ಬೆಳಗಾವಿ ಪಾಲಿಕೆ ಪಾಲಿಟಿಕ್ಸ್: ಮತ್ತೇ ಹೋರಾಟಕ್ಕೆ ಸಜ್ಜಾದ ಶಾಸಕ ಅಭಯ ಪಾಟೀಲ.
ಮೇಯರ್ ಮಂಗೇಶ ಪವಾರ್ ಮತ್ತು ನಗರಸೇವಕ ಜಯಂತ ಜಾಧವ ಸದಸ್ಯತ್ವ ರದ್ದತಿ ವಿಷಯ.
ಜಿದ್ದಿಗೆ ಬಿದ್ದ ಶಾಸಕ. ಸ್ಥಾಯಿ ಸಮಿತಿಗೆ ಇವರಿಬ್ಬರೂ ಮತದಾನಕ್ಕೆ ಬಂದೇ ಬರ್ತಾರೆ ಎಂದು ಚಾಲೆಂಜ್ ಮಾಡಿದ ಶಾಸಕ ಅಭಯ.
ನಾಳೆ ದಿ. 1 ರಂದೇ ತಡೆಯಾಜ್ಞೆ ಸಿಗುವ ಸಾಧ್ಯತೆ. 2 ರಂದು ಸ್ಥಾಯಿ ಸಮಿತಿ ಸಭೆ
ಇದುವರೆಗೂ ಇಟ್ಟ ಹೆಜ್ಜೆ ಹಿಂದಿಡದ ಶಾಸಕ ಅಭಯ ಪಾಟೀಲ
ಇ ಬೆಳಗಾವಿ ವಿಶೇಷ
ಬೆಳಗಾವಿ
ಬೆಳಗಾವಿ ಮಹಾನಗರ ಪಾಲಿಕೆಯ ರಾಜಕೀಯ ಬಿಕ್ಕಟ್ಟಿನಲ್ಲಿ ರಾಜ್ಯ ಸರ್ಕಾರದ ಆಟಕ್ಕೆ ಪ್ರತಿಯೇಟು ನೀಡುತ್ತಿರುವ ಶಕ್ತಿಶಾಲಿ ನಾಯಕ ಎಂದಾಕ್ಷಣ ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲರ ಹೆಸರು ಮುಂಚೂಣಿಗೆ ಬರುತ್ತದೆ. .
ಎಲ್ಲ ಬಿಕ್ಕಟ್ಟಿನ ಕಾಲಘಟ್ಟಗಳಲ್ಲಿ ಪಾಲಿಕೆಯ ‘ಆಪತ್‌ಬಂಧು’ ಎಂಬ ಹೆಸರು ಹೊಂದಿದ ಅಭಯ ಪಾಟೀಲರು, ಮತ್ತೊಮ್ಮೆ ಸರ್ಕಾರದ ‘ ಅಂಧಾ ಕಾನೂನಿಗೆ ತಕ್ಕ ಪ್ರತಿರೋಧ ಕೊಡಲು ಮುಂದಾಗಿದ್ದಾರೆ.

ಪಾಲಿಕೆಯನ್ನು ರಕ್ಷಿಸುವ ಹೋರಾಟಗಾರ
ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರದಲ್ಲಿದ್ದಾಗ, ಬಿಜೆಪಿ ಆಡಳಿತದ ಪಾಲಿಕೆಗೆ ನೋಟೀಸ್‌ಗಳ ಮುಖಾಂತರ ತೊಂದರೆ ಕೊಡುವುದು ಇದು ಹೊಸದೇನಲ್ಲ.
ಅಂತಹ ಸಂದರ್ಭದಲ್ಲಿ ಶಾಸಕ ಅಭಯ ಪಾಟೀಲರು ವಜ್ರದ ಬಿನ್ನಾಣದಂತೆ ಪಾಲಿಕೆಯನ್ನು ಕಾಪಾಡಿದ್ದರು.
ಅವರು ನೀಡಿದ ತೀಕ್ಷ್ಣ ತಾರ್ಕಿಕ ಉತ್ತರಗಳು ಪಾಲಿಕೆಯನ್ನು ಸೂಪರ್ ಸೀಡ್ ಮಾರ್ಗದಿಂದ ತಪ್ಪಿಸಿಕೊಂಡಿದ್ದನ್ನು ಯಾರೂ ಮರೆಯಲಾರರು.

