Headlines

ವಿಪ್ರ ಮಹಿಳಾ ಸಮಾವೇಶ ಯಶಸ್ಸಿಗೆ ಹಾರನಹಳ್ಳಿ ಮನವಿ

ಜನೇವರಿಯಲ್ಲಿ ರಾಜ್ಯಮಟ್ಟದ ವಿಪ್ರ ಮಹಿಳಾ ಸಮಾವೇಶ. ಬೆಂಗಳೂರಿನಲ್ಲಿ 6 ಮತ್ತು 7 ರಂದು ನಡೆಯಲಿರುವ ಸಮಾವೇಶ.

ಸಮಾವೇಶಕ್ಕೆ ನಿರ್ಮಲಾ ಸೀತಾರಾಮನ್ ಭಾಗಿ

ಬೆಳಗಾವಿ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ವಿಪ್ರ ಮಹಿಳೆಯರ ನಿರ್ಧಾರ.

ಅಕ್ಟೋಬರ್ 24 ರಿಂದ ಶತಕೋಟಿ ರಾಮನಾಮ ಜಪ ಶುರು.

ಗೂಗಲ್ ಮೀಟ್ ದಲ್ಲಿ ಮಾತನಾಡಿದ ಅಶೋಕ ಹಾರನಹಳ್ಳಿ., ಶುಭ ಮಂಗಳ, ರಾಘವೇಂದ್ರ ಭಟ್.

ಬೆಳಗಾವಿ. ಬೆಂಗಳೂರಿನಲ್ಲಿ ಬರುವ ಜನೇವರಿ 6 ಮತ್ತು 7 ರಂದು ಎರಡು ದಿನಗಳ ಕಾಲ‌ ನಡೆಯುವ ರಾಜ್ಯಮಟ್ಟದ ವಿಪ್ರ ಮಹಿಳಾ ಸಮಾವೇಶವನ್ನು ಯಶಸ್ದುಗೊಳಿಸಬೇಕೆಂದು ಎಕೆಬಿಎಂಎಸ್ ಅಧ್ಯಕ್ಷ ಅಶೋಕ ಹಾರನಹಳ್ಳಿ ಮತ್ತು ರಾಜ್ಯ ಸಂಚಾಲಕಿ ಶ್ರೀಮತಿ ಶುಭ ಮಂಗಳ ಅವರು ಮನವಿ ಮಾಡಿದರು

ಬೆಳಗಾವಿಯಲ್ಲಿ ಬ್ರಾಹ್ಮಣರ ವಿವಿಧ‌ ಭಜನಾ.ಮಂಡಳಿ ಮತ್ತು ಚಿದಂಬರೇಶ್ವರ ಯುಥ್ ಕಮಿಟಿಯ ಮುಖ್ಯಸ್ಥರೊಂದಿಗೆ ಗೂಗಲ್ ಮೀಟ್ ಮೂಲಕ ಅವರು ಮಾತನಾಡಿದರು.

ಜನೇವರಿ 6 ರಿಂದ‌ ಎರಡು ದಿನಗಳ ಕಾಲ ನಡೆಯುವ ಸಮ್ಮೇಳನದಲ್ಲಿ ಕೇಂದ್ರ ಸಚಿವೆ‌ ನಿರ್ಮಲಾ ಸೀತಾರಾಮನ್ ಭಾಗವಹಿಸಲು ಒಪ್ಪಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ವಿಪ್ರ ಮಹಿಳಾ‌‌ ಸಾಧಕಿಯರನ್ನು ಸನ್ಮಾನಿಸಲಾಗುತ್ತದೆ ಎಂದರು

ರಾಜ್ಯ ಸಂಚಾಲಕಿ ಶುಭ ಮಂಗಳ ಅವರೂ ಸಹ ಹೆಚ್ವಿನ ಸಂಖ್ಯೆಯಲ್ಲಿ ಮಹಿಳೆಯರು ಸಮಾವೇಶದಲ್ಲಿ ಭಾಗವಹಿಸಬೇಕು ಎಂದು ಕೋರಿದರು.

ಇದೇ ಸಂದರ್ಭದಲ್ಲಿ ಭಜನಾ ಸ್ಪರ್ಧೆಯ ವಿಜೇತರರಿಗೆ ಬಹುಮಾನ ಕೊಡಲಾಗುವುದು ಎಂದರು.

ಅಶೋಕ ಹಾರನಹಳ್ಳಿಯವರು ಅಯೋಧ್ಯೆಯಲ್ಲಿ ರಾಮನ ಮೂರ್ತಿವಪ್ರತಿಷ್ಠಾಪನೆ‌ ದಿನದಂದು ರಾಜ್ಯವ್ಯಾಪಿ ರಾಮನಾಮ ತಾರಕಯಜ್ಞ ಮಾಡಲು ಹೇಳಿದರು. ಅಷ್ಟೇ ಅಲ್ಲ ಇದೇ ದಿ. 24. ರಿಂದ ರಾಮನ‌ ಪ್ರತಿಷ್ಠಾಪನೆವರೆಗೆ ಶತಕೋಟಿ ರಾಮಜಪ‌ ಮಾಡಲು ಎಕೆಬಿಎಂಎಸ್ ನಿರ್ಧರಿಸಿದೆ ಎಂದರು.

ಈ ರಾಮನಾಮ ಜಪ ಕಾರ್ಯಕ್ರಮ ಬಗ್ಗೆ ಉಸ್ತುವಾರಿ ವಹಿಸಿದ್ದ ರಾಘವೇಂದ್ರ ಭಟ್ ಸವರೂ ಸಹ‌ ಮಾಹಿತಿ ನೀಡಿದರು.

ಅಶೋಕ ಹಾರನಹಳ್ಳಿಯವರ ಮಾರ್ಗದರ್ಣದದಲ್ಲಿ ಈ ದೊಡ್ಡ ಮತ್ತು ಪುಣ್ಯದ ಕಾರ್ಯಕ್ರಮ ನಡೆಯುತ್ತಿದ ಎಸ್. ಇದರಲ್ಲಿ ಕೇವಲ ವಿಪ್ರರು ಅಷ್ಟೇ ಅಲ್ಲ ಎಲ್ಲ ಹಿಂದೂಗಳೂ ಸಹ ಭಾಗವಹಿಸಬೇಕು ಎಂದು ಅವರು ಹೇಳಿದರು.

ಎಕೆಬಿಎಂಎಸ್ ಸಂಘಟನಾ ಕಾರ್ಯದರ್ಶಿ ವಿಲಾಸ ಜೋಶಿ, ನಗರಸೇವಕಿ ವಾಣಿ ಜೋಶಿ, ಸಂಗೀತಾ ಬೀಡಿ, ಪಂಕಜಾ ಕುಲಕರ್ಣಿ, ಶುಭಾ ಕುಲಕರ್ಣಿ, ದೀಪಾ ಕುಲಕರ್ಣಿ, ಅಂಜನಾ ಜೋಶಿ, ಅಕ್ಷಯ ಕುಲಕರ್ಣಿ, ಅನಿಲ ಕುಲಕರ್ಣಿ, ಹೇಮಂತ ಜೋಶಿ, ಕೇಶವ ಕುಲಕರ್ಣಿ, ಪ್ರೀತಮ ಕುಲಕರ್ಣಿ, ನಿತೀನ್ ಕುಲಕರ್ಣಿ, ಮುಂತಾದವರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!