ಬೆಳಗಾವಿ.
ಮತ್ತೊಮ್ಮೆ ಮೋದಿ ಗೋಡೆ ಬರಹ ಸ್ಟೆನ್ಸಿಲ್ ನ್ನು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಬಿಡುಗಡೆ ಮಾಡಿದರು.
ಬಿಜೆಪಿ ಮುಖಂಡ ಮುಕ್ತಾರ ಅಹ್ಮದ ಪಠಾಣ ಅವರು ಸಿದ್ಧಪಡಿಸಿದ್ದ ಈ ವಾಲ್ ಪೇಪರ್ ಸ್ಟೇನ್ಸಿಲನ್ನು ಸಂಸದರು ತಮ್ನ ಕಚೇರಿಯಲ್ಲಿ ಬಿಡುಗಡೆ ಮಾಡಿದರು.

ಲೋಕಸಭೆ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿರುಚ ಬಿಜೆಪಿ, ಕೇಂದ್ರದ ಸಾಧನೆಗಳನ್ನು ಮನೆ ಮನೆ ತಲುಪಿಸುವ ಕೆಲಸವನ್ನು ಮಾಡುತ್ತಿದೆ.
ಈ ಹಿನ್ನೆಲೆಯಲ್ಲಿ ಆಭಿಯಾನ ರೂಪದಲ್ಲಿ ವಿಶೇಷ ಯೋಜನೆಗಳನ್ನು ಬಿಜೆಪಿ ಹಮ್ನಿಕೊಂಡಿದೆ.

ರಾಜ್ಯಸಭಾ ಸದಸ್ಯರ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಈ ವಾಲ್ ಪೇಪರ್ ಸ್ಟೇನ್ಸಿಲ್ ನ್ನು ಬಿಜೆಪಿ ಕಾರ್ಯಕರ್ತ ಪ್ರಜ್ವಲ್ ಕುಲಕರ್ಣಿ ಅವರಿಗೆ ನೀಡುವ ಮೂಲಕ ಚಾಲನೆ ನೀಡಿದರು.
ಬಿಜೆಪಿ ಮುಖಂಡರಾದ ರಾಜೇಂದ್ರ ಹರಕುಣಿ, ಬಸವರಾಜ ಕಡಾಡಿ ಮುಂರಾದವರು ಈ ಸಂದರ್ಭದಲ್ಲಿ ಹಾಜರಿದ್ದರು.