ಬೆಳಗಾವಿ.ಕಳೆದ ಕೆಲ ದಿನಗಳಿಂದ ಸದ್ದು ಮಾಡುತ್ತಿದ್ದ ದಲಿತ ನೌಕರ ಸಂಘಟನೆಗಳು ತಮ್ಮ ಎಲ್ಲ ಭಿನ್ನಾಭಿಪ್ರಾಯ ಮರೆತು ಒಂದಾಗಿವೆ
ಪಾಲಿಕೆ ಎಸ್ ಸಿ ಎಸ್ ಟಿ ನೌಕರ ಸಂಘಟನೆಯ ಚುನಾವಣೆಯಲ್ಲಿ ಭಿನ್ನ ಮಾತುಗಳು ಕೇಳಿ ಬಂದಿದ್ದವು.

ಆದರೆ ಕೊನೆಗೆ ಎಲ್ಲ ನೌಕರರು ಒಂದಾಗಿ ಉದಯಕುಮಾರ ತಳವಾರ ಅವರನ್ನೇ ಅಡಾಕ್ ಅಧ್ಯಕ್ಷರಾಗಿ ಒಪ್ಪಿಕೊಂಡರು ಎನ್ನುವ ಮಾತು ಕೇಳಿ ಬಂದಿತು. ಹೀಗಾಗಿ ಇನ್ನುಳಿದ ನೌಕರರೂ ಸಹ ನೆಮ್ಮದಿಯ ನಿಟ್ಟುಸಿರು ಬಿಟ್ಟರು ಎಂದು ಗೊತ್ತಾಗಿದೆ.
ಉದಯಕುಮಾರ ಅವರು ಮಹಾನಗರ ಪಾಲಿಕೆಯ ಉಪ ಕಾರ್ಯದರ್ಶಿ (ಆಡಳಿತ) ಯಾಗಿ ಕಾರ್ಯನಿರ್ಹಿಸುತ್ತಿದ್ದಾರೆ.. ಎಲ್ಲ ನೌಕರರನ್ನು ವಿಶ್ವಾಸದಲ್ಲಿ ತೆಗೆದುಕೊಂಡು ಹೋಗುವ ಸಾಮರ್ಥ್ಯ ಹೊಂದಿದ್ದಾರೆ.