ಬೆಳಗಾವಿ. 2024 ರ ಸ್ವಾಗತಕ್ಜೆ ಕುಂದಾನಗರಿ ಸಜ್ಜಾಗಿದೆ. 2023 ರಲ್ಲಿ ನಡೆದ ಕಹಿ ಮರೆತು ಮತ್ತು ಸಿಹಿ ನೆನಪಿಸಿಕೊಳ್ಳಲು ಪಾನೀಯ ವ್ಯವಸ್ಥೆ ಕೂಡ ರೆಡಿ ಆಗುತ್ತಿದೆ.
ಬರ ಬರ ಎನ್ನುತ್ತಲೇ ಎಲ್ಲರೂ ಕೂಲ್ ಕೂಲ್ ಪಾನೀಯ ಗಂಟಲೊಳಗಿಳಿಸಲು ರೆಡಿ ಆಗುತ್ತಿದ್ದಾರೆ.

ಬಹುಶಃ ಇಂದು ರಾತ್ರಿ 8 ರಿಂದ ಡಿಜೆ ಸಪ್ಪಳದೊಂದಿಗೆ ಗ್ಲಾಸುಗಳು ಸದ್ದು ಮಾಡಲು ಆರಂಭವಾಗಲಿವೆ.
ಅಧಿಕಾರಿಗಳೇ ಉಸ್ತುವಾರಿ ಹೊತ್ತಿರುವ ಬೆಳಗಾವಿ ಕ್ಲಬದಲ್ಲಿ ಟಿಕೇಟ್ ಮಾರಾಟ ಭರ್ಜರಿ ಆಗಿ ನಡೆದಿದೆ.
ಈ ಹಿಂದೇ ಇದೇ ಕ್ಲಬ್ ದಲ್ಲಿ ಅರೆಬೆತ್ತಲೆ ಕುಣಿತ ನಡೆದಿತ್ತು. ಅದು ಮಾಧ್ಯಮದಲ್ಲಿ ವರದಿ ಆದ ನಂತರ ಅಲ್ಲಿ ಕುಣಿತ ಬಂದ್ ಆಗಿತ್ತು. ಈಗ ಬೆಂಗಳೂರಿನಿಙದ ಡಿಜೆ ಕರೆಯಿಸಲಾಗಿದೆ.

ಇದನ್ನು ಬಿಟ್ಟರೆ ಬೆಳಗಾವಿಯ ಐಶಾರಾಮಿ ಹೊಟೇಲನಲ್ಲಿ ಕೂಡ ದುಬಾರಿ ಟಿಕೇಟ್ ಕೊಟ್ಟು ಹ್ಯಾಪಿ ನ್ಯೂ ಇಯರ್ ಎಂದು ಅಪ್ಪಿಕೊಂಡು ಅರಚುವವರೇ ಜಾಸ್ತಿ.

ಬೆಳಗಾವಿಯ ಕ್ಯಾಂಪ್ ಪ್ರದೇಶದಲ್ಲಿ ಓಲ್ಡ್ ಮ್ಯಾನ್ ದಹನ ಮಾಡಲಾಗುತ್ತದೆ. ಅದಕ್ಕಾಗಿ ಸಿದ್ಧತೆ ಕೂಡ ನಡೆದಿದೆ.