‘ಕೈ ಸರ್ಕಾರದ ವಿರುದ್ಧ ‘ಕಮಲ ಗರಂ

ಅನುದಾನ ವಿತರಣೆಯಲ್ಲಿ ಅಸಮಾನತೆ: ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶ”

ಬೆಳಗಾವಿ, ಜುಲೈ 19:
ರಾಜ್ಯದಲ್ಲಿ ಅನುದಾನ ವಿತರಣೆಯ ಹೆಸರಿನಲ್ಲಿ ಕಾಂಗ್ರೆಸ್ ಸರ್ಕಾರ ತಾರತಮ್ಯಮೂಲಕ ಆಡಳಿತ ನಡೆಸುತ್ತಿದೆ ಎಂಬ ಗಂಭೀರ ಆರೋಪವನ್ನು ಬಿಜೆಪಿ ಮುಖಂಡ ಎಂ.ಬಿ. ಜಿರಲಿ ಹೊರಹಾಕಿದ್ದಾರೆ. “ಸರ್ಕಾರದ ನಿಧಿಗಳು ಕಾಂಗ್ರೆಸ್ ಶಾಸಕರಿಗೆ ಮಾತ್ರ ಮೀಸಲಾದಂತಾಗಿದ್ದರೆ, ಜನಪ್ರತಿನಿಧಿಗಳ ಸ್ಥಾನಮಾನಕ್ಕೂ ಧಕ್ಕೆ ಉಂಟುಮಾಡಿದಂತಾಗಿದೆ,” ಎಂದು ಅವರು ಖಡಕ್ ಟೀಕೆಯನ್ನೂ ಹಾಕಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಜಿರಲಿ, “ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ, ಇದಕ್ಕೂ ಮಿಕ್ಕಿ ಈಗ ಅನುದಾನಗಳ ವಿಷಯದಲ್ಲೂ ಪಕ್ಷಪಾತ ಸ್ಪಷ್ಟವಾಗಿದೆ. ಡಿಸಿಎಂ ಡಿ.ಕೆ. ಶಿವಕುಮಾರ್ ಎಲ್ಲ ಶಾಸಕರಿಗೂ ₹50 ಕೋಟಿ ಅನುದಾನ ನೀಡಲಾಗುತ್ತದೆ ಎಂದು ಭರವಸೆ ನೀಡಿದರೆ, ಮುಖ್ಯಮಂತ್ರಿಯಾದ ಸಿದ್ದರಾಮಯ್ಯ ಮಾತ್ರ ಕಾಂಗ್ರೆಸ್ ಶಾಸಕರಿಗಷ್ಟೇ ಅನುದಾನ ನೀಡಲಾಗುವುದು ಎಂದು ಹೇಳಿಕೆ ನೀಡಿರುವುದು ಖಂಡನೀಯ,” ಎಂದರು.

ಕಲಬುರ್ಗಿ – ಡ್ರಗ್ಸ್ ಮಾಫಿಯಾದ ನಾಡಾಗುತ್ತಿದೆ!”

ಕಲಬುರ್ಗಿಯಲ್ಲಿನ ಡ್ರಗ್ಸ್ ಜಾಲದ ಮೇಲೆ ತೀವ್ರ ವಾಗ್ದಾಳಿ ನಡೆಸಿದ ಜಿರಲಿ, “ಇಲ್ಲಿ ಪೊಲೀಸರು ರಕ್ಷಣೆಯಲ್ಲಿರುವಾಗಲೇ ಮಾಫಿಯಾ ಚಟುವಟಿಕೆ ನಡೆಯುತ್ತಿದೆ. ‘ರಿಪಬ್ಲಿಕ್ ಆಫ್ ಕಲಬುರ್ಗಿ’ ಅನ್ನೋ ಪರಿಸ್ಥಿತಿಗೆ ನಾವೀಗ ತಲುಪಿದ್ದೇವೆ” ಎಂದು ಕಿಡಿಕಾರಿದರು. ಛಲವಾದಿ ನಾರಾಯಣಸ್ವಾಮಿಗೆ ನಡೆದ ದಾಳಿಯ ತನಿಖಾ ವರದಿಯ ಕುರಿತು ಸರ್ಕಾರ ಮೌನವಹಿಸಿದೆ ಎಂದು ಆರೋಪಿಸಿದರು.

