ಸುಪ್ರೀಂ ಕೋರ್ಟ್ ನೋಟಿಸ್ ಧರ್ಮಾಂಧರಿಗೆ ಎಚ್ಚರಿಕೆಯ ಗಂಟೆ ಪ್ರಭು ಚವ್ಹಾಣ
ಸನಾತನ ಧರ್ಮದ ನಿರ್ಮೂಲನೆ ಬಗ್ಗೆ ಮಾತನಾಡಿ ಸಮಾಜದಲ್ಲಿ ವಿಷ ಬೀಜ ಬಿತ್ತುವ ಧರ್ಮಾಂಧರಿಗೆ ಸುಪ್ರೀಂ ಕೋರ್ಟ್ ನೀಡಿರುವ ನೋಟಿಸ್ ಎಚ್ಚರಿಕೆ ಗಂಟೆ ಎಂದು ಮಾಜಿ ಸಚಿವ ಪ್ರಭು ಚೌಹಾಣ್ ಬಣ್ಣಿಸಿದ್ದಾರೆ. ಸನಾತನ ಧರ್ಮದ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ತಮಿಳುನಾಡಿನ ಸರ್ಕಾರದ ಕ್ರೀಡಾ ಸಚಿವ ಉದಯನಿಧಿ ಸ್ಟಾಲಿನ್ ಅವರಿಗೆ ಸುಪ್ರೀಂ ಕೋರ್ಟ್ ನೋಟಿಸ್ ಜಾರಿ ಮಾಡಿರುವುದನ್ನು ಅವರು ಸ್ವಾಗತಿಸಿದ್ದಾರೆ.
ಒಂದು ಕೋಮಿನ ಭಾವನೆಗೆ ಧಕ್ಕೆ ತರುವಂತಹ ಹೇಳಿಕೆಯನ್ನು ಯಾರೇ ನೀಡಿದರು ಅದು ಸಮಾಜವಾದ ಆರೋಗ್ಯವನ್ನು ಹಾಳು ಮಾಡಲು ಮುನ್ನೋಡಿ ಬರೆದಂತೆ. ಅಂತಹದರಲ್ಲಿ ಸರಕಾರ ನಡೆಸುವವರೇ ಈ ತರಹದ ಹೇಳಿಕೆ ನೀಡುವುದು ಶಿಕ್ಷಾರ್ಹ ಎಂದು ಅವರು ಪ್ರತಿಕ್ರಿಸಿದ್ದಾರೆ.
ಸುಪ್ರೀಂಕೋರ್ಟ್ ನೋಟಿಸ್ ನೀಡಿರುವುದು ಇಂತಹ ದರ್ಮವಿರೋಧಿ ಹೇಳಿಕೆ ನೀಡುವವರಿಗೆ ನಾಲಿಗೆಯನ್ನು ಹಿಡಿತದಲ್ಲಿಟ್ಟುಕೊಂಡು ಮಾತನಾಡುವಂತೆ ಮಾಡಿದೆ.
ಬಿಟ್ಟಿ ಪ್ರಚಾರಕ್ಕಾಗಿ ಮನಬಂದಂತೆ ಹೇಳಿಕೆ ನೀಡಿ ಕೋಮುಸೌಹಾರ್ದತೆಗೆ ಧಕ್ಕೆ ತಂದಿದ್ದು ಘನ ನ್ಯಾಯಲಯವು ಇದರ ಬಗ್ಗೆ ಸೂಕ್ತವಾದ ತನಿಖೆ ನಡೆಸಿ ಕಠಿಣ ಶಿಕ್ಷೆ ವಿಧಿಸಬೇಕು ಮುಂಬರುವ ದಿನಗಳಲ್ಲಿ ಯಾವುದೇ ಧರ್ಮದ ನಿಂದನೆ ಅಥವಾ ಅವಹೇಳನಕಾರಿ ಹೇಳಿಕೆ ನೀಡುವವರಿಗೆ ಲಗಾಮು ಬೀಳಬೇಕು ಎಂದಿದ್ದಾರೆ.
ಧರ್ಮವನ್ನು ಡೆಂಗ್ಯೂ, ಮಲೇರಿಯಾಗೆ ಹೋಲಿಸಿ ನಿರ್ಮೂಲನೆ ಮಾಡಬೇಕೆಂಬ ಹೇಳಿಕೆ ಅವರ ಕೊಳಕು ಮನಸ್ಥಿತಿಯನ್ನು ಬಿಂಬಿಸಿತ್ತು. ಇದರ ವಿರುದ್ಧ ಇಡಿ ದೇಶಾದ್ಯಂತ ಭಾರೀ ವಿರೋಧ ಸಹ ವ್ಯಕ್ತವಾಗಿತ್ತು ಈ ಪ್ರಕರಣದಲ್ಲಿ ಕೋರ್ಟ್ ನೀಡಿರುವ ನೋಟಿಸ್ ಕೋಟ್ಯಾಂತರ ಜನರ ಭಾವನೆಗೆ ಸ್ಪಂದಿಸಿದಂತಾಗಿದೆ. ಅಲ್ಲದೆ ಧರ್ಮದ ಕುರಿತಾಗಿ ವ್ಯಂಗ್ಯವಾಡುವವರಿಗೆ ಪಾಠವಾಗಿದೆ.
ಸನಾತನ ಧರ್ಮ ಯಾರಿಗು ಕೇಡನ್ನು ಬಯಸದೆನೆ ಸರ್ವೇ ಜನಾ ಸುಖಿನೋ ಭವಂತು, ಕೃಣ್ವಂತೊ ವಿಶ್ವಮಾರ್ಯಂ ಎಂಬ ನಂಬಿಕೆಯಡಿಯಲ್ಲಿ ಸಾಗುತ್ತಿದೆ ಎಂದರು.