ಈದ್ ಮಿಲಾದ್ ಅದ್ದೂರಿ ಮೆರವಣಿಗೆ ಭಾವೈಕ್ಯತೆಗೆ ಬೆಳಗಾವಿ ಸಾಕ್ಷಿ
ಬೆಳಗಾವಿ: ಗಡಿನಾಡು ಬೆಳಗಾವಿ ಭಾವೈಕ್ಯತೆಯ ಸಂಗಮ ಎನ್ನುವುದು ಮತ್ತೊಮ್ಮೆ ಇಂದು ಸಾಬೀತಾಯಿತು. ಈ ಬಾರಿ ಗಣೇಶ ವಿಸರ್ಜನೆ ಮತ್ತು ಮುಸ್ಲೀಂರ ಈದ್ ಮಿಲಾದ ಒಂದೇ ದಿನ ಬಂದಿತ್ತು, ಆದರೆ ಮುಸ್ಲೀಂ ಬಾಂಧವರು ತಮ್ಮ ಹಬ್ಬವನ್ನು ಎರಡು ದಿನ ಮುಂದಕ್ಕೆ ಹಾಕಿ ಹಮ್ ಸಬ್ ಭಾಯ್ ಬಾಯ್ ಎನ್ನುವುದನ್ನು ತೋರಿಸಿಕೊಟ್ಟರು,
ಇಂದು ಮುಸ್ಲೀಂರು ಹಬ್ಬರ ಪ್ರಯುಕ್ತ ಅದ್ದೂರಿ ಮೆರವಣಿಗೆ ಹೊರಡಿಸಿದ್ದರು, ಆದರೆ ಎಲ್ಲಿಯೂ ಸಂಚಾರಕ್ಕೆ ಅಡ್ಡಿಯಾಗಲಿಲ್ಲ. ಮೆರವಣಿಗೆ ಸಾಗುವ ಮಾರ್ಗಮಧ್ಯದಲ್ಲಿ ವಾಹನಗಳು ಬಂದರೆ ಅದಕ್ಕೆ ದಾರಿ ಮಾಡಿಕೊಡುವ ಕೆಲಸವನ್ನು ಮಾಡಲಾಗುತ್ತಿತ್ತು, ಬೆಳಗಾವಿ ಉತ್ತರ ಕ್ಷೇತ್ರದ ಹಾಲಿ ಶಾಸಕ ಆಸೀಪ್ ಶೇಠ, ಮಾಜಿ ಶಾಸಕ ಫೀರೋಜ ಶೇಠ್ ಸೇರಿದಂತೆ ಮತ್ತಿತರು ಈ ಸಂಭ್ರಮದಲ್ಲಿ ಭಾಗಿಯಾಗಿದ್ದರು.,