ಬೆಳಗಾವಿಯಲ್ಲಿ ಹೊಂದಾಣಿಕೆ ರಾಜಕಾರಣ.
ಪೊಲೀಸ್ ತಪ್ಪು ಸಾಬೀತಾದರೂ ಶಿಕ್ಷೆ ಇಲ್ಲ!**
ಪೊಲೀಸರ ಕರ್ತವ್ಯಲೋಪದ ಮೇಲೆ ಮೌನದ ರಾಜಕೀಯ ಛತ್ರ.
ಜನಪ್ರತಿನಿಧಿಗಳ ನಿಶ್ಶಬ್ದ ಒಪ್ಪಿಗೆಗೆ ಜನರು ಬೆಚ್ಚಿಬಿದ್ದಿದ್ದಾರೆ.
ಹೈಕೋರ್ಟ ಆದೇಶಕ್ಕೂ ಡೋಂಟಕೇರ್
ಇ ಬೆಳಗಾವಿ ವಿಶೇಷ*
ಬೆಳಗಾವಿ:
ಬೆಳಗಾವಿಯಲ್ಲಿ ಇಂದು ನಡೆಯುತ್ತಿರುವುದು ರಾಜಕೀಯ ಅಲ್ಲ, ಇದು ಒಂದು ಹೊಂದಾಣಿಕೆಯ ವ್ಯವಸ್ಥೆ.
ಮೇಲ್ಮೈಯಲ್ಲಿ ಮಾತ್ರ ವಿರೋಧ, ಒಳಗಿಂದ ಒಳಗೆ ಮೌನ ಒಪ್ಪಂದ. ಪರಿಣಾಮವಾಗಿ ಆಡಳಿತಾತ್ಮಕ ತಪ್ಪುಗಳು, ಪೊಲೀಸ್ ಲೋಪಗಳು, ಮಕ್ಕಳ ಮೇಲಿನ ಅಪರಾಧಗಳೂ ಸಹ ಕ್ರಮವಿಲ್ಲದೇ ಮುಚ್ಚಿಹೋಗುವ ಸ್ಥಿತಿ ನಿರ್ಮಾಣವಾಗಿದೆ.
ಇದಕ್ಕೆ ಇತ್ತೀಚಿನ ಎರಡು ಪ್ರಕರಣಗಳೇ ಸಾಕ್ಷಿ — ಎಪಿಎಂಪಿ ಠಾಣೆ ವ್ಯಾಪ್ತಿಯ ಪೋಕ್ಸೋ ಪ್ರಕರಣ ಮತ್ತು ಬೆನ್ನಾಳಿ ಗ್ಯಾಮಲಿಂಗ್ ದಾಳಿ.

**ಪೋಕ್ಸೋ ಪ್ರಕರಣ:
ಹೈಕೋರ್ಟ್ ಗಮನ ಸೆಳೆದರೂ ಸರ್ಕಾರ ಕಣ್ಣಿದ್ದು ಕುರುಡರಂತೆ ಇದೆ*
ಎಪಿಎಂಪಿ ಠಾಣೆ ವ್ಯಾಪ್ತಿಯಲ್ಲಿ ನಡೆದ ಪೋಕ್ಸೋ ಪ್ರಕರಣ ಮಾಧ್ಯಮಗಳಲ್ಲಿ ಬಹಿರಂಗವಾದ ನಂತರ,
ಕರ್ನಾಟಕ ಹೈಕೋರ್ಟ್ಮ, ಮಕ್ಕಳ ಹಕ್ಕು ರಕ್ಷಣಾ ಆಯೋಗ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡವು.
ತನಿಖೆಯ ಬಳಿಕ ಮೂರು ಮಂದಿ ಪೊಲೀಸ್ ಅಧಿಕಾರಿಗಳಿಂದಲೇ ಗಂಭೀರ ಕರ್ತವ್ಯಲೋಪ ನಡೆದಿದೆ ಎಂಬುದು ಸ್ಪಷ್ಟವಾಗಿ ದಾಖಲೆಗೊಂಡಿತು. ಸಂಬಂಧಪಟ್ಟ ಇಲಾಖೆಗೆ ವರದಿಯೂ ರವಾನೆಯಾಯಿತು.
