Headlines

ತಿನಿಸು ಕಟ್ಟಾದಲ್ಲಿ ಆಗ್ತಿರೋದು ಏನು?

ಪಾಲಿಕೆ ಮುಗಿತು. ಈಗ ಖಾವು ಕಟ್ಟಾಗೆ ಬಂತು.

ಸತೀಶ್ ವರ್ಸಿಸ್ ಅಭಯ ನಿಲ್ಲದ ಕದನ.

ತನಿಖೆಗೆ ಹೆಧರಲ್ಲ ಅಂದ್ರು ಶಾಸಕ ಅಭಯ

ಖಾವು ಕಟ್ಟಾ ಮುಂದೆ ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರ ಹೈಡ್ರಾಮಾ.

ಅಧಿಕಾರಿಗಳ ವರದಿ ನೋಡಿ ಮುಂದಿನ‌ ಹೋರಾಟ ಶುರು.

ಬೆಳಗಾವಿ..

ಗಡಿನಾಡ ಬೆಳಗಾವಿ ಜಿಲ್ಕೆಯ ರಾಜಕೀಯ ಯುದ್ಧ ಸಧ್ಯಕ್ಕೆ ನಿಲ್ಲುವ ಲಕ್ಷಣಗಳು ಕಾಣ ಸಿಗುತ್ತಿಲ್ಲ. ಈ ಹಿಂದೆ PLD ವಿವಾದ ಸಮ್ಮಿಶ್ರ ಸರ್ಕಾರದ ಪತನಕ್ಕೆ ಕಾರಣವಾಗಿತ್ತು.

ಈಗ ತಿನಿಸು ಕಟ್ಟಾ ವಿವಾದ ಶುರುವಾಗಿದೆ. ಪಿಎಲ್ ಡಿ ವಿವಾದ Satish Jarkuholi ವರ್ಸಿಸ್ Hebbaljar ನಡುವೆ ಇತ್ತು. ನಂತರ ಅದು Ramesh Jarkiholi ವರ್ಸಿಸ್ laxmi Hebbalkar ಆಯಿತು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಸಚಿವ ಸತೀಶ್ ಜಾರಕಿಹೊಳಿ ಮತ್ತು ಶಾಸಕ ಅಭಯ ಪಾಟೀಲರ ನಡುವೆ ದೊಡ್ಡ ಮಟ್ಟದ ಕುಸ್ತಿನೇ ನಡೆದಿದೆ.

ರಾಜ್ಯವ್ಯಾಪಿ ಎಲ್ಲರ ಗಮನ ಸೆಳೆದಿರುವ ಬೆಳಗಾವಿ ತಿನಿಸು ಕಟ್ಟಾ ಈಗ ವಿವಾದದ ಕೇಂದ್ರ ಬಿಂದುವಾಗಿದೆ.

ಒಂದು ರೀತಿಯಲ್ಲಿ ಇದು ಜಿಲ್ಲಾ ಉಸ್ತುವಾರಿ‌ ಸಚಿವ ಸತೀಶ ಜಾರಕಿಹೊಳಿ ಮತ್ತು ಬಿಜೆಪಿ ಶಾಸಕ ಅಭಯ ಪಾಟೀಲ ನಡುವಿನ‌ ಕದನ ಶುರುವಾಗಿದೆ. ಇದು ಯಾವ ಹಂತಕ್ಕೆ ಹೋಗಿ ನಿಲ್ಲಬಹುದು ಎನ್ನುವುದನ್ನು ಊಹಿಸಲಾಗದು.

ಬೆಳಗಾವಿ ಮಹಾನಗರ ಪಾಲಿಕೆ ಯಲ್ಲಿ ಆರಂಭಗೊಂಡ ರಾಜಕೀಯ ಕುಸ್ತಿ ಇನ್ನೂ ನಿಂತಿಲ್ಲ

ಈಗ ಆಭಯ ಪಾಟೀಲರ ವಿಶೇಷ ಪ್ರಯತ್ನದಿಂದ ನಿರ್ಮಿಸಲಾದ ಖಾವು ಕಟ್ಟಾ ಅಂದರೆ ತಿನಿಸು ಕಟ್ಟಾ ಮೇಲೆ ಕಾಂಗ್ರೆಸ್ ಕಣ್ಣು ಬಿದ್ದಿದೆ.

ಬೆಂಗಳೂರಿನಿಂದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಮುಂದೆ ಕೆಲವರು ತಿನಿಸು ಕಟ್ಟಾದಲ್ಲಿ ಅಕ್ರಮ ನಡೆದಿದೆ ಎನ್ನುವ ದೂರು ತನಿಖಾ ತಂಡದ ಮುಂದೆ ಪ್ರಸ್ತಾಪ ಮಾಡಿದರು.

