ಬೆಳಗಾವಿ.
ಕಳೆದ ದಿನ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಟಿಳಕವಾಡಿ ಸಿಪಿಐ ಬಗ್ಗೆ ತೆಗೆದುಕೊಂಡ ತೀರ್ಮಾನದ ಬಗ್ಗೆ ಮುಂದಿನ ಪತ್ರ ವ್ಯವಹಾರ ಮಾಡುವರು ಯಾರು?
ತೀರ್ಮಾನ ಪ್ರಕಟಿಸಿದ ಮೇಯರ್ ಅವರೇ ವ್ಯಕ್ತಿಗತ ಪತ್ರ ಬರೆಯಬೇಕೊ ಅಥವಾ ಪಾಲಿಕೆಯ ವತಿಯಿಂದ ಕೌನ್ಸಿಲ್ ಠರಾವ್ ಹಚ್ವಿ ಬರೆಯಬೇಕೋ ಎನ್ನುವ ಗೊಂದಲ ಬಹುತೇಕರನ್ನು ಕಾಡುತ್ತಿದೆ

ಈ ಪ್ರಶ್ನೆ ಬೆಳಗಾವಿಗರನ್ನು ಅಷ್ಟೇ ಅಲ್ಲ ಖುದ್ದು ಸಭೆಯಲ್ಲಿ ವಿಷಯ ಮಂಡಿಸುದವರಿಗೂ ಕಾಡತೊಡಗಿದೆ.
ನಗರಸೇವಕ ಅಭಿಜಿತ್ ಜವಳಕರ ಬಂಧನ ಪ್ರಜರಣದಲ್ಲಿ ಟಿಳಕವಾಡಿ ಸಿಪಿಐ ಯವರ ಬಗ್ಗೆ ಮಾನವ ಹಕ್ಕುಗಳ ಆಯೋಗ, ರಾಜ್ಯಪಾಲರು ಮತ್ತು ಗೃಹ ಮಂತ್ರಿ ಗಳಿಗೆ ಪತ್ರ ಬರೆಯಬೇಕು ಎನ್ನುವ ರೂಲಿಂಗ್ ನ್ನು ಮೇಯರ್ ಶೋಭಾ ಸೋಮನ್ನಾಚೆ ನೀಡಿದರು.
ಅಂದರೆ ಇಲ್ಲಿಬಮೇಯರ್ ರೂಲಿಂಗ್ ನೀಡಿದರೆ ಅದು ಸಂಪೂರ್ಣ ಸಭಾಗ್ರಹದ ಪರವಾಗಿ ನೀಡಿದ್ದು ಎಂದೇ ಅರ್ಥ.

ಆದರೆ ಸಭೆಯಲ್ಲಿ ಕೆಲ ಅಧಿಕಾರಿಗಳ ವಾದ ಬೇರೆನೆ ಇದೆ. ಏನೆಂದರೆ ಮೇಯರ್ ಪತ್ರ ಬರೆಯುವುದಾಗಿ ಹೇಳಿದ್ದಾರೆ. ಹೀಗಾಗಿ ಅವರೇ ವ್ಯಕ್ತಿಗತವಾಗಿ ಪತ್ರ ಬರೆಯಬೇಕು ಎನ್ನುವುದು ಕೆಲವರ ಮಾತು.
ಇದು ಒಂದು ರೀತಿಯ ಗೊಂದಲಕ್ಕೆ ಕಾರಣ. ಇಲ್ಲಿ ಕೌನ್ಸಿಲ್ ಪರವಾಗಿ ಪಾಲಿಕೆ ವತಿಯಿಂದ ಪತ್ರ ಹೋದರೆ ಅದರ ಎಫೆಕ್ಟ್ ಬೇರೆ ಆಗುತ್ತದೆ ಅಂತೆ.ಆದರೆ ಮೇಯರ ವೈಯಕ್ತಿಕ ಪತ್ರ ಬರೆದರೆ ಯಾರೂ ಅದನ್ನು ಅಷ್ಟು ಗಂಭೀರವಾಗಿ ಪರಿಗಣಿಸಲ್ಲ ಎನ್ನುವ ಮಾತು ಕೇಳಿ ಬರುತ್ತಿದೆ.