ಜೊಲ್ಲೆಗೆ ಯಾವ ಕಾರಣಕ್ಕೆ ವಿರೋಧ? ಪ್ರಿಯಾಕಾಗೆ ಯಾರ ಬಲ ಗೊತ್ತಾ?
ಲಕ್ಷ್ಮಣ ಸವದಿ ಪವರ್ ಹೇಗಿದೆ ಗೊತ್ತಾ?.
ಬೆಳಗಾವಿ: ಚಿಕ್ಕೋಡಿ ಹಾಲಿ ಸಂಸದ ಅಣ್ಣಾ ಸಾಹೇಬ ಜೊಲ್ಲೆಯವರು ತಮ್ಮ ಬೆನ್ನಿಗಿದ್ದ ಆ ಶಕ್ತಿಯನ್ನು ಕಳೆದುಕೊಂಡರೇ?
ಅಥವಾ ಚಿಕ್ಕೋಡಿ ಭಾಗದ ಮೂವರು ಸಾಹುಕಾರರ ಶಕ್ತಿ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿಗೆ ಅನೆ ಬಲ ತಂದಿದೆಯೇ?
ಹೀಗೋದು ಚರ್ಚೆಗಳು ಚಿಕ್ಕೋಡಿ ಲೋಕಸಭೆ ಕ್ಷೇತ್ರದಲ್ಲಿ ಕೇಳಿ ಬರುತ್ತಿವೆ. ಸಧ್ಯ ನಡೆಯುತ್ತಿರುವ ಬೆಳವಣಿಗೆಯನ್ನು ಗಮನಿಸಿದರೆ ಪ್ರಿಯಾಂಕಾಗೆ ಸಾಹುಕಾರರ ಶಕ್ತಿ ಆನೆ ಬಲ.ತಂದಿದೆ ಎಂದು ಹೇಳಬಹುದು.
ಅದೇ ಕಾರಣಕ್ಕೆ ತಮ್ಮ ಲೋಕಸಭಾ ಕ್ಷೇತ್ರದಲ್ಲಿ ಅಣ್ಣಾ ಒಂಟಿಯಾದರೆ?
ಹೌದು… ಹೀಗೊಂದು ಪ್ರಶ್ನೆ ಸದ್ಯ ಆ ಭಾಗದ ರಾಜಕೀಯ, ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ.
.ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಅಣ್ಣಾ ಸಾಹೇಬ ಜೊಲ್ಲೆಯವರ ಬೆನ್ನಿಗೆ ಇದ್ದ ಆ ಮೂರು ಶಕ್ತಿಗಳು ಈಗ ಅಂತರ ಕಾಯ್ದುಕೊಂಡಿವೆ.
ಬದಲಾದ ದಿನಮಾನದಲ್ಲಿ ಈ ಶಕ್ತಿ ಕಳೆದುಕೊಂಡ ಅಣ್ಣಾಸಾಹೇಬರಿಗೆ ಚೈತನ್ಯ ತುಂಬುವ ಹೊಸ ಶಕ್ತಿ ಇನ್ನು ಸಿಕ್ಕದೆ ಇರುವುದು ಸ್ವತಃ ಜೊಲ್ಲೆ ಕುಟುಂಬಕ್ಕೂ ಆತಂಕವನ್ನು ತಂದಿದೆ ಎಂದು ಹೇಳಲಾಗಿದೆ.
ಅಷ್ಟಕ್ಕೂ ಆ ಶಕ್ತಿ ಯಾವುದು ಅಂತೀರಾ? ಅದೇ ಈ ಸ್ಟೋರಿಯ ಹೂರಣ. ಕಳೆದ ಚುನಾವಣೆಯಲ್ಲಿ ಜೊಲ್ಲೆಯವರಿಗೆ ಬೆಂಗಾವಲಾಗಿ ನಿಂತವರಲ್ಲಿ ಮಾಜಿ ಸಚಿವ ರಮೇಶ ಜಾರಕಿಹೊಳಿ ಒಬ್ಬರು.
