ದಲ್ಲಾಳಿಗಳ ಮಾತು ಕೇಳಿ ದಾರಿ ತಪ್ಪಿತಾ ವಿವಿ.?
ಸಿಂಡಿಕೇಟ್ ನಿರ್ಧಾರ ಐತಿಹಾಸಿಕವಲ್ಲ. ಬದಲಾಗಿ ವಿಳಂಬದ ಒಪ್ಪಿಗೆ.
ಆ ದಾಖಲೆಗಳ ವಿರುದ್ಧ ಕ್ರಮ ಏಕಿಲ್ಲ?
ಖಾಸಗಿಯಾಗಿ ಪ್ರವೇಶ ಶುಲ್ಕ ತನ್ನ ಖಾತೆಗೆ ಹಾಕಿಸಿಕೊಂಡವರ ವಿರುದ್ಧ ಕ್ರಮ ಏನು?
ಬೆಳಗಾವಿ:
ನಿಂತ ಜಾಗದಿಂದಲೇ ಮತ್ತೆ ಗದ್ದಲ ಎಬ್ಬಿಸುವ ಪರಿಪಾಠವನ್ನು ಮುಂದುವರಿಸಿರುವ ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು, ಪಿಎಚ್.ಡಿ ವಿದ್ಯಾರ್ಥಿನಿ ಸುಜಾತಾ ಪೋಳ್ ವಿರುದ್ಧ ಗಂಭೀರ ಅನಾಚಾರ ಎಸಗಿದ ಆರೋಪ ಸಾಬೀತಾದ ಹಲವು ತಿಂಗಳುಗಳ ನಂತರ, ಪ್ರೊ. ಕೆ.ಎಲ್.ಎನ್. ಮೂರ್ತಿ ಅವರನ್ನು ಕಡ್ಡಾಯ ನಿವೃತ್ತಿಗೆ ಒಪ್ಪಿಸಲು ಹೊರಟಿದೆ.
ಈ ಕ್ರಮ ‘ಕಠಿಣ’ ಎನ್ನಲು ಬದಲು ‘ವಿಳಂಬದ ಒಪ್ಪಿಗೆ’ ಎನ್ನಿಸುವ ಮಟ್ಟಕ್ಕೆ ತಡವಾಗಿ ಬಂದಿದೆ ಎಂಬ ಅಭಿಪ್ರಾಯವೇ ಹೆಚ್ಚು ಕೇಳಿಬರುತ್ತಿದೆ.

ವಿದ್ಯಾರ್ಥಿನಿಯ ದೂರನ್ನು ಅಂತರಿಕ ಸಮಿತಿ ಬಹಳ ಹಿಂದೆಯೇ ದೃಢಪಡಿಸಿತ್ತು. ಆಗಲೇ ಕ್ರಮ ಕೈಗೊಂಡಿದ್ದರೆ ವಿವಿಯ ಮೆರಗು, ನೈತಿಕತೆ, ಸಂಸ್ಥೆಯ ಧಾರ್ಮಿಕತೆ—ಎಲ್ಲವೂ ಉಳಿದುಕೊಳ್ಳುತ್ತಿತ್ತು ಎಂದು ವೀಕ್ಷಕರ ಧ್ವನಿ. ಆದರೆ ಸಿಂಡಿಕೇಟ್ ಈಗ ಮಾಡಿರುವ ಕ್ರಮ, ತಡವಾದ ನ್ಯಾಯ—ಅದೇನು, ನ್ಯಾಯವೇ ಸರಿ!
ಆದರೂ ಒಂದು ಪ್ರಶ್ನೆ ಗಾಳಿಯಲ್ಲಿ ತೇಲುತ್ತದೆ:
“ಆರೋಪ ಸಾಬೀತಾದ ನಂತರವೂ ಮೂರ್ತಿ ವಿರುದ್ಧ ಪೊಲೀಸ್ ದೂರು ಏಕೆ ದಾಖಲಾಗಲಿಲ್ಲ?”
