ಮತ್ತೊಂದು ಅಮಾನವೀಯ ಘಟನೆ ನಡೆದು ಹೋಯಿತಾ?

ಮತ್ತೊಂದು ನಾಗರಿಕ ಸಮಾಜ ತಲೆತಗ್ಗಿಸುವ ಘಟನೆಗೆ ಸಾಕ್ಷಿ ಆಯಿತಾ ಬೆಳಗಾವಿ ಜಿಲ್ಲೆ?

ಗೋಕಾಕ ,ಬೆಳಗಾವಿ ಮುಗೀತು..ಈಗ ಬೈಲಹೊಂಗಲ ಸಾಕ್ಷಿ?

ಆರಂಭದಲ್ಲಿ ಸಂತ್ರಸ್ತೆ ನೆರವಿಗೆ ಬಾರದ ಬೈಲಹೊಂಗಲ ಪೊಲೀಸರು?

ಬೆಂಗಳೂರಿನವರು ಎಚ್ಚರಿಸಿದ ನಂತರ ಕೇಸ್ ರಿಜಿಸ್ಟರ್ ಆಯಿತಾ?

ಬೆಳಗಾವಿ.

ಗಡಿನಾಡ ಬೆಳಗಾವಿ ಜಿಲ್ಲೆ‌ಮೇಲೆ ಯಾರ ವಕ್ರದೃಷ್ಟಿ ಬಿದ್ದಿದೆ ಗೊತ್ತಿಲ್ಲ. ಇಡೀ ನಾಗರಿಕ ಸಮಾಜ ತಲೆತಗ್ಗಿಸುವ ಘಟನೆಗಳಿಗೆ ಬೆಳಗಾವಿ ಸಾಕ್ಷಿಯಾಗತೊಡಗಿದೆ.

ಗೋಕಾಕ ತಾಲೂಕಿನ ಘಟಪ್ರಭಾಲ್ಲಿ ದಲಿತ ಮಹಿಳೆಗೆ ಚಪ್ಪಲಿ‌ಹಾರ ಹಾಕಿ ಮೆರವಣಿಗೆ ಮಾಡಲಾಯಿತು. ಆ ಪ್ರಕರಣ ಮರೆಮಾಸುವ ಮುನ್ನವೇ ಬೆಳಗಾವಿ ತಾಲೂಕಿನ ಪುಟ್ಡ ಹಳ್ಳಿಯಲ್ಲಿ ಮತ್ತೊಂದು ಅಂದರೆ ಭಯಾನಕ ಘಟನೆ ನಡೆದು ಹೋಯಿತು.

ಇಲ್ಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರೇ ಖುದ್ದು ಘಟನಾ ಸ್ಥಳಕ್ಕೆ ಹೋಗಿ ಭೆಟ್ಟಿ ನೀಡಿದ್ದರು.ಇದರ ಜಿತೆಗೆ ಇಡೀ ಸರ್ಕಾರವೇ ಘಟನೆ ಬಗ್ಗೆ ಕಳವಳ ವ್ಯಕ್ತಪಡಿಸಿತ್ತು. ಆಗ ಕಾಕತಿ ಸಿಪಿಐ ಅವರನ್ಬು ಸರ್ಕಾರ ಅಮಾನತ್ ಮಾಡಿದ್ದಲ್ಲದೇ ಪ್ರಕರಣವನ್ಬು ಸಿಐಡಿಗೆ ವಹಿಸಿತ್ತು.

ಇದೆಲ್ಲದರ ಮಧ್ಯೆ ಈ ಎರಡೂ ಘಟನೆಗಳನ್ನು ಮೀರಿಸುವಂತಹ ಅತ್ಯಂತ ಅಮಾನವೀಯ ಘಟನೆ ಬೈಲಹೊಂಗಲ ತಾಲೂಕಿನ ಹಳ್ಳಿಯಲ್ಲಿ ನಡೆದಿದೆ.

ಈ ಘಟನೆಯಲ್ಲೂ ಕೂಡ ವಿವಾಹಿತೆ ಜೊತೆ ಅತ್ಯಂತ ಕೆಟ್ಟ ರೀತಿಯಲ್ಲಿ ನಡೆದುಕೊಳ್ಳಲಾಗಿದೆ ಅಂತೆ.

ಇಲ್ಲಿ ಘಟನೆ ಬಗ್ಗೆ ಬೈಲಹೊಂಗಲ ಪೊಲೀಸರು ನಿರ್ಲಕ್ಷ್ಯ ವಹಿದರೆಂಬ ಆರೋಪ ಕೇಳಿ ಬಂದಿತ್ತು. ನಂತರ ಸಂತ್ರಸ್ತೆ ನೇರವಾಗಿ ಬೆಂಗಳೂರಿನ ಹಿರಿಯಪೊಲೀಸ್ ಅಧಿಕಾರಿಯನ್ನು ಭಿಟ್ಟಿ ಮಾಡಿದರು.ಅಲ್ಲಿಂದ ಖಡಕ್ ವಾರ್ನಿಂಗ್ ಬಂದ ನಂತರ ಬೈಲಹೊಂಗಲ ಪೊಲೀಸರುಬಪ್ರಕರಣ ದಾಖಲು ಮಾಡಿಕೊಂಡರು ಎಂದು ಗೊತ್ತಾಗಿದೆ. ಈಗ ಈ ಪ್ರಕರಣವನ್ಬು ಬೆಳಗಾವಿಯ ಹಿರಿಯ ಪೊಲೀಸ್ ಅಧಿಕಾರಿಗಳು ತಪ್ಪಿತಸ್ಥರ ವಿರುದ್ಧ ಯಾವ ಕ್ರಮ ತೆಗೆದುಕೊಳ್ಳುತ್ತಾರೆ ಎನ್ನುವುದನ್ಬು ಕಾದು ನೋಡಬೇಕು. ಈ ಘಟನೆಯಲ್ಲಿ ಗ್ಪಾಮ ಪಂಚಾಯತನ ಕೆಲ ಸದಸ್ಯರೇ ಭಾಗಿಯಾಗಿದ್ದು ಒಟ್ಟು 20 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!