ಆಗ ಅದೆಷ್ಟೊ ಬಾರಿ ಜೊಲ್ಲೆ ಫಾರ್ಮ್ ಹೌಸಲ್ಲಿ ರಹಸ್ಯ ಸಭೆ ಸಹ ನಡೆಸಿ ಚರ್ಚೆಯಾಗಿತ್ತು..
ಗಮನಿಸಬೇಕಾದ ಸಂಗತಿ ಎಂದರೆ ಆಗ ಜೊಲ್ಲೆ ಬೆನ್ನ ಹಿಂದಿನ ಶಕ್ತಿಯಾಗಿ ಅಂದಿನ ಬಿಜೆಪಿಯ ನಾಯಕ, ಮಾಜಿ ಡಿಸಿಎಂ ಲಕ್ಷ್ಮಣ ಸವದಿಯವರು ಕೂಡಾ ದೊಡ್ಡ ಶಕ್ತಿಯಾಗಿ ನಿಂತಿದ್ದರು.
ಆಗ ಅಥಣಿ, ಕಾಗವಾಡ, ನಿಪ್ಪಾಣಿ ಭಾಗದಲ್ಲಿ ಹಿಡಿತ ಹೊಂದಿದ್ದ ಸವದಿಯವರು ಪ್ರಚಾರಕ್ಕೆ ಹೋಗಿ ಜೊಲ್ಲೆ ಗೆಲುವಿಗೆ ಕಾರಣರಾಗಿದ್ದರು.
ಇವರಿಬ್ಬರಲ್ಲದೆ ಜೊಲ್ಲೆ ಬೆಂಬಲಕ್ಕೆ ನಿಂತಿದ್ದ ಮತ್ತೊಬ್ಬ ಹಿರಿಯ ನಾಯಕ ಉಮೇಶ ಕತ್ತಿ. ಆದರೆ ಈಗ ಅವರಿಲ್ಲ.
. ಮಾಜಿ ಸಚಿವ ಉಮೇಶ ಕತ್ತಿಯವರು ತಮ್ಮ ಸಹೊದರನಿಗೆ ಟಿಕೇಟು ತಪ್ಪಿದ್ದಕ್ಕೆ ನೊಂದು ಕೊಂಡಿದ್ದರೂ ಸಹ ಅದನ್ನು ತೋರಿಸಿಕೊಳ್ಳದೆ ಮೋದಿಯವರನ್ನು ಎರಡನೇ ಬಾರಿಗೆ ಪ್ರಧಾನಿ ಮಾಡುವ ಉದ್ದೇಶದಿಂದ ಅಣ್ಣಾ ಸಾಹೇಬರ ಪರ ಪ್ರಚಾರಕ್ಕೆ ನಿಂತಿದ್ದರು.
ಈ ಮೂವರು ಸಾಹುಕಾರ್ ಶಕ್ತಿಯ ಜತೆಗೆ ಪತ್ನಿ ಶಾಸಕಿ ಶಶಿಕಲಾ ಜೊಲ್ಲೆಯವರ ಶ್ರಮದಿಂದ ಅಣ್ಣಾ ಸಾಹೇಬ ಜೊಲ್ಲೆಯವರು ಗೆದ್ದು ಬಂದಿದ್ದರು. ಆದರೆ ಈ ಸಲ ಸಾಹುಕಾರ ಶಕ್ತಿ ಕಳೆದುಕೊಂಡಿರುವ ಅಣ್ಣಾ ಸಾಹೇಬರ ಕುಟುಂಬ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಪ್ರಚಾರದಲ್ಲಿ ತೊಡಗಿದ್ದಾರೆ. ಆದರೆ ಮತದಾರ ಪ್ರಭುಗಳ ಒಲವು ಯಾರಿಗೆ ಎಂಬುದನ್ನು ತಿಳಿಯಲು ಫಲಿತಾಂಶದ ತನಕ ಕಾಯ ಬೇಕಾಗಿದೆ.
