ಬೆಳಗಾವಿ ಮಹಾನಗರ ಪಾಲಿಕೆ
ಮರಾಠಿ ದಾಖಲೆ ಕೇಳಿದವರಿಗೆ ನೋಟೀಸ್..!
ಬೆಳಗಾವಿ.
ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಮರಾಠಿ ದಾಖಲೆ ಕೇಳಿದ ನಗರಸೇವಕರಿಗೆ ನೋಟೀಸ್ ಜಾರಿಯಾಗಿದೆ.
ಕನ್ನಡ ಪರ ಸಂಘಟನೆಗಳು ಕೊಟ್ಟ ದೂರಿನನ್ವಯ ಅಪರ ಜಿಲ್ಲಾಧಿಕಾರಿಗಳು ಈ ನೋಟೀಸ್ನ್ನು ನೀಡಿದ್ದಾರೆ.

ಇತ್ತೀಚೆಗೆ ನಡೆದ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಎಂಎನ್ಎಸ್ ಸದಸ್ಯ ರವಿ ಸಾಳುಂಕೆ ಸೇರಿದಂತೆ ಮೂರು ಜನರ ಮರಾಠಿಯಲ್ಲಿ ದಾಖಲೆ ಕೊಡಬೇಕು ಎಂದು ವಾದಮಾಡಿ ಗೊಂದಲ ಸೃಷ್ಟಿ ಮಾಡಿದ್ದರು.
ಇದನ್ನು ಗಂಭೀರವಾಗಿ ಪರಿಗಣಿಸಿದ ಕನ್ನಡ ಪರ ಸಂಘಟನೆಗಳು ಅವರ ಸದಸ್ಯತ್ವ ರದ್ದು ಮಾಡಬೇಕೆಂದು ಕೋರಿ ಪ್ರಾದೇಶಿಕ ಆಯುಕ್ತರಿಗೆ ಮನವಿ ಪತ್ರ ಕಳಿಸಿದ್ದವು.

ಈಗ ಆ ಮನವಿ ಪತ್ರವನ್ನು ಪ್ರಾದೇಶಿಕ ಆಯುಕ್ತರು ಅಪರ ಜಿಲ್ಲಾಧಿಕಾರಿಗಳಿಗೆ ವಿವರಣೆ ಕೋರಿ ಪತ್ರ ಬರೆದಿದ್ದರು, ಈ ಹಿನ್ನೆಲೆಯಲ್ಲಿ ಅಪರ ಜಿಲ್ಲಾಧಿಕಾರಿಗಳು ಬೆಳಗಾವಿ ಪಾಲಿಕೆಗೆ ಪತ್ರ ಬರೆದು ಮುಂದಿನ ಕ್ರಮ ತೆಗೆದುಕೊಳ್ಳುವಂತೆ ಪತ್ರ ಬರೆದಿದ್ದಾರೆಂದು ಗೊತ್ತಾಗಿದೆ.

