ಬೆಳಗಾವಿ.
ಎಸ್ ಸಿ, ಎಸ್ಟಿ ಮೀಸಲು ಅನುದಾನವನ್ನು ದುರುಪಯೋಗ ಪಡಿಸಿಕೊಂಡ ಆರೋಪದ ಹಿನ್ನೆಲೆಯಲ್ಲಿ ನಗರಸೇವಕ ರವಿ ಧೋತ್ರೆ ಅವರ ಸದಸ್ಯತ್ವವನ್ನು ರದ್ದುಗೊಳಿಸಬೇಕೆಂದು ಸಫಾಯಿ ಕರ್ಮಚಾರಿ ಸಮಿತಿ ಜಿಲ್ಲಾ ಘಟಕ ಆಗ್ರಹಿಸಿದೆ.
ಈ ಬಗ್ಗೆ ಘಟಕದ ಪದಾಧಿಕಾರಿಗಳು ಗಂಭೀರ ಆರೋಪ ಹೊರೆಸಿ ಪಾಲಿಕೆ ಆಯುಕ್ತರಿಗೆ ಮನವಿ ಪತ್ರ ಅರ್ಪಿಸಿದ್ದಾರೆ.

ಗೌರವಾಧ್ಯಕ್ಷ ಮುನಿಸ್ವಾಮಿ ಭಂಡಾರಿ ಮತ್ತು ವಿಜಯ ನೀರಗಟ್ಟಿ ಮುಂತಾದವರ ನೇತೃತ್ವದಲ್ಲಿ ದಾಖಲೆ ಸಮೇತ ಮನವಿ ಅರ್ಪಿಸಲಾಗಿದೆ
ಮನವಿ ಪತ್ರದಲ್ಲೇನಿದೆ?

ವಾರ್ಡ ನಂ 28ರ ನಿವಾಸಿಗಳಾದ ನಾವು ಈ ಮೂಲಕ ನೀಡುತ್ತಿರುವ ದೂರು ಏನೆಂದರೆ, ವಾರ್ಡ ನಂ 28 ಎಸಿ/ಎಸ್‌ಟಿ ಮಿಸಲು ಕ್ಷೇತ್ರದ ನಗರ ಸೇವಕ ರವಿ ದೋತ್ರೆ ರವರು ಎಸಿ/ಎಸ್‌ಟಿ ಮೀಸಲು ನಿಧಿಯನ್ನು ಎಸಿ/ಎಸ್‌ಟಿ ಜನರ ಅಭಿವೃದ್ಧಿಗಾಗಿ ಬಳಸದೇ ತಮ್ಮ ಸ್ವಾದೀನದಲ್ಲಿರುವ ದುರ್ಗಾದೇವಿ ಮಂಗಲ ಕಾರ್ಯಲಯಕ್ಕೆ ಬಳಸಿಕೊಡಿದ್ದಾರೆ.

ಇದರಿಂದಾಗಿ ಎಸಿ, ಎಸ್‌ಟಿ ಸಮುದಾಯದ ಜನರು ವಾಸಿಸುವ ಪೌರಕಾರ್ಮಿಕರ ವಸತಿ ಗೃಹದಲ್ಲಿ ಮೂಲಭೂತ ಸೌಕರ್ಯಗಳಾದ ಶುದ್ಧ ಕುಡಿಯುವ ನೀರು, ಶೌಚಾಲಯ ಒಳಚರಂಡಿ, ಬೀದಿ ದೀಪ, ರಸ್ತೆ ಇವುಗಳ ಅಭಿವೃದ್ಧಿ ಕಾಣದೆ ಜನರು ಪರದಾಡುವಂತಾಗಿದೆ.