ಆದರೆ ಇಲ್ಲಿಂದಲೇ ಆರಂಭವಾಗುತ್ತದೆ ನಿಜವಾದ ಪ್ರಶ್ನೆ.
*ಅಮಾನತು ಇಲ್ಲ
ಇಲಾಖಾ ತನಿಖೆ ಇಲ್ಲ
ಹೊಣೆಗಾರಿಕೆ ನಿಗದಿ ಇಲ್ಲ* ಬರೀ ರೂಲ್ 7 ಕೊಟ್ಟು ಕೈ ತೊಳೆದುಕೊಳ್ಳುವ ಕೆಲಸ ಆಯಿತು. ಮಕ್ಕಳ ವಿಷಯದಲ್ಲಿ ಗಂಭೀರ ತಪ್ಪು ಮಾಡಿದವರನ್ನು ತಕ್ಷಣೆ ಮಾಡಲಾಗುತ್ತಿದೆ ಎಂದರೆ ಬೆಳಗಾವಿ ವ್ಯವಸ್ಥೆ ಯಾವ ಮಟ್ಟಕ್ಕೆ ಬಂದು ನಿಂತಿದೆ. ವಿರೋಧ ಪಕ್ಷ ಯಾವ ಮಟ್ಟಕ್ಕೆ ಹೊಂದಾಣಿಕೆ ಮಾಡಿಕೊಂಡಿರಬಹುದು ಎನ್ನುವುದನ್ನು ಊಹಿಸಿ.
ಮಕ್ಕಳ ಮೇಲಿನ ಅಪರಾಧ ಪ್ರಕರಣದಲ್ಲಿ ಕರ್ತವ್ಯಲೋಪ ಸಾಬೀತಾದರೂ ಒಬ್ಬ ಅಧಿಕಾರಿಗೆ ಶಿಕ್ಷೆಯಿಲ್ಲ ಎನ್ನುವುದು ಆಡಳಿತದ ದೌರ್ಬಲ್ಯವಲ್ಲದೆ ಮತ್ತೇನು?

*ಮಾಧ್ಯಮಗಳ ಪ್ರಶ್ನೆ, ಜನಪ್ರತಿನಿಧಿಗಳ ಮೌನ*
ಈ ಪ್ರಕರಣದಲ್ಲಿ ಮಾಧ್ಯಮಗಳು ಸತತವಾಗಿ ಪ್ರಶ್ನೆ ಎತ್ತಿದವು. ಆದರೆ, ಆಡಳಿತ ಪಕ್ಷದ ಶಾಸಕರೂ ಇಲ್ಲ
ವಿರೋಧ ಪಕ್ಷದ ಶಾಸಕರೂ ಇಲ್ಲ ಒಬ್ಬರೂ ಜನಪ್ರತಿನಿಧಿಗಳು ಸಾರ್ವಜನಿಕವಾಗಿ ಧ್ವನಿ ಎತ್ತಲಿಲ್ಲ.
ಇದು ನಿರ್ಲಕ್ಷ್ಯವಲ್ಲ — ಇದು ಉದ್ದೇಶಪೂರ್ವಕ ಮೌನ ಎಂಬ ಆರೋಪಗಳು ಕೇಳಿಬರುತ್ತಿವೆ.

ಬೆನ್ನಾಳಿ ಗ್ಯಾಮಲಿಂಗ್ ದಾಳಿ:*
ಆರೋಪ ಗಂಭೀರ, ಕ್ರಮ ಕಾಣೆಯಾಗಿದೆ** ಇನ್ನೊಂದು ಕಡೆ, ಬೆನ್ನಾಳಿಯಲ್ಲಿ ನಡೆದ ಗ್ಯಾಮಲಿಂಗ್ ದಾಳಿ ಪ್ರಕರಣದಲ್ಲೂ ಪೊಲೀಸರ ಮೇಲೆ ಗಂಭೀರ ಆರೋಪಗಳು ಕೇಳಿಬಂದವು. ಮೇಲ್ನೋಟಕ್ಕೆ ತಪ್ಪು ನಡೆದಿದೆ ಎಂಬುದು ಸ್ಪಷ್ಟವಾಗಿದ್ದರ ಕ್ರಮ ಶೂನ್ಯ.