ಈ ಪ್ರಶ್ನೆ ವಿವಿಯ ಒಳಗಡೆಯ ಶಕ್ತಿಕೇಂದ್ರಗಳೇನು? ಯಾರಿಗೆ ಯಾರ ರಕ್ಷಣೆ? ಎಂಬ ಅನುಮಾನಗಳನ್ನು ಮತ್ತಷ್ಟು ಗಾಢವಾಗಿಸುತ್ತಿದೆ.
ನಾನು SC ಆಗಿದ್ದಕ್ಕೆ ಟಾರ್ಗೆಟ್
https://youtu.be/guVpm_lqIRs?si=kPEJ149mo5QXefJe
ಇದರ ನಡುವೆ, ವಿದ್ಯಾರ್ಥಿನಿಯನ್ನು ವಿಶಿಷ್ಟ ಸಾಧನೆಯಾದರೂ ಘಟಿಕೋತ್ಸವ ವೇದಿಕೆಗೆ ಬರಲು ಅವಕಾಶವನ್ನೇ ನಿರಾಕರಿಸಿದ್ದ ವಿವಿಯ ನಿರ್ಧಾರ ಇನ್ನೂ ವಿವಾದದ ಕೇಂದ್ರಬಿಂದು. ಮೂತರ್ಿ ಅವರ ವಿರುದ್ಧದ ಆರೋಪವೇ ಒಂದೇ ಕಾರಣವಾಗಿದ್ದರೆ ಉದ್ಘೋಷಣೆಯ ದಿನ ರಾಜ್ಯಪಾಲರಿಂದ ಪದವಿ ಸ್ವೀಕರಿಸುವ ಹಕ್ಕನ್ನು ಕಿತ್ತುಕೊಂಡವರು ಯಾರು? ಆ ನಿರ್ಧಾರ ಮಾಡಿದವರ ವಿರುದ್ಧ ಸಿಂಡಿಕೇಟ್ ಈಗ ಯಾವ ಕ್ರಮ ಕೈಗೊಳ್ಳುತ್ತದೆ ಎಂಬುದು ಕಾತರದ ಪ್ರಶ್ನೆ.
ವಿವಿ ಭವಿಷ್ಯದಲ್ಲಿ ದಲ್ಲಾಳಿತನದಂತೆ ವರ್ತಿಸುವ ಅಂಶಗಳನ್ನು ಅಳಿಸಿ, ತಪ್ಪಿತಸ್ಥರು ಯಾರೇ ಆಗಿರಲಿ ನಿಷ್ಪಕ್ಷಪಾತ ಕ್ರಮ ತೆಗೆದುಕೊಳ್ಳಬೇಕು ಎಂಬ ಒತ್ತಡ ಈಗ ಮತ್ತಷ್ಟು ಬಲಗೊಳ್ಳುತ್ತಿದೆ.

ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ತನ್ನ ಹೆಸರಿನಲ್ಲಿ ಹೊತ್ತಿರುವ ರಾಣಿಯ ಪರಂಪರೆ, ಧೈರ್ಯ, ಮತ್ತು ನ್ಯಾಯಬುದ್ಧಿಗೆ ತಕ್ಕಂತೆ ನಡೆದುಕೊಳ್ಳುವ ಹೊಣೆಗಾರಿಕೆಯನ್ನು ಈ ದಶೆಯಲ್ಲಿ ತಪ್ಪಿಸಲು ಸಾಧ್ಯವಿಲ್ಲ.
ಸಿಂಡಿಕೇಟ್ನ ನಿನ್ನೆದಿನದ ನಿರ್ಧಾರ ‘ಎಚ್ಚರಿಕೆ ಗಂಟೆ’—ಇನ್ನು ಮುಂದೆ ಅಡಗಿಸುವುದಕ್ಕೂ, ತಪ್ಪು ಮುಚ್ಚಿಹಾಕುವುದಕ್ಕೂ ಅವಕಾಶವಿಲ್ಲ ಎಂಬ ಸಂದೇಶವನ್ನು ನೀಡಿದೆಯೇ? ಎಂಬುದನ್ನು ಕಾದು ನೋಡಬೇಕಿದೆ

