ಮಂಗಲಾ ಅಂಗಡಿ ಕಣ್ಣೀರಿಗೆ ಭಾವುಕರಾದ ಮತದಾರರು..!

ಸಂಸದೆ ಮಂಗಲಾ ಅಂಗಡಿ ಕಣ್ಣೀರು ಹಾಕಿದ್ದೇಕೆ?

ಬೆಳಗಾವಿ:
ಚುನಾವಣೆ ಅಥವಾ ಮತ್ತೊಂದು ಏನೇ ಇರಲಿ .ವ್ಯಕ್ತಿ ಜೀವಿತವಾಗಿದ್ದಾಗ ಏನು ಬೇಕಾದರೂ ಆರೋಪ ಮಾಡಬಹುದು, ಅದನ್ನು ಯಾರೂ ಅಷ್ಟೊಂದು ಗಂಭೀರವಾಗಿ ಪರಿಗಣಿಸಲ್ಲ.
ಆದರೆ ಸತ್ತು ಹೋದ ವ್ಯಕ್ತಿ ಬಗ್ಗೆ ಚುನಾವಣೆಯಲ್ಲಿ ಆರೋಪ ಮಾಡುತ್ತ ಹೋದರೆ ಅದನ್ನು ಜನ ಸಹಿಸಿಕೊಳ್ಳುತ್ತಾರಾ? ಅದನ್ನು ಒಪ್ಪುವುದೇ ಇಲ್ಲ.
ಏಕೆಂದರೆ ಬೆಳಗಾವಿ ಲೋಕಸಭೆ ಕ್ಷೇತ್ರದ ಪ್ರಜ್ಞಾವಂತ ಮತದಾರರು ಭಾವನಾ ಜೀವಿಗಳು, ಸತ್ತ ವ್ಯಕ್ತಿ ಬಗ್ಗೆ ಇಲ್ಲ ಸಲ್ಕದ್ದನ್ನು ಮಾತನಾಡಿದರೆ ಸಹಿಸಿಕೊಳ್ಳಲ್ಲ ಎನ್ನುವುದು ಸ್ಪಷ್ಡ.


ಇಲ್ಲಿ ಸ್ಪಷ್ಟವಾಗಿ ಹೇಳಬೇಕೆಂದರೆ ಕಳೆದ ದಿನ ಅಂದರೆ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಡರ್ ನಾಮಪತ್ರ ಸಲ್ಲಿಸುವ ದಿನ ಸಂಸದೆ ಮಂಗಲಾ ಸುರೇಶ ಅಂಗಡಿ ಕುಟುಂಬ ಕಣ್ಣೀರಿಟ್ಟಿದೆ. ಅದಕ್ಕೆ ಕಾರಣ ಹಲವು.
ಸಹಜವಾಗಿ ಶೆಟ್ಟರ ಮತ್ತು ಅಂಗಡಿ ಕುಟುಂಬ ದಿ. ಸುರೇಶ ಅಂಗಡಿಯವರ ಭಾವಚಿತ್ರಕ್ಕೆ ನಮಸ್ಕರಿಸುವ ಸಂದರ್ಭದಲ್ಲಿ ಪತ್ನಿ ಮಂಗಲಾ ಅಂಗಡಿ, ಪುತ್ರಿ ಶೃದ್ಧಾ ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ. ಇದು ಒಂದು ಭಾಗ.

ಮತ್ತೊಂದು ಸಂಗತಿ ಎಂದರೆ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಕಾಂಗ್ರೆಸ್ ಅಭ್ಯರ್ಥಿ ಮೃನಾಲ್ ಹೆಬ್ಬಾಳಕರ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಸುರೇಶ ಅಂಗಡಿ ಸಾವಿನ ಬಗ್ಗೆ ಮಾತಾಡಿದ್ದರು. ಅವರ ಮೃತದೇಹವೂ ಬೆಳಗಾವಿಗೆ ಬರಲಿಲ್ಲ ಎನ್ನುವ ಮಾತನ್ನಾಡಿ ಬಿಜೆಪಿ ಟೀಕುಸಿದ್ದರು. ಆದರೆ ಸುರೇಶ ಅಂಗಡಿ ನಿಧನರಾದಾಗ ಯಾವ ಪರಿಸ್ಥಿತಿ ಇತ್ತು ಎನ್ನುವುದು ಎಲ್ಲರಿಗೂ ಗೊತ್ತಿತ್ತು. ಇದರ ಬಗ್ಗೆ ಬಿಜೆಪಿಯ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮಾತನಾಡಿ ಡಿಕೆಶಿ ಹೇಳಿಕೆ ಬಗ್ಗೆ ತೀವೃ ಅಸನಾಧಾನ ವ್ಯಕ್ತಪಡಿಸಿದ್ದರು. ಕಾಂಗ್ರೆಸ್ ನ ಈ ಕ್ಷುಲ್ಲಕ ರಾಜಕಾರಣ ಸಂಸದೆ ಮಂಗಲಾ ಅಂಗಡಿ ಮನಸ್ಸಿಗೆ ಘಾಸಿಯನ್ನುಂಟು ಮಾಡಿತ್ತು.

