ಕೋರ್ಟ್ ಆವರಣದಲ್ಲೇ ದರ್ಪ!

ಕೊಲೆ ಕೇಸಿನ ದೋಷಿಗಳಿಂದ ಕ್ಯಾಮೆರಾಮನ್‌ಗಳ ಮೇಲೆ ದರ್ಪ. ಅವಾಚ್ಯ ನಿಂದನೆ, ಕ್ಯಾಮೆರಾ ತಳ್ಳಾಟ;

ಬೆಳಗಾವಿ:
ಕೊಲೆ ಪ್ರಕರಣದಲ್ಲಿ ದೋಷಿ ಎಂದು ತೀರ್ಪು ಬಂದ ಬೆನ್ನಲ್ಲೇ, ಬೆಳಗಾವಿಯ 2ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ಆವರಣದಲ್ಲೇ ದೋಷಿಗಳ ದರ್ಪ ಸಿಡಿದ ಘಟನೆ ಬುಧವಾರ ಸಂಜೆ ಆತಂಕ ಮೂಡಿಸಿತು. ನ್ಯಾಯಾಲಯದಿಂದ ವಾಪಸ್ ಕರೆದುಕೊಂಡು ಹೋಗುವ ವೇಳೆ ಆರೋಪಿಗಳ ದೃಶ್ಯ ಸೆರೆಹಿಡಿಯಲು ಮುಂದಾದ ಟಿವಿ ಕ್ಯಾಮೆರಾಮನ್‌ಗಳ ಮೇಲೆ ದರ್ಪ ಮೆರೆದ ಘಟನೆ ಮಾಧ್ಯಮ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಪ್ರಕರಣದಲ್ಲಿ ದಡ್ಡಿ ವಿರುದ್ಧ ದೋಷ ಸಾಬೀತಾಗಿದೆ ಎಂಬ ಮಾಹಿತಿ ಹೊರಬಿದ್ದ ತಕ್ಷಣವೇ, ನ್ಯಾಯಾಲಯ ಆವರಣದ ವಾತಾವರಣ ಉದ್ವಿಗ್ನಗೊಂಡಿತು. ಇದೇ ವೇಳೆ ದೃಶ್ಯ ಚಿತ್ರೀಕರಿಸುತ್ತಿದ್ದ ಕ್ಯಾಮೆರಾಮನ್‌ಗಳತ್ತ ಮುಖ ಮಾಡಿದ್ದ ದೋಷಿಗಳಾದ ಆರೋಪಿಗಳು, ಕ್ಯಾಮೆರಾವನ್ನು ತಳ್ಳಿಹಾಕಲು ಯತ್ನಿಸಿದರೆಂಬ ಆರೋಪ ಕೇಳಿಬಂದಿದೆ.

ಅಷ್ಟೇ ಅಲ್ಲ, ಕರ್ತವ್ಯ ನಿರ್ವಹಿಸುತ್ತಿದ್ದ ಮಾಧ್ಯಮ ಪ್ರತಿನಿಧಿಗಳ ಮೇಲೆ ಅವಾಚ್ಯ ಶಬ್ಧಗಳಿಂದ ನಿಂದನೆ ಕೂಡ ನಡೆದಿರುವುದು ಘಟನೆಯ ಗಂಭೀರತೆಯನ್ನು ಹೆಚ್ಚಿಸಿದೆ.
ಶಿಕ್ಷೆಗೆ ಒಳಗಾದ ಆರೋಪಿಗಳನ್ನು ಪೊಲೀಸ್‌ ಭದ್ರತೆಯಲ್ಲಿ ಕರೆದೊಯ್ಯುವ ಸಂದರ್ಭದಲ್ಲೇ ಇಂತಹ ಅಸಭ್ಯ ವರ್ತನೆ ನಡೆದಿದೆ. .

Leave a Reply

Your email address will not be published. Required fields are marked *

error: Content is protected !!