ಬೆಳಗಾವಿ ದಕ್ಷಿಣದಲ್ಲಿ ಮತ್ತೊಮ್ಮೆ ಮೋದಿ ಅಭಿಯಾನ ಚುರುಕು.
ಶಾಸಕ ಅಭಯ ಪಾಟೀಲರ ನೇತೃತ್ವ. ವಾರ್ಡ 43 ರಲ್ಲಿ ಭರ್ಜರಿಯಾಗಿ ಮುಂದುವರೆದ ಅಭಿಯಾನ.
ನಗರಸೇವಕಿ ವಾಣಿ ಜೋಶಿ ನೇತೃತ್ವದಲ್ಲಿ ವಾರ್ಡನಲ್ಲೆಡೆ ಮೋದಿ ಗೋಡೆ ಬರಹ ಅಭಿಯಾನ. ಜನ ಫುಲ್ ಖುಷ್.
ದಕ್ಷಿಣದಲ್ಲಿ ಬಿಜೆಪಿ ಹವಾ
ಬೆಳಗಾವಿ.
ಗಡಿನಾಡ ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಮತ್ತೊಮ್ಮೆ ಮೋದಿ ಅಭಿಯಾನ ಭರ್ಜರುಯಾಗಿನಡೆಯುತ್ತಿದೆ.
ಕೇಂದ್ರ ಸರ್ಕಾರದ ಸಾಧನೆಗಳನ್ನು ಜನರ ಮನದ ಮನೆಗೆ ತಲುಪಿಸುವುದರ ಜೊತೆಗೆ ಮತ್ತೊಮ್ಮೆ ಮೋದಿ ಗೋಡೆ ಬರಹ ಅಭುಯಾನ ವಿಶೇಷವಾಗಿ ಬೆಳಗಾವಿ ದಕ್ಷಿಣ ವಿಧಾಸ ಸಭಾ ಕ್ಷೇತ್ರದಲ್ಲಿ ಭರ್ಜರಿಯಾಗಿ ನಡೆದಿದೆ.


ಗಮನಿಸಬೇಕಾದ ಸಂಗತಿ ಎಂದರೆ, ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲರ ಮಾರ್ಗದರ್ಶನದಲ್ಲಿ ವಾರ್ಡ ನಂಬರ 43 ರ ನಗರಸೇವಕಿ ಮತ್ತು ನಗರ ಯೋಜನೆ ಹಾಗು ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ವಾಣಿ ವಿಲಾಸ ಜೋಶಿ ಅವರ ನೇತೃತ್ವದಲ್ಲಿಬ ಈ ಅಭಿಯಾನ ಯಶಸ್ವಿಯಾಗಿ ನಡೆದಿದೆ

ವಾರ್ಡ ನಂಬರ 43 ರಲ್ಲಿಬರುವ ಬೂರ್ ನಂಬರ 4,6, 21, 22, 33, 37 ,38 ರಲ್ಲಿ ಅಲ್ಲಿನ ನಿವಾಸಿಗಳ ಸಹಕಾರದಿಂದ ಅಭಿಯಾನವನ್ನು ಯಶಸ್ವಿಗೊಳಿಸಲಾಯಿತು.



ಕಳೆದ ದಿ._22 ರಙದು ಅಯೋಧ್ಯೆಯಲ್ಲಿ ರಾಮ ಮಂದಿರ ಲೋಕಾರ್ಪಣೆ ಸಂದರ್ಭದಲ್ಲಿ ಶಾಸಕ ಅಭಯ ಪಾಟೀಲರು ಕೊಡಮಾಡಿದ ಮೋತಿಚೂರು ಲಾಡುವನ್ನು ದಕ್ಷಿಣ ಕ್ಷೇತ್ರದ ಪ್ರತಿಯೊಂದು ವಾರ್ಡನ ಮನೆ ಮಬೆಗೆ ವಿತರಿಸುವ ಕೆಲಸವು ವ್ಯವಸ್ಥಿತವಾಗಿ ನಡೆದಿತ್ತು.


ಗಮನಿಸಲಬೇಕಾದ ಸಂಗತಿ ಎಂದರೆ ಸುಮಾರು 5 ಲಕ್ಷ ಲಾಡುವನ್ನು ಶಾಸಕರು ಪ್ರತಿಯೊಬ್ಬರ ಮನೆಮನೆಗೂ ತಲುಪಿಸುವ ಹಾಗೆ ನೋಡಿದರು.
ಇದರ ಜೊತೆಗೆ ನಗರಸೇವಕಿ ವಾಣಿ ಜೋಶಿ ಅವರು ಶಾಸಕರ ಮಾರ್ಗದರ್ಶನ ದಲ್ಲಿ ವಾರ್ಡನ ಪ್ರತಿ ಮನೆಗೆ ಶ್ರೀರಾಮನ ಶ್ವಜವನ್ನು ತಲುಪಿಸುವ ಕೆಲಸ ಮಾಡಿದ್ದು ವಿಶೇಷವಾಗಿತ್ತು. ಅಷ್ಟೇ ಅಲ್ಲ ವಾರ್ಡನ್ನು ಕೇಸರಿಮಯ ಮಾಡಿದ್ದರು