ಇಲ್ಲಿಯೂ ಅದೇ ಚಿತ್ರ — ತಪ್ಪು ಕಂಡರೂ ಯಾರೂ ಹೊಣೆ ಹೊತ್ತಿಲ್ಲ.
ಮಾತಿನಲ್ಲಿ ವಿರೋಧ, ಕಾರ್ಯದಲ್ಲಿ ಹೊಂದಾಣಿಕೆ
ಬೆಳಗಾವಿಯ ರಾಜಕೀಯದಲ್ಲಿ ಈಗ ಕಾಣಿಸುತ್ತಿರುವುದು ನೀವು ನಮ್ಮನ್ನ ಕೇಳಬೇಡಿ… ನಾವು ನಿಮ್ಮನ್ನ ಕೇಳಲ್ಲ”
ಎಂಬ ಅಘೋಷಿತ ಒಪ್ಪಂದ.
ಪೊಲೀಸ್ ಇಲಾಖೆ ಪ್ರಶ್ನೆಗೆ ಒಳಪಟ್ಟಾಗ,
ಅಧಿಕಾರಿಗಳು ಮತ್ತು ರಾಜಕೀಯ ನಾಯಕರು ಪರಸ್ಪರ ರಕ್ಷಣೆಗಿಳಿಯುವಂತೆ ಕಾಣಿಸುತ್ತಿದೆ.
—

ಜನರ ಪ್ರಶ್ನೆಗಳು:*
ಹೈಕೋರ್ಟ್ ಸೂಚನೆಗಳಿಗೂ ಬೆಲೆ ಇಲ್ಲವೇ?
ಮಕ್ಕಳ ಹಕ್ಕು ರಕ್ಷಣಾ ಆಯೋಗದ ವರದಿಗಳು ಕಾಗದಕ್ಕಷ್ಟೇನಾ?
ತಪ್ಪು ಮಾಡಿದ ಅಧಿಕಾರಿಗಳನ್ನು ರಕ್ಷಿಸುವುದು ಯಾರ ಹೊಣೆ?
ಜನಪ್ರತಿನಿಧಿಗಳು ಯಾರ ಪರ ನಿಂತಿದ್ದಾರೆ?
ನ್ಯಾಯ ವ್ಯವಸ್ಥೆಯ ಮೇಲೆ ನಂಬಿಕೆ ಕುಸಿಯುತ್ತಿದೆ
ತಪ್ಪು ಸಾಬೀತಾದರೂ ಕ್ರಮವಿಲ್ಲದಿದ್ದರೆ,
ಅಪರಾಧಗಳು ಗಂಭೀರವಾದರೂ ಶಿಕ್ಷೆಯಿಲ್ಲದಿದ್ದರೆ,
ಜನರ ಪರವಾಗಿ ಮಾತನಾಡಬೇಕಾದವರು ಮೌನ ವಹಿಸಿದರೆ? —
ಇದು ಕೇವಲ ಆಡಳಿತ ವೈಫಲ್ಯವಲ್ಲ, ಇದು ನ್ಯಾಯ ವ್ಯವಸ್ಥೆಯ ಮೇಲಿನ ನಂಬಿಕೆಗೆ ಧಕ್ಕೆ.
ಬೆಳಗಾವಿಯ ಹೊಂದಾಣಿಕೆ ರಾಜಕಾರಣ ಇಂದು ಜನರ ಕಣ್ಣಲ್ಲಿ ಅನ್ಯಾಯವನ್ನು ಮುಚ್ಚಿಹಾಕುವ ವ್ಯವಸ್ಥೆಯಾಗಿ ಕಾಣುತ್ತಿದೆ.