ಪ್ರಿಯಾಂಕ್ ಖರ್ಗೆ odd silence, but loud talk!”
ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಗಂಭೀರ ಆರೋಪ ಹೊರಿಸಿದ ಜಿರಲಿ, “ತಮ್ಮ ಇಲಾಖೆಯ ಅಧೀನದ ಗ್ರಾಮ ಪಂಚಾಯತಿಯಲ್ಲಿ ₹15 ಕೋಟಿಗೂ ಹೆಚ್ಚು ಭ್ರಷ್ಟಾಚಾರ ನಡೆದರೂ, ಖರ್ಗೆ ಅದನ್ನು ತಡೆಯಲು ಒಂದು ಮಾತು ಮಾತು ಆಡಿಲ್ಲ. ಆದರೆ, ಆರ್‌ಎಸ್‌ಎಸ್ ಬ್ಯಾನ್ ಮಾಡುವುದಾಗಿ ಹೇಳಿ ಉಡುಪಿಯಲ್ಲಿ ರಾಜ್ಯದ ಜನರ ಭಾವನೆಗೆ ಧಕ್ಕೆ ತಂದಿದ್ದಾರೆ” ಎಂದು ಕಟು ಟೀಕೆ ಮಾಡಿದರು.

ಆರ್ಸಿಬಿ ದುರಂತ: ಸಂತ್ರಸ್ತರ ಮೇಲೆ ಪ್ರಕರಣ?”
ಆರ್ಸಿಬಿ ವಿಜಯೋತ್ಸವದ ವೇಳೆ ನಡೆದ ಕಾಲ್ತುಳಿತ ದುರಂತವನ್ನು ಉಲ್ಲೇಖಿಸಿದ ಅವರು, “ಅಮಾಯಕರ ಮೇಲೆ ತಪ್ಪು ಹೊರೆ ಹಾಕಿ ಸರ್ಕಾರ ಕೈತೊಳೆಯುತ್ತಿದೆ. ಈ ದುರಂತದ ನೈತಿಕ ಹೊಣೆಗಾರಿಕೆ ಸರ್ಕಾರದ ಮೇಲಿದೆ” ಎಂದು ಹೇಳಿದರು.

ಬಿಜೆಪಿಯ ಎಚ್ಚರಿಕೆ – ವಿರೋಧದ ಹೋರಾಟ ತೀವ್ರಗೊಳ್ಳಲಿದೆ”
ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಸುಭಾಷ ಪಾಟೀಲ ಅವರು ಮಾತನಾಡಿ, “ಅಡಳಿತ ವ್ಯವಸ್ಥೆಯು ಸಂಪೂರ್ಣ ಕುಸಿದಿದೆ. ಈಗ ಅನುದಾನ ವಿತರಣೆಯಲ್ಲೂ ಪಕ್ಷಪಾತ ನಡೆಯುತ್ತಿದೆ. ಬಿಜೆಪಿ ಇದೇ ವಿಷಯದ ಕುರಿತು ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಿದೆ” ಎಂದು ಎಚ್ಚರಿಸಿದರು.

ಈ ಸುದ್ದಿಗೋಷ್ಠಿಯಲ್ಲಿ ಮಹಾನಗರ ಬಿಜೆಪಿ ಅಧ್ಯಕ್ಷೆ ಗೀತಾ ಸುತಾರ, ಮಲ್ಲಿಕಾರ್ಜುನ, ಸಚಿನ್ ಕಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!