ಅಭಯ ತಾನೂ ಕುಣಿದ ಎಲ್ಲರನ್ನೂ ಕುಣಿಸಿದ..!

ರಾಜಕಾರಣ ಮೀರಿ ಕುಣಿದ ಅಭಯ.‌

ತಾನೂ ಕುಣಿದು ಬೆಳಗಾವಿಗರನ್ನು ಕುಣಿಸಿದ ಶಾಸಕರು. ನಗರ ಸೇವಕರೊಂದಿಗೆ ಭರ್ಜರಿ ಸ್ಟೆಪ್ ಹಾಕಿದ ಅಭಯ ಪಾಟೀಲ.

11 ,ವರ್ಷಗಳಿಙದ ನಡೆದ ದಾಂಡಿಯಾ ಉತ್ಸವ. ಶಾಸಕರೇ ಆಯೋಜನೆ ಮಾಡಿದ ದಾಂಡಿಯಾ.

ಬೆಳಗಾವಿ.

ರಾಜ್ಯದಲ್ಲಿ ಈಗ ಎಲ್ಲಿ ನೋಡಿದಲ್ಲಿ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿದ್ದೇ ಸುದ್ದಿ.

ಅಂತಹುದರಲ್ಲಿ ಬೆಳಗಾವಿಯ ರಾಣಿ ಚನ್ನಮ್ಮ‌ ನಗರದಲ್ಲಿ ಅದೇ ಅಭಯ ಪಾಟೀಲ ತಾನೂ ಕುಣಿದಿದ್ದಲ್ಲದೇ ಇನ್ನುಳಿದ ಬಿಜೆಪಿ‌ ನಗರಸೇವಕರು ಕುಣಿಯುವ ಹಾಗೆ ಮಾಡಿದರು.

ಇಲ್ಲಿ ನಗರಸೇವಕರು ಕುಣಿದಿದ್ದರೆ ಅವರೆಲ್ಲ ಅವರದ್ದೇ ಅಂದರೆ ಬಿಜೆಪಿಯವರು ಕುಣಿದಿರಬಹುದು ಅಂತ ಸುಮ್ಮನಿರಬಹುದಿತ್ತು.

ಆದರೆ ಅಭಯ ಪಾಟೀಲರ ಮಾತಿಗೆ, ಕಾರ್ಯಕ್ಕೆ ಸಾವಿರಾರು ಜನ ಹುಚ್ಚೆದ್ದು ಕಣಿದರು. ಅಷ್ಟೇ ಅಲ್ಲಾ ಆ ಪರಿ ಕುಣಿದಿದ್ದಕ್ಕೆ ಅವರೆಲ್ಲಾ ಬಹುಮಾನ ಸಹ ಗಿಟ್ಟಿಸಿಕೊಂಡರು.

ಅಂದ ಹಾಗೆ ಅಭಯ ಫಾಟೀಲರ ಈ ಕುಣಿತಕ್ಕೂ ಪಾಲಿಕೆಯ ರಾಜಕಾರಣಕ್ಕೂ ಯಾವುದೇ ಸಂಬಂಧವಿಲ್ಲ.

ಅಭಯ ಕುಣಿದಿದ್ದು, ಜನರನ್ನ ಹುಚ್ಚೆದ್ದು ಕುಣಿಸಿದ್ದು ಅವರೇ ಆಯೋಜನೆ ಮಾಡಿದ ದಾಂಡಿಯಾ ಉತ್ಸವದಲ್ಲಿ…!

ಕಳೆದ 11 ವರ್ಷದಿಂದ ಆಯೋಜನೆ ಮಾಡುತ್ತ ಬಂದಿರುವ ದಾಂಡಿಯಾ ಉತ್ಸವದಲ್ಲಿ ಕಂಡು ಬಂದ ಚಿತ್ರಣವುದು.

ಕೊನೆಯ ದಿನ ಈ ಮೈದಾನದಲ್ಲಿ ಕಾಲಿಡಲು ಸಹ ಜಾಗ ಇರಲಿಲ್ಲ. ಎಲ್ಲರೂ ಅಚ್ಚುಕಟ್ಟಾಗಿ ವಿವಿಧ ವೇಷ ಭೂಷಣದೊಂದಿಗೆ ಆಗಮಿಸಿ ದಾಂಡಿಯಾ ಆಡಿ ಖುಷಿಪಟ್ಟರು.

ಗಮನಿಸಬೇಕಾದ ಸಂಗತಿ ಅಂದರೆ, ಶಾಸಕ ಅಭಯ ಪಾಟೀಲರು ವೇದಿಕೆ ಮೇಲೆ ಅಷ್ಟೇ ಅಲ್ಲ ಸಾರ್ವಜನಿಕರ ಮಧ್ಯೆ‌ ಕೂಡ ನಗರಸೇವಕರೊಂದಿಗೆ ಹೆಜ್ಜೆ ಹಾಕಿದರು. ಹೀಗಾಗಿ ಸೇರಿದ್ದ ಜನಸ್ತೋಮ ಕೂಡ ಭರ್ಜರಿ ಸ್ಟೆಪ್ ಹಾಕಿದರು.

ಇಲ್ಲಿ ಸುಮಾರು 15 ಕ್ಕೂ ವಿಜೇತರಿಗೆ ಬಹುಮಾನ ವಿತರಿಸುವ ಕೆಲಸ ಮಾಡಲಾಯಿತು. ವೇಷ ಭೂಷಣ, ಗ್ರುಪ್ ಡ್ಯಾನ್ಸ್, ಸೇರಿದಂತೆ ಇನ್ನೂ ಕೆಲ ಮಾನದಂಡವನ್ನು ಗಮನಿಸಿ‌ ಬಹುಮಾನ ವಿತರಿಸಲಾಯಿತು. ಹಾಜರಿದ್ದ ನಗರಸೇವಕರು ವಿಜೇತರಿಗೆ ಬಹುಮಾನ ನೀಡಿದರು.

ಗಮನಿಸಬೇಕಾದ ಸಂಗತಿ ಎಂದರೆ, ವಿಜೇತರೂ ಸಹ ವೇದಿಕೆಯಲ್ಲಿ ಮತ್ತೊಮ್ಮೆ ತಮ್ಮ ನೃತ್ಯ ಪ್ರದರ್ಶನ ಮಾಡಿ ಬಹುಮಾನ ಪಡೆದುಕೊಂಡರು.

Leave a Reply

Your email address will not be published. Required fields are marked *

error: Content is protected !!