Headlines

ಸುದ್ದಿ ಸಾರ ಮರೆಯದಿರಿ..!


ಬೆಳಗಾವಿ.
ಬೆರಳ ತುದಿಯಲ್ಲಿ ಮಾಹಿತಿ ಲಭ್ಯವಾಗಿಸುವ ತಂತ್ರಜ್ಞಾನದ ಯುಗದಲ್ಲಿ ಸುದ್ದಿ ಬಿತ್ತರಿಸುವ ಭರದಲ್ಲಿ ಸುದ್ದಿಯ ಸಾರವನ್ನು ಪತ್ರಕರ್ತರು ಮರೆಯುವಂತಾಗಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಣಸ ಜಾರಕಿಹೊಳಿ ಹೇಳಿದರು.
ನಗರದ ಕನ್ನಡ ಭವನದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ವತಿಯಿಂದ ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ಕೆ. ವಿ. ಪ್ರಭಾಕರ್, ಗಿರೀಶ ಕೋಟೆ ಅವರಿಗೆ ಹಮ್ಮಿಕೊಂಡಿದ್ದ ಅಭಿಮಾನದ ಅಭಿವಂದನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.


ಸಮಾಜದಲ್ಲಿನ ಸಮಸ್ಯೆಗಳತ್ತ ಬೆಳಕು ಚೆಲ್ಲುವ ಕೆಲಸವಾಗಬೇಕು. ಮುಖ್ಯವಾಗಿ ಪತ್ರಿಕಾ ರಂಗದಲ್ಲಿ ಎಲೆಮರೆ ಕಾಯಿಯಂತಿರುವ ಸಾಧಕರನ್ನು ಗುರುತಿಸುವ ಕಾರ್ಯವಾಗಬೇಕೆಂದರು.


ತೆರೆ ಹಿಂದಿರುವ ಸುದ್ದಿಗಳಿಗೆ ಮಹತ್ವ ನೀಡಿ ಎಂದು ಹೇಳಿದ ಅವರು, ಜಗತ್ತಿನಲ್ಲಿ ಪತ್ರಿಕಾ ರಂಗ ತನ್ನದೇ ಛಾಪು ಮೂಡಿಸಿದೆ. ಸಂವಿಧಾನದ 4ನೇ ಅಂಗವಾಗಿ ಗುರುತಿಸಿಕೊಂಡಿದೆ. ಇಂತಹ ಮಾಧ್ಯಮಗಳು ಇಂದು ತೆರೆ ಮುಂದಿರುವ ಜನಗಳ ಬಗ್ಗೆ ಬಿತ್ತರಿಸದೇ ತೆರೆ ಹಿಂದೆ ನಿತ್ಯ ಶ್ರಮಿಸುವ ಕಾಯಕ ಜೀವಗಳತ್ತ ಸುದ್ದಿ ಮಾಡಬೇಕಿದೆ ಎಂದರು.


ಮಾಧ್ಯಮಗಳು ಸತ್ಯಕ್ಕೆ ಹತ್ತಿರವಾಗುವ ಸುದ್ದಿ ಹಾಗೂ ಉಹಾಫೋಹಗಳತ್ತ ಗಮನ ಹರಿಸದೇ ಸತ್ಯದ ಕಡೆ ಗಮನ ಹರಿಸಿ ಸುದ್ದಿಗಳನ್ನು ಬಿತ್ತರಿಸಿದರೆ ರಾಜ್ಯ ಹಾಗೂ ದೇಶದಲ್ಲಿ ಉತ್ತಮ ಸಮಾಜ ನಿಮರ್ಿಸಲು ಸಾಧ್ಯವಾಗುತ್ತದೆ ಎಂದರು.


ಬೆಳಗಾವಿಯಲ್ಲಿ ಪತ್ರಿಕಾ ಭವನ ನಿಮರ್ಾಣಕ್ಕೆ ಈಗಾಗಲೇ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ ಮಾಡಲಾಗಿದ್ದು, ಎರಡು, ಮೂರು ಸ್ಥಳದಲ್ಲಿ ಜಾಗ ಇದೆ. ಒಂದು ಕಡೆ ಸ್ಥಳ ಗುರುತಿಸಿದರೆ ಸಕರ್ಾರದಿಂದ ಪತ್ರಿಕಾ ಭವನ ನಿಮರ್ಾಣಕ್ಕೆ ಶೀಘ್ರವೇ ಕ್ರಮ ಕೈಗೊಳ್ಳಗುವುದು ಎಂದು ತಿಳಿಸಿದರು.


