ಸಂಭ್ರಮ ಮಾಡೋದು ತಪ್ಪಲ್ಲ…
ಆದ್ರೆ ಕುಡಿದು ಸ್ಟೀರಿಂಗ್ ಹಿಡಿದರೆ
ಹಣವೂ ಹೋಗುತ್ತೆ – ಲೈಸೆನ್ಸೂ ಹೋಗುತ್ತೆ – ಸಮಸ್ಯೆಯೂ ಶುರು
ಹೊಸ ವರ್ಷಕ್ಕೆ ಗ್ಲಾಸ್ ಎತ್ತೋ ಮೊದಲು…
ಸ್ಟೀರಿಂಗ್ ಬಿಡಿ – ಸುರಕ್ಷಿತವಾಗಿ ಮನೆ ಸೇರುವುದನ್ನೇ ಆರಿಸಿ
ಕ್ಲಬ್ ರೋಡ್, ರೇಲ್ವೆ ಸ್ಟೇಶನ್ ರಸ್ತೆ, ಗ್ರಾಮೀಣ ಪ್ರದೇಶದ ಸಾಂಬ್ರಾ, ಹಿಂಡಲಗಾ ಬಳಿ ದಾಬಾಗಳ ಮುಂದೆ ಪೊಲೀಸ್ ಕಾವಲು ಪಕ್ಕಾ.
ಗೋವಾವೇಸ್, ಶಹಾಪುರ ಮಾರ್ಗದಲ್ಲಿರುವ ಬಾರ್ ಮೇಲೆ ವಿಶೇಷ ಕಣ್ಣು.
ಬೆಳಗಾವಿ:
ಹೊಸ ವರ್ಷದ ಸಂಭ್ರಮದ ಹೆಸರಿನಲ್ಲಿ ಕುಡಿದು ವಾಹನ ಚಲಾಯಿಸುವವರ ಮೇಲೆ ಈ ಬಾರಿ ಬೆಳಗಾವಿ ಪೊಲೀಸರು ‘ಝಿರೋ ಟಾಲರೆನ್ಸ್’ ನೀತಿ ಜಾರಿಗೊಳಿಸಿದ್ದಾರೆ. ಡಿಸೆಂಬರ್ 31ರ ಮಧ್ಯರಾತ್ರಿಯಿಂದಲೇ ನಗರದ ಎಲ್ಲಾ ಬಾರ್, ಪಬ್, ಕ್ಲಬ್, ರೆಸಾರ್ಟ್ ಹಾಗೂ ಪಾರ್ಟಿ ನಡೆಯುವ ಸ್ಥಳಗಳ ಮುಂದೆ ಪೊಲೀಸರ ಕಣ್ಗಾವಲು ಇರುತ್ತದೆ.
ಕುಡಿದು ಹೊರಬಂದರೆ… ಅಷ್ಟೇ! ₹10,000 ದಂಡ + ಮೂರು ತಿಂಗಳ ಲೈಸೆನ್ಸ್ ರದ್ದು ಗ್ಯಾರಂಟಿ.
ಬಾರ್ ಗೇಟ್ಗಳಲ್ಲೇ ‘ಪೊಲೀಸ್ ಬಲೆ’
ಈ ಬಾರಿ ರಸ್ತೆಯಲ್ಲಿ ಅಲ್ಲ, ನೇರವಾಗಿ ಬಾರ್ಗಳ ಗೇಟ್ ಮುಂದೆ ಪೊಲೀಸರ ತಂಡ ನಿಂತಿರುತ್ತದೆ. ಆಯಾ ಠಾಣಾ ವ್ಯಾಪ್ತಿಯ ಸಿಬ್ಬಂದಿಗೆ ಕುಡಿದು ಹೊರಬರುವವರನ್ನು ಹಿಡಿದು ದಂಡ ಹಾಕುವ ನೇರ ಆದೇಶ ನೀಡಲಾಗಿದೆ.

ಸಾಂದರ್ಭಿಕ ಚಿತ್ರ
“12 ಗಂಟೆಗೆ ಮುನ್ನ ಸಿಕ್ಕರೂ ತಪ್ಪಿಸಿ ಕೊಳ್ಳುವಂತಿಲ್ಲ” ದಂಡ ಪಕ್ಕಾ..
ಸರ್ಕಾರದ ‘ಟಾರ್ಗೆಟ್’ – ದಂಡ ಸಂಗ್ರಹಕ್ಕೆ ಒತ್ತಡ
ಈ ಕಠಿಣ ಕ್ರಮದ ಹಿಂದೆ ಮತ್ತೊಂದು ಗಂಭೀರ ಸಂಗತಿ ಇದೆ.
ಇಂತಿಷ್ಟು ಮೊತ್ತದ ದಂಡ ಸಂಗ್ರಹಿಸಲೇಬೇಕು ಎಂಬ ಟಾರ್ಗೆಟ್ ಅನ್ನು ಸರ್ಕಾರವೇ ಪೊಲೀಸರಿಗೆ ನೀಡಿದೆ ಎನ್ನುವ ಮಾಹಿತಿ ಬೆಳಕಿಗೆ ಬಂದಿದೆ.
ಹೀಗಾಗಿ ಈ ಬಾರಿ ಕುಡಿಕರ ಮೇಲೆ ಯಾವುದೇ ಸಡಿಲಿಕೆ ಇಲ್ಲ – ದಂಡ ಹಾಕಲೇಬೇಕು ಎಂಬ ಒತ್ತಡ ಪೊಲೀಸರ ಮೇಲಿದೆ.

ರಸ್ತೆ ತಡೆ, ಬ್ರೀತ್ ಅನಾಲೈಸರ್, ಚೆಕ್ಪೋಸ್ಟ್
ನಗರದ ಎಲ್ಲಾ ಪ್ರಮುಖ ರಸ್ತೆ, ವೃತ್ತಗಳು, ಫ್ಲೈಓವರ್ಗಳ ಬಳಿ
ಬ್ರೀತ್ ಅನಾಲೈಸರ್,
ವಾಹನ ತಪಾಸಣೆ,
ಅಚ್ಚರಿ ಚೆಕ್ಪೋಸ್ಟ್
ಎಲ್ಲವೂ ಫುಲ್ ಆಕ್ಟಿವ್.
ಮದ್ಯಪಾನ ಮಾಡಿ ಬೈಕ್ ಅಥವಾ ಕಾರು ಚಲಾಯಿಸಿದರೆ ಮಾತ್ರವಲ್ಲ, ಕುಡಿದು ಗಲಾಟೆ ಮಾಡಿದರೂ ಪ್ರಕರಣ ಪಕ್ಕಾ.

