ಕೋರೆ ಹುಟ್ಟು ಹಬ್ಬದ ಹಿನ್ನೆಲೆ’
100 ವಿದ್ಯಾರ್ಥಿಗಳಿಗೆ
ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ
ಬೆಳಗಾವಿ
ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ, ಪ್ರಭಾಕರ ಕೋರೆ ಅವರ 78 ನೇ ಜನ್ಮದಿನದ ಪ್ರಯುಕ್ತ 100 ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ಐಎಎಸ್, ಕೆಎಎಸ್ ಮತ್ತು ಪಿಎಸ್ಐ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಭರವಸೆ ಧಾರವಾಡ ಮತ್ತು ಕಿಯೋನಿಕ್ಸ್ ಕಂಪ್ಯೂಟರ್ ತರಬೇತಿ ಕೇಂದ್ರ ಚಿಕ್ಕೋಡಿಯ ವತಿಯಿಂದ ಈ ತರಬೇತಿ ನಡೆಯಲಿದೆ.

ಅರ್ಜಿಗಳು ಕಿಯೋನಿಕ್ಸ್ ಬೆಳಗಾವಿ, ಚಿಕ್ಕೊಡಿ, ರಾಯಬಾಗ, ನಿಪ್ಪಾಣಿ ಮತ್ತು ಎನ್ಐಸಿಟಿ ಸಂಕೇಶ್ವದರಲ್ಲಿ ದೊರೆಯಲಿವೆ ಎಂದು ಕಿಯೋನಿಕ್ಸ್ ಮುಖ್ಯಸ್ಥ ರಾಜೇಶ ಚೌಗಲೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.