ಆ ಸಮಯದಲ್ಲಿ ಸರ್ಕಾರಿ ಯಂತ್ರಾಂಗ ಪಾಲಿಕೆಗೆ ಏಳು ದಿನಗಳ ಅವಧಿಯಲ್ಲಿ ಉತ್ತರ ನೀಡುವಂತೆ ನೋಟೀಸ್ ನೀಡಿತ್ತು. ಆದರೆ ಅದರೊಳಗೆ ನೋಟೀಸ್ ಆಯುಕ್ತರಿಗೆ ಮೊದಲಿಗೆ ತಲುಪಿದ್ದು, ಮೇಯರ್‌ಗೆ ವಿಳಂಬವಾಗಿ ತಲುಪುವ ವ್ಯವಸ್ಥೆ ಆಗಿತ್ತು.
ಈ ಎಲ್ಲವನ್ನು ಸಮರ್ಥವಸಗಿ ಎದುರಿಸಿದ ಅಭಯ ಪಾಟೀಲರು ರಾಜ್ಯಪಾಲರನ್ನು ಭೇಟಿ ಮಾಡಿ ಕಾಂಗ್ರೆಸ್ನ ರಾಜಕೀಯ ನಾಟಕವನ್ನು ಅರ್ಧಕ್ಕೆ ನಿಲ್ಲಿಸಿದ್ದರು..
ಇದರ ನಂತರ 138 ಪಿಕೆಗಳ ನೇಮಕಾತಿಯಲ್ಲಿ ಉದ್ಭವಿಸಿದ ಕಚ್ಚಾಟ ಅಭಯ ಪಾಟೀಲರ ಸಮಯೋಚಿತ ಮಧ್ಯಸ್ಥಿಕೆಯಿಂದ ಸ್ಥಗಿತವಾಗಿತ್ತು.

ಮತ್ತೊಂದು ಕಾನೂನು ಕಾಳಗ ಆರಂಭ.*
ಈಗ ಮತ್ತೆ ಪಾಲಿಕೆಯನ್ನು ಇಕ್ಕಟ್ಟಿಗೆ ತರುವ ಪ್ರಯತ್ನ ರಾಜ್ಯ ಸರ್ಕಾರದಿಂದ ನಡೆಯುತ್ತಿದೆ.
ಬಿಜೆಪಿ ಜಯಂತ ಜಾಧವ್ ಮತ್ತು ಮಂಗೇಶ್ ಪವಾರ್ ಅವರು ನಗರಸೇವಕರಾಗುವ ಮೊದಲು ಪತ್ನಿಯರ ಹೆಸರಿನಲ್ಲಿ ತಿನಿಸು ಕಟ್ಟೆಯಲ್ಲಿ ಮಳಿಗೆ ಪಡೆದಿದ್ದರು. ಈಗ ಅದನ್ನು ವಾಪಸ್ಸು ಕೊಟ್ಟಿಲ್ಲ ಎಂಬ ಒಂದೇ ಕಾರಣದಿಂದ ಅವರ ಸದಸ್ಯತ್ವವನ್ನು ರದ್ದು ಪಡಿಸಲಾಗಿದೆ.
ಪ್ರಾದೇಶಿಕ ಆಯುಕ್ತರು ಸದಸ್ಯತ್ಬ ರದ್ದು ಮಾಡಿ ಆದೇಶ ಹೊರಡಿಸಿದ್ದರು. ಈಗ ಕಾನೂನು ಹೋರಾಟ ಆರಂಭವಾಗಿದೆ.
ಅಭಯ ಪಾಟೀಲರು ಈಗ ಹೋರಾಟದ ನಾಯಕರಾಗಿ ಹೊರಹೊಮ್ಮಿದ್ದಾರೆ. “ಇದು ಕೇವಲ ಸದಸ್ಯತ್ವ ರಕ್ಷಿಸುವ ಹೋರಾಟವಲ್ಲ; ಇದು ನಮ್ಮ ಸ್ಥಳೀಯ ಸ್ವಾಯತ್ತ ಸಂಸ್ಥೆಗಳ ಗೌರವ ಮತ್ತು ಸ್ವಾಭಿಮಾನ ಉಳಿಸಿಕೊಳ್ಳುವ ಹೋರಾಟ” ಎಂಬ ಆತ್ಮವಿಶ್ವಾಸ ಅವರದ್ದಾಗಿದೆ. .
ಸರ್ಕಾರಕ್ಕೆ ಮತ್ತೊಮ್ಮೆ ಮುಖಭಂಗವೇ?

ಸ್ಥಳೀಯ ರಾಜಕೀಯ ವಲಯದಲ್ಲಿ ಸ್ಪಷ್ಟ ಅಭಿಪ್ರಾಯ ಏನೆಂದರೆ, ಈ ಇಬ್ಬರು ನಗರಸೇವಕರು ಮತ್ತೆ ಪಾಲಿಕೆ ಪ್ರವೇಶ ಪಡೆಯುವುದು ಖಚಿತ. ಸರ್ಕಾರ ಈ ಬೆಳಗಾವಿ ರಾಜಕೀಯ ರಂಗಭೂಮಿಯಲ್ಲಿ ಮತ್ತೊಮ್ಮೆ ಮುಖಭಂಗಕ್ಕೊಳಗಾಗುವುದು ಖಾತ್ರಿಯಂತೆ ಕಾಣುತ್ತಿದೆ.