ಈ ಸಂದರ್ಭದಲ್ಲಿ ಕೆಲವರು ಶಾಸಕರು ಹಚ್ಚಿದ್ದ ಫ್ಲೆಕ್ಸ್ ಬಗ್ಗೆನೂ ತಕರಾರು‌ ಮಾಡಿದರು.

ಗಮನಿಸಬೇಕಾದ ಸಂಗತಿ ಎಂದರೆ, ಇಷ್ಟು ವರ್ಷಗಳ ಕಾಲ ಮೌನಕ್ಜೆ ಜಾರಿದ್ದವರು ಈಗ ತಿನಿಸುಕಟ್ಟಾ ಬಗ್ಗೆ ಈಗ ಅಪಸ್ವರ ಎತ್ತಿದ್ದನ್ನು ಗಮನಿಸಿದರೆ ಇದು ರಾಜಕೀಯ ಯುದ್ಧ ಅಷ್ಟೆ.!

ಶಾಸಕ ಅಭಯ ಪಾಟೀಲರು, ತಿನಿಸು ಕಟ್ಟಾ ಬಗ್ಗೆ ವಿಚಾರಣೆ ನಡೆಸಲಿ ಎನ್ನುವ ಮಾತನ್ನು ಹೇಳುತ್ತಲೇ ಬಂದಿದ್ದಾರೆ. ಇಂದೂ ಕೂಡ ಅದೇ ಮಾತನ್ನು ಸ್ಪಷ್ಟಪಡಿಸಿದ್ದಾರೆ.

ಗಮನಿಸಬೇಕಾದ ಸಂಗತಿ ಎಂದರೆ, ತಿನಿಸು ಕಟ್ಟಾದಲ್ಲಿನ ಮಳಿಗೆಗಳು ಯಾರಿಗೆ ಹಂಚಿಕೆ ಆಗಿವೆ ಎನ್ನುವ ಮಾಹಿತಿಯನ್ನು ಕೆಲವರು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ.

ಅದರಲ್ಲಿ ನಗರಸೇವಕರ ಸಂಬಂಧಿಕರ ಹೆಸರುಗಳು ಇವೆ. ಅದನ್ನು ಬಿಡಿ. ಮಳಿಗೆಗಳನ್ನು ಟೆಂಡರ್ ಮೂಲಕ‌ ಕರೆದಾಗ ಅವರು ಅದನ್ಬು ತೆಗೆದುಕೊಂಡಿರಬಹುದು. ಆದರೆ ಈಗ ತೆಗೆದುಕೊಙಡವರಲ್ಲಿ ಬಹುತೇಕರು ಬಿಜೆಪಿ ಕಾರ್ಯಕರ್ತರು ಎನ್ನುವುದು ಕಾಂಗ್ರೆಸ್ನವರ ವಾದ. ಇದು ಈಗ ಚರ್ಚೆಯ ವಸ್ತುವಾಗಿದೆ.

ಧಿಕ್ಕಾರ ಏಕೆ?

ಅಚ್ಚರಿಯ ಸಂಗತಿ ಎಂದರೆ ತಿನಿಸು ಕಟ್ಟಾ ಬಗ್ಗೆ ಲೋಕೊಪಯೊಗಿ ಇಲಾಖೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಅವರು ಕೇಳಿದ ಪ್ರಶ್ನೆಗಳಿಗೆ ಉತ್ತರ ಕೊಡಬೇಕಾದವರು ಮಳಿಗೆ ಪಡೆದವರು.

ಆದರೆ ಇಲ್ಲಿ ಕಾಂಗ್ರೆಸ್ ನ ಮಹಿಳಾ ಕಾರ್ಯಕರ್ತೆಯರು ಧಿಕ್ಕಾರ ಕೂಗುವುದು ಅಷ್ಟೆ ಅಲ್ಲ ಅದರ ಬಗ್ಗೆ ಬೀದಿ ರಂಪಾಟ ಮಾಡುವ ಅವಶ್ಯಕತೆಯಾದರೂ ಏನಿತ್ತು? ಹೀಗಾಗಿ ಇದರ ಹಿಂದಿನ‌ ಉದ್ದೇಶ ಸ್ಪಷ್ಟವಾಗಿ ಗೊತ್ತಾಗುತ್ತದೆ. ಆಘಾತಕಾರಿ ಸಂಗತಿ ಎಂದರೆ ಖಾವು ಕಟ್ಟಾ ವಿವಾದಕ್ಕೆ ಜಾತಿ ಬಣ್ಣ ಬರುತ್ತಿದೆ. ಇದು ಬಿಜೆಪಿಗರನ್ನು ಕೆರಳಿಸಿದೆ.

Leave a Reply

Your email address will not be published. Required fields are marked *

error: Content is protected !!