ಸನಾತನ ಧರ್ಮ ರಕ್ಷಣೆಗೆ ಟೊಂಕ ಕಟ್ಟಿ ನಿಂತವರು…!.

ಎಕೆಬಿಎಂಎಸ್ ಅಧ್ಯಕ್ಷ ಅಶೋಕ ಹಾರನಹಳ್ಳಿ ಸನಾತನ ಧರ್ಮದ ಬಗ್ಗೆ ಹೇಳಿದ್ದೇನು?.

ಸನಾತನ ಧರ್ಮ ರಕ್ಷಣೆಗೆ ನಿಂತವರು ಯಾರು ಗೊತ್ತೆ?.

ಆಧ್ಯಾತ್ಮಿಕವಾಗಿ ಒಂದು ರಾಷ್ಟ್ರ ಎಂಬುದನ್ನು ತೋರಿಸಿಕೊಟ್ಟವರು ಶ್ರೀ ಶಂಕರಾಚಾರ್ಯರು.

ಬೆಂಗಳೂರು.

ಇತಿಹಾಸದ ಉದ್ದಕ್ಕೂ ಸನಾತನ ಧರ್ಮದ ಮೇಲೆ ದೇಶದ ಮೇಲೆ ಪರಕೀಯರ ಆಕ್ರಮಣ ನಡೆಯುತ್ತಲೇ ಬಂದಿದೆ.
ಆ ರೀತಿಯ ಆಕ್ರಮಣ ವಾದಾಗಲೆಲ್ಲ ಒಬ್ಬ ಶಿವಾಜಿ, ಒಬ್ಬ ಬಾಜಿರಾವ್ ಭರತ ಭೂಮಿಯ ಹಾಗು ಸನಾತನದ ಧರ್ಮದ ಶ್ರೀ ರಕ್ಷೆಗೆ ಟೊಂಕ ಕಟ್ಟಿ ನಿಂತ ಹಲವಾರು ಪ್ರಸಂಗಗಳಿವೆ.


ಈ ದೇಶವನ್ನು ಹಾಗು ಸನಾತನ ಧರ್ಮವನ್ನು ಪರಕೀಯರು ನಾನಾ ವಿಧವಾಗಿ ಪೀಡಿಸಿ ಹಿಂಸಿಸಿ ನಾಶಗೊಳಿಸುವ ಪ್ರಯತ್ನ ಪಟ್ಟರು. ದೇಶದ ಐಕ್ಯಮತ ಉಳಿದಿರುವುದು ಯಾವ ಒಂದು ರಾಜಕೀಯ ಪ್ರಯತ್ನದಿಂದಲ್ಲ.


ಈ ದೇಶ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಐಕ್ಯಮತದಲ್ಲಿರಲು ಕಾರಣ ನಮ್ಮ ಸನಾತನ ಧರ್ಮ ಮತ್ತು ಸಾಂಸ್ಕೃತಿಕ ಪರಂಪರೆ ಹಾಗು ಮಹಾ ಪುರುಷರ ತಪಸ್ಸಿನಿಂದ. ಈ ದೇಶ ಧಾರ್ಮಿಕವಾಗಿ, ಆಧ್ಯಾತ್ಮಿಕವಾಗಿ ಒಂದು ರಾಷ್ಟ್ರ ಎಂಬುದನ್ನು ತೋರಿಸಿಕೊಟ್ಟವರು ಶ್ರೀ ಶಂಕರಾಚಾರ್ಯರು ಎಂಬುದನ್ನು ಸನಾತನ ಧರ್ಮದ ವಿರುದ್ಧ ಹೇಳಿಕೆ ನೀಡುತ್ತಿರುವವರು ಗಮನಿಸಬೇಕಾದ ಸಂಗತಿ.


