ಬೆಳಗಾವೀಲಿ ಖನಿಜ ಲೂಟಿ – ಮೌನವೇ ದೊಡ್ಡ ಆರೋಪ..!

ಬೆಳಗಾವಿ ಲ್ಯಾಟರೈಟ್ ಲೂಟಿ..

ಸರ್ಕಾರದ ಕಣ್ಣುಮುಂದೆ ಖನಿಜ ಲೂಟಿ – ಮೌನವೇ ದೊಡ್ಡ ಆರೋಪ.

ಪರವಾನಗಿ ಒಂದು, ಗಣಿಗಳು ನಾಲ್ಕು – ಲ್ಯಾಟರೈಟ್ ಮಾಫಿಯಾದ ಭೀಕರ ಆಟ”

ದಾಳಿಯ ನಾಟಕ, ದಂಧೆಯ ವಾಸ್ತವ – ಸರ್ಕಾರದ ಕಣ್ಣುಮುಂದೆ ಲ್ಯಾಟರೈಟ್ ದೋಚಾಟ

ಕಳ್ಳತನದಿಂದ ಸಿಮೆಂಟ್ ಕಾರ್ಖಾನೆಗೆ – ಬೆಳಗಾವಿಯಿಂದ ಹರಿಯುತ್ತಿರುವ ಖನಿಜ ರಕ್ತಧಾರೆ

ಕಾನೂನು ಕೈಕಟ್ಟು, ಮಾಫಿಯಾ ಕೈದೊಡ್ಡು – ಬೆಳಗಾವಿಯ ನೆಲವನ್ನು ನುಂಗುತ್ತಿರುವ ದಂಧೆ”

ಲ್ಯಾಟರೈಟ್ ಲೂಟಿ: ಅಧಿಕಾರಿಗಳ ರಕ್ಷಣೆ, ಜನರ ಸಂಪತ್ತಿನ ಹರಣ

ಬೆಳಗಾವಿ:
ಬೆಳಗಾವಿ ಗ್ರಾಮೀಣ ಕ್ಷೇತ್ರದ ಇನಾಮ್ ಬಡಸ್ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಕ್ರಮ ಲ್ಯಾಟರೈಟ್ ಗಣಿಗಾರಿಕೆ ಈಗ ಸರಳ ಕಾನೂನು ಉಲ್ಲಂಘನೆಯಲ್ಲ. ಇದು ಸಂಘಟಿತ ಖನಿಜ ಮಾಫಿಯಾ, ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ರಾಜಕೀಯ ರಕ್ಷಣೆ ಸೇರಿದ ಕಠೋರ ಸತ್ಯವಾಗಿದೆ..
ಸಿಮೆಂಟ್ ಉದ್ಯಮಕ್ಕೆ ಅತ್ಯಗತ್ಯವಾದ ಲ್ಯಾಟರೈಟ್‌ನ್ನು ಪರವಾನಗಿ ಇಲ್ಲದ ಜಾಗಗಳಲ್ಲಿ ಜೆಸಿಬಿ–ಲಾರಿಗಳ ಸಾಲಿನಲ್ಲಿ ದಿನ–ರಾತ್ರಿ ವ್ಯತ್ಯಾಸವಿಲ್ಲದೆ ತೆಗೆದು ಸಾಗಿಸಲಾಗುತ್ತಿದೆ.
ಇದರೊಂದಿಗೆ ಸರ್ಕಾರದ ಕೋಟ್ಯಂತರ ರೂಪಾಯಿ ಮೌಲ್ಯದ ಸಂಪತ್ತು ಖಾಸಗಿ ಜೇಬಿಗೆ ಹರಿದು ಹೋಗುತ್ತಿದೆ.

ದಾಳಿ ನಡೆದರೂ ಗಣಿಗಾರಿಕೆ ನಿಲ್ಲದೇಕೆ?
ಸಾಮಾಜಿಕ ಕಾರ್ಯಕರ್ತ ರಾಹುಲ್ ಸಿದ್ದಪ್ಪ ಅವನಚೆ ಅವರು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಿಗೆ ದೂರು ನೀಡಿದ ನಂತರ ಗಣಿ ಮತ್ತು ಭೂವಿಜ್ಞಾನ ಇಲಾಖೆ ದಾಳಿ ನಡೆಸಿದೆ.
ಆದರೆ ವಾಸ್ತವ ಬೇರೆ:
ದಾಳಿ ಮುಗಿದ ಅದೇ ರಾತ್ರಿ ಜೆಸಿಬಿ ಮತ್ತೆ ಕೆಲಸ ಶುರು ಮಾಡಿದೆ ಎನ್ನುವುದು ಗ್ರಾಮಸ್ಥರ ಆರೋಪ.
ದಾಳಿ ಸಂದರ್ಭದಲ್ಲಿ .ಒಂದು ಲಾರಿಯೂ ಜಪ್ತಿ ಆಗಿಲ್ಲ.
ಒಂದು ಯಂತ್ರವೂ ಸೀಜ್ ಆಗಿಲ್ಲ. ಒಂದು ಲೋಡ್ ಅಲ್ಲ ಒಂದು ಮುಷ್ಢಿಯಷ್ಡು ಲ್ಯಾಟರೈಟ್ ಕೂಡ ವಶಪಡಿಸಿಕೊಳ್ಳಲಾಗಿಲ್ಲ.
ಇಂತಹ ದಾಳಿಯನ್ನು ಕಾನೂನು ಕ್ರಮ ಎನ್ನಬಹುದೇ ಎನ್ನುವ ಚರ್ಚೆಗಳು ನಡೆದಿವೆ.