ಸಚಿವೆ ಲಕ್ಷ್ಮೀ ಹೆಬ್ಬಾಳಕರ ಮಾತನಾಡಿ, ಇಂದು ಪತ್ರಿಕಾ ವಿತರಕರಿಗೆ ಸೈಕಲ್ ವಿತರಣೆ ಮಾಡಿರುವುದು ಬಹಳ ಖುಷಿ ತಂದಿದೆ ಎಂದರು. ರಾಜಕಾರಣ ಇಷ್ಟವಿದೇ ಎಂದು ರಾಜಕಾರಣ ಕ್ಷೇತ್ರದಲ್ಲಿ ಬಂದಿರುವೆ ಆದರೆ ನಾನು ಎಂದಿಗೂ ಲಕ್ಷ್ಮಣ ಗೆರೆಯನ್ನು ದಾಟುವುದಿಲ್ಲ ಎಂದರು.


ಬೆಳಗಾವಿಯಲ್ಲಿ “ಬರಿ ಬೆಳಗಾವಿ ಬೆಂಕಿ” “ಕೈ ಪಾಳೆಯದಲ್ಲಿ ಸುನಾಮಿ” ಎಂಬಂತೆ ಸುದ್ದಿಗಳನ್ನು ಬಿತ್ತರಿಸಿ ಜನರ ಮನಸ್ಸಿಗೆ ಘಾಸಿ ಮಾಡುವ ಸ್ಥಿತಿ ನಿಮರ್ಾಣವಾಗುತ್ತಿದೆ. ಆದ್ದರಿಂದ ಇಲ್ಲಿರುವ ಮಾಧ್ಯಮ ಮಿತ್ರರು ಸತ್ಯ ನಡೆದಿರುವ ಕುರಿತು ಬಿತ್ತರಿಸಿ ಉತ್ತಮ ಸಮಾಜ ನಿಮರ್ಿಸಲು ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.


ಗದಗದ ಡಂಬಳ ತೋಂಟದಾರ್ಯ ಮಠದ ಶ್ರೀ ಡಾ. ಸಿದ್ದರಾಮ ಸ್ವಾಮೀಜಿ ಮಾತನಾಡಿ, ಪತ್ರಿಕೆಗಳು ಬೆಳೆಯಲು ಪರಿಶ್ರಮ ಮುಖ್ಯ. ಉದಾಹರಣೆಗೆ ಪತ್ರಿಕಾ ವಿತರಕರಾಗಿ ಇಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ. ವಿ ಪ್ರಭಾಕರ್ ನೇಕರಾಗಿದ್ದಾರೆ. ಹೀಗೆ ಸದಾ ಪರಿಶ್ರಮವಿದ್ದಾಗ ಮಾತ್ರ ಸಾಧನೆ ಮಾಡಲು ಸಾಧ್ಯ ಎಂದರು.


ಇದೇ ವೇಳೆ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ. ವಿ ಪ್ರಭಾಕರ್ ಮತ್ತು ಮುಖ್ಯಮಂತ್ರಿಗಳ ಮಾಧ್ಯಮ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಗಿರೀಶ್ ಕೋಟೆ, ಕೆ.ಪಿ. ಪುಟ್ಟಸ್ವಾಮಯ್ಯ, ಕೆ ಎಸ್ ನಾಗರಾಜ್, ದೀಪಕ ಕರಾಡೆ, , ಸಚಿವ ಸತೀಶ್ ಜಾರಕಿಹೊಳಿಯವರ ಮಾಧ್ಯಮ ಸಲಹೆಗಾರ ಮುನ್ನಾ ಬಾಗವಾನ, ಎಂ.ಕೆ. ಹೆಗಡೆ ಸೇರಿದಂತೆ ರಶಾಜ್ಯೋತ್ಸವ ಪ್ರಶಸ್ತಿ ವಿಜೇತರನ್ನು ಸನ್ಮಾನಿಸಲಾಯಿತು, ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ, ಜಿಲ್ಲಾಧ್ಯಕ್ಷ ದಿಲೀಪ ಕುರಂದವಾಡೆ, ವಾತರ್ಾ ಇಲಾಖೆ ಉಪನಿದರ್ೇಶಕ ಗುರುನಾಥ ಕಡಬೂರ, ಮಹಾನಗರ ಪಾಲಿಕೆ ಕಮಿಷ್ನರ್ ಅಶೋಕ ದುಡಗುಂಟಿ, ಸವರ್ೋತ್ತಮ ಜಾರಕಿಹೊಳಿ ಮುಂತಾದವರು ಹಾಜರಿದ್ದರು,

Leave a Reply

Your email address will not be published. Required fields are marked *

error: Content is protected !!