ಬೆಳಗಾವಿ.ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪಮೇಯರ್ ಚುನಾವಣೆಗೆ ಕೊನೆಗೂ ಮುಹೂರ್ತ ಫಿಕ್ಸ್ ಆಗಿದೆ.
ಬರುವ ಫೆಬ್ರವರಿ 15 ರಂದು ಚುನಾವಣೆ ನಡೆಯಲಿದೆ. ಚುನಾವಣೆ ಅಧಿಕಾರಿಗಳು ಆಗಿರುವ ಪ್ರಾದೇಶಿಕ ಆಯುಕ್ತರು ಈ ಕುರಿತು ಆದೇಶ ಮಾಡಿದ್ದಾರೆಂದು ಮೂಲಗಳು ಖಚಿತಪಡಿಸಿವೆ.

ಇನ್ನು ಇವತ್ತು ಅಥವಾ ನಾಳೆ ಪಾಲಿಕೆಯ ಎಲ್ಲ ನಗರಸೇವಕರಿಗೆ ನೋಟೀಸ್ ಕಳಿಸುವ ಕೆಲಸ ಆಗಬಹುದು. ಮೇಯರ್ ಸ್ಥಾನ ಎಸ್ಸಿ ಮಹಿಳೆ ಮತ್ತು ಉಪಮೇಯರ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ. ಇದು ಬಿಜೆಪಿ ಅವಧಿಯ ಎರಡನೇ ಮೇಯರ. ಈಬಾರಿ ಬೆಳಗಾವಿ ಉತ್ತರ ಕ್ಷೇತ್ರಕ್ಕೆ ಮೇಯರ್ ಮತ್ತು ದಕ್ಷಿಣಕ್ಕೆ ಉಪ ಮೇಯರ್ ಸ್ಥಾನ ಬರಲಿದೆ.