ಒಂದು ಪರವಾನಗಿ – ನಾಲ್ಕು ಗಣಿಗಳು..!
ಗುತ್ತಿಗೆದಾರಗೆ ಮಾರ್ಚ್ 2025 ಇನಾಮ್ ಬಡಸ್
12 ಎಕರೆ ಜಮೀನಿನಲ್ಲಿ 2.55 ಲಕ್ಷ ಮೆಟ್ರಿಕ್ ಟನ್ ತೆಗೆಯಲು ಅಷ್ಟೇ ಪರವಾನಗಿ ಇದೆ.
ಆದರೆ ಈಗ ಅದೇ ಗ್ರಾಮದಲ್ಲಿ ಮೂರು ಅನಧಿಕೃತ ಜಾಗಗಳಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ.

ಇದು ನೇರವಾಗಿ ಸರ್ಕಾರಿ ಸಂಪತ್ತಿನ ಕಳ್ಳತನ ಎನ್ನಲಾಗುತ್ತದೆ.

ಕಳ್ಳತನದ ಖನಿಜ – ಕಾರ್ಖಾನೆಗಳ ಕಡೆಗೆ..
ಮೂಲಗಳ ಪ್ರಕಾರ, ಅಕ್ರಮ ಲ್ಯಾಟರೈಟ್
ಕಲಬುರಗಿ, ಆಂಧ್ರದ ಸಿಮೆಂಟ್ ಕಾರ್ಖಾನೆಗಳಿಗೆ, 15–20 ಪೊಲೀಸ್ ಠಾಣಾ ವ್ಯಾಪ್ತಿಗಳ ಮೂಲಕ ಯಾವುದೇ ತಪಾಸಣೆ ಇಲ್ಲದೆ ಸಾಗುತ್ತಿದೆ.
ಇಷ್ಟು ದೊಡ್ಡ ಮಟ್ಟದ ಸಾಗಣೆ

ಪೊಲೀಸ್–ಇಲಾಖೆಯ ಸಹಕಾರವಿಲ್ಲದೆ ಹೇಗೆ ಸಾಗಾಟ ಮಾಡಲು ಸಾಧ್ಯ ಎನ್ನುವುದು ಅನೇಕ ಸಂಶಯಕ್ಕೆ ಎಡೆ ಮಾಡಿಕೊಡುತ್ತಿದೆ.

ಕಾನೂನು ಏನು ಹೇಳುತ್ತದೆ – ಇಲ್ಲಿ ಏನು ನಡೆದಿದೆ?
ಕಾನೂನು ಪ್ರಕಾರ
ವಾಹನ ಜಪ್ತಿ, ಯಂತ್ರೋಪಕರಣ ಸೀಜ್, ಖನಿಜ ವಶ
ಮತ್ತು ಬಂಧನ ಕಾರ್ಯ ನಡೆಯಬೇಕು.
ಆದರೆ ಇಲ್ಲಿ ನಡೆದದ್ದು ಬೇರೆ. ಗುತ್ತಿಗೆದಾರನಿಗೆ ಕೇವಲ “ಎಚ್ಚರಿಕೆ”, ಬಡ ರೈತರಿಗೆ ನೋಟಿಸ್
ಇದು ಅನುಷ್ಠಾನವಲ್ಲ – ಮೌನದ ರಕ್ಷಣೆ ಎನ್ನಲಾಗುತ್ತಿದೆ.

ಅಕ್ರಮವನ್ನು ‘ಕಾನೂನು’ ಮಾಡುವ ಕುತಂತ್ರ
ಗಂಭೀರ ಆರೋಪ ಏನೆಂದರೆ,
ಅಕ್ರಮವಾಗಿ ತೆಗೆಯಲಾದ ಲ್ಯಾಟರೈಟ್ ಅನ್ನು
ಪರವಾನಗಿ ಪಡೆದ ಜಾಗಕ್ಕೆ ಸುರಿದು, ಅದನ್ನೇ ಕಾನೂನುಬದ್ಧ ಖನಿಜವೆಂದು ತೋರಿಸುವ ವೈಟ್‌ವಾಷ್ ತಂತ್ರ ನಡೆಯುತ್ತಿದೆ.
ಇದು ಸಾಬೀತಾದರೆ, ಇದು ಕೇವಲ ದಂಧೆ ಅಲ್ಲ –
ಇದು ವ್ಯವಸ್ಥೆಯ ಭ್ರಷ್ಟತೆಯ ದಾಖಲೆ ಎನ್ನಬಹುದು.

ಇನಾಮ್ ಬಡಸ್‌ನಲ್ಲಿ ನಡೆಯುತ್ತಿರುವ ಈ ಲ್ಯಾಟರೈಟ್ ಲೂಟಿಗೆ ಯಾರು ಹೊಣೆ?ಗುತ್ತಿಗೆದಾರನಾ? ಅಥವಾ
ಮೌನವಾಗಿರುವ ಅಧಿಕಾರಿಗಳಾ?
ರಕ್ಷಣೆ ನೀಡುತ್ತಿರುವ ರಾಜಕೀಯ ಶಕ್ತಿಯಾ?
ಸರ್ಕಾರ ಬ್ರೇಕ್ ಹಾಕುತ್ತದೆಯೇ –
ಅಥವಾ ಬೆಳಗಾವಿಯ ನೆಲ ಹೀಗೆ ಖಾಲಿಯಾಗುತ್ತಲೇ ಹೋಗುತ್ತದೆಯೇ? ಕಾದು ನೋಡಬೇಕು.

Leave a Reply

Your email address will not be published. Required fields are marked *

error: Content is protected !!