ಕೆಲಸಗಾರ ಹುಕ್ಕೇರಿ…!
ಚಿಕ್ಕೋಡಿ ಭಾಗದಲ್ಲಿ ಕೆಲಸಗಾರ ಎಂದೇ ಹೆಸರಾದವರು ಪ್ರಕಾಶ ಹುಕ್ಕೇರಿ.! ಅವರು ವಿಧಾನ ಪರಿಷತ್ ಸದಸ್ಯರು.. ಅವರ ಪುತ್ರಗಣೇಶ ಹುಕ್ಕೇರಿ ಶಾಸಕರು.
ಹೀಗಾಗಿ ಅವರ ಹಿಡಿತ ಕ್ಷೇತ್ರದಲ್ಲಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಮತ್ತೊಂದು ಸಂಗತಿ ಎಂದರೆ, ಚಿಕ್ಕೋಡಿ ಭಾಗದಲ್ಲಿ ತಮ್ಮ ಬಿಗಿ ಹಿಡಿತ ಹೊಂದಿ ವರ್ಚಸ್ಸು ಹೊಂದಿರುವ ಬಿಜೆಪಿಯ ಡಾ. ಪ್ರಭಾಕರ ಕೋರೆ, ವಿಧಾನ ಪರಿಷತ್ತಿನ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠರು ಬೆಳಗಾವಿಯತ್ತ ಕೇಂದ್ರೀಕೃತವಾಗಿದ್ದಾರೆ. ಅಷ್ಟೇ ಅಲ್ಲ ಬೆಳಗಾವಿಗೆ ಶೆಟ್ಟರ್ ಪರ ಬಂದಿದ್ದ ಯಡಿಯೂರಪ್ಪ ನವರು ಚಿಕ್ಕೋಡಿಯತ್ತ ಹೆಜ್ಜೆ ಹಾಕಲಿಲ್ಲ. ಇದೆಲ್ಲ ಚರ್ಚೆಯ ವಸ್ತುವಾಗಿದೆ.
ಪ್ರಿಯಾಂಕಾಗೆ ಸಾಹುಕಾರ ಬಲ:
ರಾಜಕೀಯದಲ್ಲಿ ಯಾರೂ ಶತ್ರುವೂ ಇಲ್ಲ. ಮಿತ್ರನೂ ಅಲ್ಲ ಎಂಬ ಮಾತೊಂದಿದೆ. ಬೆಳಗಾವಿಯ ಮಟ್ಟಕ್ಕೆ ಆ ಮಾತು ಅಕ್ವರಶಃ ಸತ್ಯವಾಗಿದೆ. ಈ ಚುನಾವಣೆಯಲ್ಲಿ ಚಿಕ್ಕೋಡಿ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಬೆನ್ನಿಗೆ ಸಾಹುಕಾರ ಶಕ್ತಿ ನಿಂತಿದೆ. ಮಗಳ ಗೆಲುವಿಗೆ ಸಾಹುಕಾರ ಬ್ರದರ್ಸ್ ಟೊಂಕ ಕಟ್ಟಿ ನಿಂತಿದ್ದರೆ, ಅಥಣಿ ಸಾಹುಕಾರ ಲಕ್ಷ್ಮಣ ಸವದಿಯವರು ಪ್ರಿಯಾಂಕಾ ಪರ ಪ್ರಚಾರದಲ್ಲಿ ತೊಡಗಿದ್ದಾರೆ. ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ, ಪುತ್ರ ಗಣೇಶ ಹುಕ್ಕೇರಿ ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಶ್ರಮಿಸುತ್ತಿದ್ದಾರೆ. ಒಟ್ಟಿನಲ್ಲಿ ಮತದಾರರ ಒಲವು ಯಾರ ಪರ ಎಂದು ಕಾದು ನೋಡಬೇಕು.