16 ನಿಮಿಷದ 40 ಸೆಕೆಂಡಿನ ಆಡಿಯೋದಲ್ಲಿ ಏನಿದೆ ಗೊತ್ತಾ?

ಹಲ್ಲೆಗೊಳಗಾದ ದಲಿತ ಮಹಿಳೆ ಆ16 ನಿಮಿಷ 40 ಸೆಕೆಂಡಿನ ಅಡಿಯೋದಲ್ಲಿ ಹೇಳಿದ್ದೇನು?

ಎಸ್ಪಿ ಅವರು ಮಹಿಳೆಗೆ ರಕ್ಷಣೆ ಕೊಡಿ ಅಂತ ನಿರ್ದೇಶನ ನೀಡಿದರೂ ಸಿಪಿಐ ರಕ್ಷಣೆ ಏಕೆ ಕೊಡಲಿಲ್ಲ ಏಕೆ?

ಘಟಪ್ರಭಾ ಸಿಪಿಐ ನಾಲ್ಕು ಬಿಳಿ ಖಾಲಿ ಹಾಳೆಯ ಮೇಲೆ ಅವಸರದಲ್ಲಿ ಸಹಿ ಮಾಡಿಸಿಕೊಂಡಿದ್ದೇಕೆ?

ಪೊಲೀಸ್ ಸಮ್ಮುಖದಲ್ಲಿಯೇ ಮಹಿಳೆಯನ್ನು ಎಳೆದಾಡಿದ್ರಾ?

ದಲಿತ ಮಹಿಳೆ ಮೇಲೆ ಇಷ್ಟೆಲ್ಲ ಕ್ರೌರ್ಯ ನಡೆದರೂ ಮಹಿಳಾ ಆಯೋಗ ಯಾಕೆ ವಿಚಾರಣೆ ಮಾಡುತ್ತಿಲ್ಲ?

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಏನ್ ಮಾಡ್ತಿದೆ.? ತುಟಿ ಪಿಟಕ್ಕೆನ್ನದ ಮಹಿಳಾ ಸಚಿವೆ.

ಬೆಳಗಾವಿ.

ಘಟಪ್ರಭಾದಲ್ಲಿ ಅತ್ಯಂತ ಕ್ರೂರವಾಗಿ ದೌರ್ಜನ್ಯ ಕ್ಕೊಳಗಾದ ಪರಿಶಿಷ್ಟ ಪಂಗಡದ ಮಹಿಳೆಗೆ ನ್ಯಾಯ ಕೊಡಿಸಬೇಕಾದವರು ಪ್ರಕರಣಕ್ಕೆ ತಿಲಾಂಜಲಿ ನೀಡಲು ಮುಂದಾಗಿದ್ದಾರೆಯೇ?

ಈ ಪ್ರಕರಣದಲ್ಲಿ ಘಟಪ್ರಭಾ ಪೊಲೀಸರು ನಡೆದುಕೊಂಡ ರೀತಿಯನ್ನು ಗಮನಿಸಿದರೆ ಪ್ರಕರಣಕ್ಕೆ ಎಳ್ಖುನೀರು ಬಿಡುವುದು ಬಹುತೇಕ ನಿಶ್ಚಿತ ..!

16 ನಿಮಿಷ 40 ಸೆಕೆಂಡಿನ ಆಡಿಯೋದಲ್ಲೇ ದಲಿತ ಮಹಿಳೆ ತನ್ನ ಮೇಲೆ ಯಾವ ರೀತಿ ಗುಂಪು ಕ್ರೌರ್ಯ ನಡೆಸಿತು ಎನ್ನುವುದನ್ನು ಎಳೆ ಎಳೆಯಾಗಿ ವಿವರಿಸಿದ್ದಾಳೆ.

ಮನೆಗೆ ನುಗ್ಗಿದ ಗುಂಪು ಕಲ್ಲು ಹೊಡೆಯಿತು. ಇನ್ನೂ ಕೆಲವರು ನನ್ನನ್ನು ಬೆತ್ತಲೆ ಮಾಡಿ ಮಾಡಬಾರದ್ದನ್ನು ಮಾಡಿದರು. ಅಷ್ಟೇ ಅಲ್ಲ ಕೊರಳಲ್ಲಿ ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿದರು. ಬಿಡಿಸಲು ಬಂದ ‌ಮಗಳ ಮೇಲೂ ದೌರ್ಜನ್ಯ ಮಾಡಿದ್ದಾರೆ. ಆದರೆ ಅವಳು ಭಯ ಬಂದು ಓಡಿ ಬೇರೊಬ್ಬರ ಮನೆಗೆ ಹೋಗಿದ್ದರಿಂದ ಮಾನ ಉಳಿಯಿತು ಎಂದು ಸಂತ್ರಸ್ತೆ ಆಡಿಯೋದಲ್ಲಿ ಸ್ಪಷ್ಟಪಡಿಸಿದ್ದಾಳೆ

