ಬೆಳಗಾವಿ
ಹೊಸ ವಂಟಮೂರಿ ಗ್ರಾಮದಲ್ಲಿ ಮಹಿಳೆಯನ್ನು ಇವಸ್ತ್ರಗೊಳಿಸಿ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರೀತಿಸಿ ಓಡಿ ಹೋದ ಜೋಡಿಗೆ ಪೊಲೀಸರು ರಕ್ಷಣೆ ನೀಡಿದ್ದಾರೆ. ಕಳೆದ ದಿನ ಇವರು ಓಡಿ ಹೋಗಿದ್ದರಿಂದ ಗ್ರಾಮದಲ್ಲಿ ಅಮಾನವೀಯ ಘಟನೆ ನಡೆದಿತ್ತು. ಸದನದಲ್ಲೂ ಕೂಡ ಓಡಿಹೋದ ಜೋಡಿಗೆ ರಕ್ಷಣೆ ಕೊಡಬೇಕು ಎನ್ನುವ ಮಾತುಗಳು ಕೇಳಿ ಬಂದಿದ್ದವು.

ಓಡಿ ಹೋದ ಯುವಕ ಯುವತಿಯರು ಇಂದು ಬೆಳಗಾವಿಯ ನಗರ ಪೊಲೀಸ್ ಆಯುಕ್ತರ ಕಚೇರಿಗೆ ಆಗಮಿಸಿದ್ದರು. .

ಡಿಸಿಪಿ ಸ್ನೇಹ ಅವರ ಕೊಠಡಿಯಲ್ಲಿ ಯುವಕ, ಯುವತಿರ ಹೇಳಿಕೆಯನ್ನು ಸಿಬ್ಬಂದಿಗಳು ಪಡೆದುಕೊಳ್ಳುತ್ತಿದ್ದರು. . ಈ ಸಂದರ್ಭದಲ್ಲಿ ನಮಗೆ ರಕ್ಷಣೆಕೊಡಬೇಕೆಂದು ನಗರ ಪೊಲೀಸ್ ಆಯುಕ್ತರ ಬಳಿ ಅವರು ಮನವಿ ಮಾಡಿಕೊಂಡರು.
ಇಂದು ಸದನದ ಶೂನ್ಯ ವೇಳೆಯಲ್ಲಿ ವಿರೋಧ ಪಕ್ಷದ ಸುನಿಲ ಕುಮರ., ಶಶಿಕಲಾ ಜೊಲ್ಕೆ ಮತ್ತು ಕಾಂಗ್ರೆಸ್ನ ಅಶೋಕ ಪಟ್ಟಣ ಅವರು ಯುವಕ, ಯುವತಿಗೆ ರಕ್ಷಣೆ ಕೊಡಬೇಕೆಂದು ಆಗ್ರಹಿಸಿದ್ದರು. ಗೃಹ ಸಚಿವರೂ ಸಹ ಈ ನಿಟ್ಟಿನಲ್ಲಿ ಭರವಸೆ ನೀಡಿದ್ದರು.

