಷ್ಯವೋ, ಅಥವಾ ಸದಾಶಯತೆಯೊ? ಇಲ್ಲ. ಇದು ಶುದ್ಧವಾಗಿ ಸಾರ್ವಜನಿಕ ವ್ಯವಸ್ಥೆಯ ಮೇಲೇ ಹರಿದ ಬಂದ ಹೊಸ ರಾಜಕೀಯ ದರ್ಪದ ಪ್ರತಿಬಿಂಬ. ತಮ್ಮೆದುರು ನಡೆಯುತ್ತಿರುವ ಈ ಉಲ್ಲಂಘನೆಗೆ ವಿರೋಧ ಪಕ್ಷದ ನಾಯಕ ಮುಜಮಿಲ್ ಡೋಣಿ ಸುಮ್ಮನೆ ಕೂತು ನೋಡುತ್ತಿದ್ದಾರೆಂದರೆ ಆ ಹುದ್ದೆಗೆ ಡೋಣಿ ಕೊಡುತ್ತಿರುವ ಗೌರವದ ಬಗ್ಗೆ ಪ್ರಶ್ನೆಗಳು ಮೂಡಿ ಬರುತ್ತವೆ.

ನಾಯಕತ್ವವೇ ಬೇಜವಾಬ್ದಾರಿ ಎಂಬ ಸಂದೇಶ ಕೊಡುವ ಮುಜುಗರದ ಕ್ಷಣ ಇದು.
ವಿರೋಧ ಪಕ್ಷದ ನಾಯಕ ಎಂಬ ಹುದ್ದೆಯು, ಆಡಳಿತದ ಭ್ರಷ್ಟತೆಗಳ ವಿರುದ್ಧ ಧ್ವನಿ ಎತ್ತಲು, ಸಾರ್ವಜನಿಕರ ಪರ ಹೋರಾಡಲು ಇರುವ ಪದವಿ. ಆದರೆ ಇಂದಿನ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಅದು ಕೇವಲ ಹೆಸರು ಮಾತ್ರ. ನಾಯಕನೇ ತನ್ನ ಸ್ಥಾನದಲ್ಲಿ ತಾನು ಇರಲಿಲ್ಲವೇಕೆ? ಇತರರು ಕುಳಿತುಕೊಳ್ಳುವಲ್ಲಿ ತಡೆ ತೋರಲಿಲ್ಲವೇಕೆ? ಇವರ ದುರ್ಬಲತೆಯ ಬೆನ್ನುತಟ್ಟಿದವರೇನು ಕಡಿಮೆ?

ಇದು ಕೇವಲ ಫತ್ತೇಖಾನ್ ಅವರ ಮಗನ seating arrangement ಅಲ್ಲಇದು ಸರ್ಕಾರದ ಕಟ್ಟಡದ ಮೌಲ್ಯಗಳ ಮೇಲಿನ ತಿರಸ್ಕಾರ!


ಕೇಳುವ ಪ್ರಶ್ನೆಗಳು:

ಈ ಕೊಠಡಿ ಪೌರಾಧಿಕಾರದ ಪ್ರತೀಕವೋ, ಅಥವಾ ಪೌರ ಕುಟುಂಬದ ಸ್ವತ್ತೋ?

ನಗರಸೇವಕಿ ಫತ್ತೇಖಾನ್ ಅವರು ತಮ್ಮ‌ ಪುತ್ರನ ಅಧಿಕಾರ ದುರುಪಯೋಗವನ್ನು ಅನುಮತಿಸಿದ್ದಾರೆಂದರೆ, ಅವರು ಸಾರ್ವಜನಿಕ ಸಂಪತ್ತನ್ನು ವೈಯಕ್ತಿಕವಾಗಿ ಉಪಯೋಗಿಸುವ ಅಧಿಕಾರವನ್ನು ಎಲ್ಲಿ ಪಡೆದರು?


: ಶಬ್ದವಿಲ್ಲದ ನಾಯಕತ್ವ, ನಿರ್ಬಂಧವಿಲ್ಲದ ಕುಟುಂಬ ಅಧಿಕಾರ —
ಇವು ಬೆಳಗಾವಿ ಪಾಲಿಕೆಯಲ್ಲಿ ಹೊಸ ಯುಗಕ್ಕೆ ನಾಂದಿಯಾಗುತ್ತಿದ್ದರೆ, ಜನರು ಎಚ್ಚರಗೊಳ್ಳಲೇಬೇಕು.

Leave a Reply

Your email address will not be published. Required fields are marked *

error: Content is protected !!