ಚುನಾವಣೆ ನಂತರ ಒಂದು ಬಾರಿಯೂ ಕೂಡ ಪೌರಕಾರ್ಮಿಕ ವಸತಿ ಗೃಹಕ್ಕೆ ಬೇಟಿ ನೀಡಿಲ್ಲ ಹಾಗೂ ಸಮಸ್ಯೆ ಹೇಳಲು ಹೋದಾಗ ಸ್ಪಂದನೆಯನ್ನು ನೀಡಿರುವುದಿಲ್ಲಾ ಹಾಗೂ ಸೂಸ್ತಿತಿಯಲ್ಲಿದ್ದ ಮಾರುತಿ ದೇವಸ್ಥಾನವನ್ನು ಅಭಿವೃದ್ಧಿ ಪಡಿಸುತ್ತೆನೆಂದು ಹೇಳಿ ಕಾಮಗಾರಿ ಕೈಗೆತ್ತಿಕೊಂಡು ನೆಲವನ್ನು ಅಗೆದಿದ್ದು ಕಾಮಗಾರಿಯಲ್ಲಿ ಅಕ್ರಮವೆಸಗಿದ್ದಾರೆಂದು ದೂರಲಾಗಿದೆ.ಇಲ್ಲಿ ಚೆನ್ನಾಗಿದ್ದ ದೇವಸ್ಥಾನವನ್ನು ಹಾಳುಗೆಡವಿರುತ್ತಾರೆಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ.
ಚುನಾವಣೆ ಸಂದರ್ಭದಲ್ಲಿ ಪ್ರತಿ ಕಾರ್ಮಿಕರ ಮನೆಯಿಂದ ಒಬ್ಬರನ್ನು ಹೊರಗುತ್ತಿಗೆ ಆದಾರದ ಮೇಲೆ ಕೆಲಸ ಕೊಡಿಸುವುದಾಗಿ ಆಶ್ವಾಸನೆ ಕೊಟ್ಟು ಇಲ್ಲಿಯವರೆಗೂ ಒಬ್ಬರನ್ನು ನೇಮಿಸಿಕೊಂಡಿರುವುದಿಲ್ಲಾ ಹಾಗೂ ಪೌರ ಕಾರ್ಮಿಕರ ವಸತಿ ನಿಲಯದಲ್ಲಿ ಹಮ್ಮಿಕೊಳ್ಳಲಾದ ಡಾ|| ಬಾಬಾಸಾಹೇಬ ಅಂಬೇಡ್ಕರ ರವರ ಜಯಂತಿ, ಮಹಾಪರಿ ನಿರ್ವಾಣ ದಿವಸ, ರಾಷ್ಟ್ರೀಯ ಸಂವಿದಾನ ದಿವಸ, ಬೀಮಾ ಕೋರೆಗಾಂವ ದಿನ ಹೀಗೆ ಸಾಹೇಬ ಅಂಬೇಡ್ಕರ ರವರಿಗೆ ಸಂಬಂಧಿಸಿದ ಎಲ್ಲಾ ಕಾರ್ಯಕ್ರಮಗಳಿಗೆ ಅಹ್ವಾನ ನೀಡಿದಾಗ್ಯೂ ಬಾರದೆ ಬಾಬಾ ಸಾಹೇಬ ಅಂಬೇಡ್ಕರವರಿಗೆ ಅವಮಾನಿಸಿರುತ್ತಾರೆಂದೂ ದೂರಲಾಗಿದೆ ಪೌರಕಾರ್ಮಿಕ ಕುಟುಂಬದ ನಿರುದ್ಯೋಗಿ ಯುವಕರಿಗೆ ಎಸಿ/ಎಸ್‌ಟಿ ನಿಧಿಯಿಂದ ಆಟೋ ರಿಕ್ಷಾ ನೀಡದೆ ತಮಗೆ ಬೇಕಾದ ತಮ್ಮ ಜನರಿಗೆ ಆಟೋ ರಿಕ್ಷಾ ಕೊಡಿಸಿರುತ್ತಾರೆ. ಈ ಕುರಿತು ಕೇಳಲು ಹೋದಾಗ ನಮ್ಮ ಮೇಲೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೇದರಿಕೆ ಹಾಕಿರುತ್ತಾರೆ. ಕಾರಣ ಎಸಿ/ಎಸ್‌ಟಿ ಮೀಸಲು ಕ್ಷೇತ್ರದ ಹಣವನ್ನು ದುರುಪಯೋಗ ಪಡಿಸಿಕೊಂಡಿರುವ ಹಾಗೂ ಡಾ।। ಬಾಬಾ ಸಾಹೇಬ ಅಂಬೇಡ್ಕರ್‌ರವರಿಗೆ ಅವಮಾನ ಮಾಡಿರುವ ದಲಿತ ವಿರೋದಿ ನಗರ ಸೇವಕ ರವಿ ದೋತ್ರೆ ರವರ ಸದಸ್ಯತ್ವವನ್ನು ರದ್ದುಗೊಳಿಸಬೇಕೆಂದು ಮನವಿ ಪತ್ರದಲ್ಲಿ ಕೇಳಿಕೊಳ್ಳಲಾಗಿದೆ