ಅಷ್ಟೇ ಅಲ್ಲ ಘಟಪ್ರಭಾ ಪೊಲೀಸರ ಸಮ್ಮುಖದಲ್ಲಿಯೂ ಕೂಡ ಕಿಡಿಗೇಡಿಗಳು ಸಂತ್ರಸ್ತೆಯನ್ನು ಎಳೆದಾಡಿ ಹಲ್ಲೆ ಕೂಡ ಮಾಡಿದ್ದಾರಂತೆ. ಆಘಾತಕಾರಿ ಸಂಗತಿ ಎಂದರೆ, ಪೊಲೀಸರ ಸಮ್ಮುಖದಲ್ಲಿ ಎಳೆದಾಡುತ್ತಿದ್ದಾಗ, ಅಲ್ಲಿದ್ದ ಕೆಲ ಪೊಲೀಸರು , ನಮ್ಮಲ್ಲಿ ಸಿಸಿಟಿವಿ ಇದೆ, ಇಲ್ಲಿ ಏನೂ ಮಾಡಬೇಡಿ, ಅವಳನ್ನು ಬೇರೆ ಎಲ್ಲಿಯಾದರೂ ಕರೆದುಕೊಂಡು ಹೋಗಿ “ಎಲ್ಲವನ್ನು’ ಮುಗಿಸಿಕೊಂಡು ಬನ್ನಿ ಎಂದು ಹೇಳಿದರು ಎಂದು ಸ್ವತ: ಸಂತ್ರಸ್ತೆ ಆಡಿಯೋದಲ್ಲಿ ವಿವರಿಸಿದ್ದಾಳೆ. ಆಗ ಠಾಣೆಯಲ್ಲಿ ಯಾವ ಪೊಲೀಸರು ಇದ್ದರು ಎನ್ನುವುದನ್ನು ಆಡಿಯೊದಲ್ಲಿ ಹೆಸರು ಸಜ ಉಲ್ಲೇಖಿಸಿದ್ದಾಳೆ. ಇಷ್ಟೆಲ್ಲ ಆದರೂ ಘಟಪ್ರಭಾ ಪೊಲೀಸರ ಮೇಲೆ ಕ್ರಮ ಏಕಿಲ್ಲ. ಎನ್ನುವ ಪ್ರಶ್ನೆ ಬಹುತೇಕರನ್ನು ಕಾಡುತ್ತಿದೆ.

ಖಾಲಿ ಹಾಳೆ ಮೇಲೆ ಸಹಿ..!
ಇದೆಲ್ಲದರ ಮಧ್ಯೆ ಘಟಪ್ರಭಾ ಸಿಪಿಐ ಅವರು ಬೀಮ್ಸ್ಗೆ ಬಂದು ನಾಲ್ಕು ಖಾಲಿ ಹಾಳೆ ಮೇಲೆ ಸಹಿ ಮಾಡಿಸಿಕೊಂಡಿದ್ದಾರೆಂದು ಸಂತ್ರಸ್ತೆ ಆಡಿಯೋದಲ್ಲಿ ಸ್ಪಷ್ಟಪಡಿಸಿದ್ದಾಳೆ.

ಆದರೆ ನನಗೆ ಬರೆಯಲು ಬರಲ್ಲ. ಆದ್ದರಿಂದ ಮೊದಲು ಬರೆದುಕೊಂಡು ಬಂದು ಓದಿ ಹೇಳಿ. ಆಮೇಲೆ ಸಹಿ ಮಾಡುತ್ತೇನೆ ಅಂದರೂ ಅವರು ಕೇಳಿಲಿಲ್ಲ. ಅವಸರ ಮಾಡಿ ನನ್ನಿಂದ ಒತ್ತಾಯ ಪೂರ್ವಕವಾಗಿ ಬಿಳಿ ಹಾಳೆ ಮೇಲೆ ಸಹಿ ಮಾಡಿಸಿಕೊಂಡು ಹೋದರು ಎಂದು ಸಂತ್ರಸ್ತೆ ವಿವರಿಸಿದ್ದಾಳೆ.

Leave a Reply

Your email address will not be published. Required fields are marked *

error: Content is protected !!