ಅದಲ್ಲದೆ ಹಿಂದೆಲ್ಲ ಪರಕೀಯರು ನಮ್ಮ ಮೇಲೆ ನಮ್ಮ ಸಂಸ್ಕೃತಿಯ ಆಚಾರ ವಿಚಾರಗಳ ಮೇಲೆ ದಾಳಿ ನಡೆಸುತ್ತಿದ್ದರು. ಆದರೆ ವಿಪರ್ಯಾಸವೆಂದರೆ ಇಂದು ದಾಳಿ ನಡೆಸುತ್ತಿರುವವರು ನಮ್ಮವರೇ ಆದ್ದರಿಂದ ಹಿಂದೆಂದಿಗಿಂತಲೂ ಇಂದು ನಾವುಗಳು ಮಹಾಸಭೆಯ ಧ್ಯೇಯಗಳಲ್ಲಿ ಸಂಸ್ಕಾರಕ್ಕೆ ಹೆಚ್ಚಿನ ಮಹತ್ವಕೊಡಬೇಕಾಗಿದೆ.

ಈ ನಿಟ್ಟಿನಲ್ಲಿ ಹಿರಿಯರು ನಮ್ಮ ಮಕ್ಕಳಲ್ಲಿ ಬಾಲ್ಯದಿಂದಲ್ಲೇ ಸನಾತನ ಧರ್ಮದೆಡೆಗೆ ಒಲವು ಮೂಡುವ ಧರ್ಮದ ಜ್ಞಾನವನ್ನು ಪಸರಿಸುವ ತಿಳಿ ಹೇಳುವ ಕಾರ್ಯಕ್ರಗಳನ್ನು ಹೆಚ್ಚು ಹೆಚ್ಚು ಹಮ್ಮಿ ಕೊಳ್ಳಬೇಕು. ಆ ಮೂಲಕ ಸನಾತನ ಧರ್ಮದ ಮೇಲೆ ವಾಗ್ದಾಳಿಗಳಾದಾಗ ಸಮರ್ಥವಾಗಿ ಎದುರಿಸಿ ಉತ್ತರ ಕೊಡುವ ವೀರ ಸನಾತನಿಗಳನ್ನು ನಿರ್ಮಿಸುವ ಹೊಣೆ ನಮ್ಮೆಲ್ಲ ವಿಪ್ರ ಭಾಂದವರ ಮೇಲೆ ತುಸು ಹೆಚ್ಚೇ ಇದೆ ಎಂಬುದು ಮರೆಯಬಾರದು.

ನಿರ್ಮೂನೆ ಮಾಡ್ತೆನಿ ಅಂದವರೇ ನಿರ್ಮೂಲನೆ ಆದರು..!
ಇತ್ತೀಚಿನ ದಿನಗಳಲ್ಲಿ ದಿನಗಳಲ್ಲಿ ಅದೇಕೋ ಬ್ರಾಹ್ಮಣರ ಬಗ್ಗೆ ಹಾಗು ಸನಾತನ ಧರ್ಮದ ಬಗ್ಗೆ ಮನಸ್ಸಿಗೆ ಬಂದಂತೆ ಮಾತನಾಡುತ್ತಿದ್ದಾರೆ , ಕೆಲವರಂತೂ ಸನಾತನ ಧರ್ಮವನ್ನೇ ನಿರ್ಮೂಲನೆ ಮಾಡುತ್ತೇವೆಂದು ವಿವೇಚನಾರಹಿತ ಹೇಳಿಕೆಗಳನ್ನು ನೀಡುತ್ತಿದ್ದಾರೆ.
ಆದರೆ ಈ ರೀತಿಯ ಹೇಳಿಕೆ ನೀಡುತ್ತಿರುವವರು ಒಂದಂಶವನ್ನು ಗಮನದಲ್ಲಿಡಬೇಕು .ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕೆಂದು ಹೊರಟವರೆಲ್ಲ ತಾವೇ ನಿರ್ಮೂಲನೆಗೊಂಡಿದ್ದರೆ ಏಕೆಂದರೆ ಯಾವುದು ಸತ್ಯವೋ ಅದಕ್ಕೆ ನಾಶವಿಲ್ಲ ಹಾಗು ಸನಾತನ ಧರ್ಮವು ಸತ್ಯವನ್ನು ಅರಸುವ ಮಾರ್ಗ ಆದ್ದರಿಂದ ಸನಾತನ ಧರ್ಮವೆಂಬುವುದು ಎಂದಿಗೂ ಅಮರ ಹಾಗು ನಾಶವಾಗಲಾರದ್ದು.

Leave a Reply

Your email address will not be published. Required fields are marked *

error: Content is protected !!