ಲಕ್ಷ್ಮೀ ಹೆಬ್ಬಾಳಕರ

ಮತ್ತೊಂದು ಸಂಗತಿ ಎಂದರೆ, ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರು ತಮ್ಮ ಪ್ರಚಾರದ ಭರಾಟೆಯಲ್ಲಿ ಕಳೆದ ಹತ್ತು ವರ್ಷದಿಂದ ಬಿಜೆಪಿ ಸಂಸದರು ಏನು ಮಾಡಿದ್ದಾರೆ? ಬೆಳಗಾವಿಗೆ ಅವರ ಕೊಡುಗೆ ಏನು ಎಂದು ಟೀಕಿಸಿದ್ದರು.

ಸಂಸದೆ ಮಂಗಲಾ ಅಂಗಡಿ ಕಣ್ಣೀರು ಹಾಕಿದ್ದ ವಿಡಿಯೊ

ಇಲ್ಲಿ ಹಾಲಿ ಸಂಸದೆ ಮಂಗಲಾ ಅಂಗಡಿ ಬಗ್ಗೆ ಟೀಕೆ ಮಾಡಿದ್ದರೆ ಅದನ್ನು ಯಾರೂ ಗಂಭೀರವಾಗಿ ಪರಿಗಣಿಸುತ್ತಿಲ್ಕ. ಆದರೆ ಸತ್ತವರ ಬಗ್ಗೆ ಟೀಕೆ ಮಾಡಿದ್ದು ಕೂಡ ಮತದಾರರ ಮೇಲೆ ಒಂದು ರೀತಿಯ ಪರಿಣಾಮ ಬೀರುವುದರಲ್ಲಿ ಎರಡು ಮಾತಿಲ್ಲ.


ಮಂಗಲಾ ಅಂಗಡಿ ಎಂಥವರು?
ಬೆಳಗಾಚಿ ಲೋಕಸಭಾ ಕ್ಷೇತ್ರದಲ್ಲಿ ಈಗಲೂ ಕೂಡ ಅಂಗಡಿ ಕುಟುಂಬಕ್ಕೆ ಒಂದು ರೀತಿಯ ಗೌರವವಿದೆ.
ಸುರೇಶ ಅಂಗಡಿಯವರಿಗೆ ಜನ ಯಾವ ರೀತಿ ಗೌರವ ಕೊಡುತ್ತಿದ್ದರೋ ಅಷ್ಟೆ ಗೌರವ, ಸಮ್ಮಾನ ಇವರಿಗೂ ಸಿಗುತ್ತಿದೆ.


ಸಿಂಪಲ್ ಆಗಿ ಹೇಳಬೇಕೆಂದರೆ, ಮಂಗಲಾ ಅಂಗಡಿ ಸಂಭಾವಿತ, ಸುಂಸಕೃತ ಮಹಿಳೆ. ಯಾರೊಂದಿಗೂ ದ್ವೇಷ ಕಟ್ಟಿಕೊಳ್ಳದೇ ಎಲ್ಲರನ್ನೂ ಗೌರವದಿಂದ ಕಾಣುವ ಮಹಿಳೆ. ಅಂತಹ ಮಹಿಳೆ ಕಣ್ಣೀರು ಹಾಕಿದ್ದನ್ನು ಜನ ಮರೆತಿಲ್ಲ.
ಹೀಗಾಗಿ ಈ ಕಣ್ಣೀರು ಮತದಾರರ ಮೇಲೆ ಯಾವ ರೀತಿ ಪರಿಣಾಮ ಬೀರಬಹುದು ಎನ್ನುವುದನ್ನು ಕಾಲವೇ ಹೇಳಬೇಕು
.

Leave a Reply

Your email address will not be published. Required fields are marked *

error: Content is protected !!