ಪಾಲಿಕೆ ಜೊತೆ ಸಂಘರ್ಷಕ್ಕೆ ಸರ್ಕಾರ ಸಿದ್ಧತೆ..?

ಆಸ್ತಿ ತೆರಿಗೆ ಪರಿಷ್ಕರಣೆ ವಿಷಯ ಮುಗೀತು. ಈಗ ಭಾಷಾ ವಿಷಯ ಮುಂದಿಟ್ಟು ಪಾಲಿಕೆಗೆ ನೋಟೀಸ್ ಕೊಡುವ ಚಿಂತನೆ?

ಕನ್ನಡದಿಂದಲೇ ಕಲಾಪ‌ ಆರಂಭಿಸಿದ್ದ ಮೇಯರ್.

ಬೆಳಗಾವಿ.

ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆಯನ್ನು ಇಕ್ಕಟ್ಟಿಗೆ ಸಿಲುಕಿಸಲು ರಾಜ್ಯದ ಕಾಂಗ್ರೆಸ್ ಸರ್ಕಾರ ತೆರೆಮರೆ ಕಸರತ್ತು ನಡೆಸಿದೆಯೇ?

ಸಧ್ಯ ನಡೆದಿರುವ ಬೆಳವಣಿಗೆಯನ್ನು‌ ಗಮನಿಸಿದರೆ ಅಂತಹುದೊಂದು ಅನುಮಾ‌ನ ಬರತೊಡಗಿದೆ.

ಕಳೆದ ದಿನ ಮಹಾನಗರ ಪಾಲಿಕೆ ಪರಿಷತ್ ಸಭೆಯಲ್ಲಿ ಮೇಯರ್ ಸೇರಿದಂತೆ ಬಹುತೇಕ ನಗರ ಸೇವಕರು ಕನ್ನಡದಲ್ಲಿಯೇ ಮಾತನಾಡಿದ್ದಾರೆ. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಸ್ಥಾಪನೆಗೆ ಒಪ್ಪಿಗೆ‌ ಕೂಡ ನೀಡಲಾಗಿದೆ.

ಇಲ್ಲಿ ವಿರೋಧ ಪಕ್ಷಸವರು ಹಿಂದಿ‌ ಮತ್ತು ಮರಾಠಿಯಲ್ಲಿ ಮಾತನಾಡಿದರೆ ಅವರಿಗೆ ಅದೇ ಭಾಷೆಯಲ್ಲಿ ಉತ್ತರ ಕೊಡುವ ಕೆಲಸವನ್ನು ಮೇಯರ್ ಶೋಭಾ ಸೋಮನ್ನಾಚೆ ಮಾಡಿದ್ದಾರೆ.

ಆದರೆ ಪಾಲಿಕೆ ಸಭೆಯನ್ನು ಸಂಪೂರ್ಣವಾಗಿ ಅನ್ಯ ಭಾಷೆಯಲ್ಲಿ ಮಾಡಲಾಗಿದೆ ಎನ್ನುವ ಕಾರಣ ನೀಡಿ ನೋಟೀಸ್ ಕಳಿಸುವ ಕೆಲಸ ನಡೆದಿದೆ ಎಂದು ಗೊತ್ತಾಗಿದೆ.

ಹಾಗೆ ನೋಡಿದರೆ, ಈ ಹಿಂದೆ ಅಂದರೆ ಎಂಇಎಸ್‌ ಹಿಡಿತದಲ್ಲಿ ಪಾಲಿಕೆ ಇದ್ದಾಗ ಸಭೆ ಸಂಪೂರ್ಣ ಮರಾಠಿಯಲ್ಲಿಯೇ ನಡೆಯುತ್ತಿತ್ತು. ನೂರಕ್ಕೆ 90 ರಷ್ಡು ನಗರಸೇವಕರು ಮರಾಠಿಯಲ್ಕಿಯೇ ಮಾತನಾಡುತ್ತಿದ್ದರು ಮೇಯರ್ ಕೂಡ ಒಂದಕ್ಷರ ಸಹ ಕನ್ನಡ ಬಳಕೆ ಮಾಡುತ್ತಿರಲಿಲ್ಲ.

ಆದರೆ ಬಿಜೆಪಿ ಹಿಡಿತ ದಲ್ಲಿ ಪಾಲಿಕೆ ಇದ್ದರೂ ಕೂಡ ಶೇ 90 ರಷ್ಟು ನಗರಸೇವಕರು ಕನ್ನಡದಲ್ಲಿ ಮಾತನಾಡುತ್ತಾರೆ. ಮರಾಠಿ ಭಾಷಿಕ ನಗರಸೇವಕರೂ ಕೂಡ ಕನ್ನಡದಲ್ಲಿ ಪ್ರಶ್ನೆ ಕೇಳುತ್ತಾರೆ. ಇಲ್ಲಿ ವಿರೋಧಿ ಪಕ್ಷದ ಸದಸ್ಯರು ಹಿಂದಿಯಲ್ಲಿ ಮಾತನಾಡಿದ್ದಾರೆ.

ಆಡಳಿತ ಪಕ್ಷದ ನಾಯಕ ರಾಜಶೇಖರ ಡೋಣಿ, ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ವಾಣಿ ಜೋಶಿ, ರೆವಿನ್ಯು ಕಮಿಟಿ ಅಧ್ಯಕ್ಷೆ ವೀಣಾ ವಿಜಾಪುರೆ, ಹನುಮಂತ ಕೊಂಗಾಲಿ ಸೇರಿದಂತೆ ಇನ್ನೂ ಕೆಲವರು ಕನ್ನಡದಲ್ಲಿಯೇ ಮಾತನಾಡಿದ್ದಾರೆ. ಮೇಯರ್ ಅವರು ಆರಂಭದಲ್ಲಿಯೇ ಕನ್ನಡದಲ್ಲಿ ಸಭೆಯ ಕಲಾಪ ಶುರು ಮಾಡಿದ್ದರು. ಆದರೆ ಯಾರು ಯಾವ ಭಾಷೆಯಲ್ಲಿ ಪ್ರಶ್ನೆ ಕೇಳುತ್ತಾರೆಯೊ ಅವರಿಗೆ ಅದೇ ಭಾಷೆಯಲ್ಲಿ ಉತ್ತರ ಕೊಡುವ ಕೆಲಸ ಮಾಡಿದರು.

ಆದರೆ ಸರ್ಕಾರ ಪಾಲಿಕೆ ಗೆ ಮತ್ತೇ ನೋಟೀಸ್ ಕೊಡುವ ತಯಾರಿ ನಡೆಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಇದು ಮತ್ತೊಂದು ರೀತಿಯ ಸಂಘರ್ಷಕ್ಕೆ ಕಾರಣವಾಗಬಹುದು ಎನ್ನಲಾಗುತ್ತಿದೆ

Leave a Reply

Your email address will not be published. Required fields are marked *

error: Content is protected !!