ಅರಿಷಿಣ, ಕುಂಕುಮ ಹಚ್ಚಿ ಮತ ಭಿಕ್ಷೆ ಕೇಳಿದ ಮಹಿಳೆಯರು
`ಮಂಗಲಸೂತ್ರ ಸುರಕ್ಷತೆಗೆ ಮತ ಕೊಡಿ’
ೆಬೆಳಗಾವಿ.
ಗಡಿನಾಡ ಬೆಳಗಾವಿ ಲೋಕಸಭೆ ಕ್ಷೇತ್ರದಲ್ಲಿ ಮತದಾರರನ್ನು ಸೆಳೆದು ಕೊಳ್ಳಲು ರಾಜಕೀಯ ಪಕ್ಷದವರು ಏನೆಲ್ಲ ಕಸರತ್ತು ನಡೆಸಿದ್ದಾರೆ ಎನ್ನುವುದು ಗುಟ್ಟಾಗಿ ಉಳಿದಿಲ್ಲ.
ಗೋಕಾಕ ತಾಲೂಕಿನ ಅಂಕಲಗಿ ಮತ್ತು ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಕಳೆದ ದಿನ ಹಣ ಹಂಚಿಕೆ ಪ್ರಕರಣಗಳೇ ಇದಕ್ಕೆ ಸಾಕ್ಷಿ,.
ಆದರೆ ಇದೆಲ್ಲ ರಾಜಕೀಯ ಜಂಜಾಟವನ್ನು ಬದಿಗೊತ್ತಿ ಮಹಿಳೆಯರೇ ಸ್ವಯಂ ಸ್ಪೂರ್ತಿಯಾಗಿ, ಭಾವನಾತ್ಮಕವಾಗಿ ಮತಭಿಕ್ಷೆ ಕೇಳುತ್ತಿರುವುದು ಎಲ್ಲರ ಗಮನ ಸೆಳೆದಿದೆ.
ಹುಬ್ಬಳ್ಳಿಯಲ್ಲಿ ನೇಹಾ ಹಿರೇಮಠಳನ್ನು ಫಯಾಜ ಬರ್ಬರ ಹತ್ಯೆ ಮಾಡಿದ ನಂತರ ಜಾಗ್ರತಗೊಂಡ ಮಹಿಳೆಯರು ಸ್ವಯಂ ಸ್ಪೂತರ್ಿಯಾಗಿ ಅರಿಷಿಣ, ಕುಂಕುಮ ಹಚ್ಚಿ ಮತ ಕೇಳುತ್ತಿದ್ದಾರೆ,

ಗಮನಿಸಬೇಕಾದ ಸಂಗತಿ ಎಂದರೆ, ಪಕ್ಷಾತೀತವಾಗಿ ಗುಂಪು ಕಟ್ಟಿಕೊಂಡು ಮನೆ ಮನೆಗೆ ಹೋಗುವ ಮಹಿಳೆಯರು ಮಂಗಲಸೂತ್ರ ರಕ್ಷಣೆ ಜೊತೆಗೆ ದೇಶದ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಮತ ಕೇಳುತ್ತಿದ್ದಾರೆ, ಇದೇ ದಿ, 7 ರಂದು ಎಲ್ಲ ಕೆಲಸವನ್ನು ಬದಿಗೊತ್ತಿ ನಿಮ್ಮ ಜೊತೆಗೆ ಇನ್ನುಳಿದವರನ್ನು ಮತದಾನಕ್ಕೆ ಕರೆತನ್ನಿ ಎನ್ನುವ ಮನವಿಯನ್ನು ಮಹಿಳೆಯರು ಮಾಡಿಕೊಳ್ಳುತ್ತಿದ್ದಾರೆ, ಆದರೆ ಈ ಸಂದಭ್ದಲ್ಲಿ ಅವರು ಯಾವುದೇ ಪಕ್ಷದ ಹೆಸರನ್ನು ಪ್ರಸ್ತಾಪಿಸುತ್ತಿಲ್ಲ.
ಪ್ರತಿವಾರ್ಡನಲ್ಲಿ ಡಜನ್ ಸಭೆ…!

ಗಮನಿಸಬೇಕಾದ ಸಂಗತಿ ಎಂದರೆ, ವಿಶೇಷವಾಗಿ , ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿರುವ ಪ್ರತಿಯೊಂದು ವಾರ್ಡನಲ್ಲಿ ಕನಿಷ್ಟ 12 ಕಡೆಗೆ ಹಿಂದೂ ಮಹಿಳೆಯರು ಪಕ್ಷಾತೀತವಾಗಿ ಶೃದ್ಧಾಂಜಲಿ ಸಭೆ ಮಾಡಿದ್ದಾರೆ. ಅಲ್ಲಿ ಕೂಡ ಆರೋಪಿ ಫಯಾಜ್ಗೆ ಗಲ್ಲು ಶಿಕ್ಷೆ ನೀಡಬೇಕೆಂದು ಆಗ್ರಹ ಕೂಡ ಮಾಡಿದ್ದರು.
ಮತ್ತು ಈ ಲೋಕಸಭೆ ಚುನಾವಣೆಯಲ್ಲಿ ಮಾಂಗಲ್ಯ ರಕ್ಷಣೆ ಮತ್ತು ದೇಶದ ಸುರಕ್ಷತೆಗೆ ಮತ ಕೇಳುವ ನಿರ್ಧಾರವನ್ನು ಪ್ರಕಟಿಸಿದ್ದರು,
ಹೀಗಾಗಿ ಒಗ್ಗಟ್ಟಾದ ಹಿಂದೂ ಮಹಿಳೆಯರು ಈಗ ಅರಿಷಿಣ, ಕುಂಕುಮ ಹಿಡಿದುಕೊಂಡ ಮತಭಿಕ್ಷೆ ಮಾಡಿದ್ದಾರೆ,
ಅಷ್ಟೇ ಅಲ್ಲ ಕೆಲ ದೇವಸ್ಥಾನಗಳಲ್ಲಿ ಕೂಡ ನಡೆಯುವ ಧಾರ್ಮಿಕ ಕಾರ್ಯಕ್ರಮದಲ್ಲಿ ಕೂಡ ಇದೇ ಉದ್ದೇಶವಿಟ್ಟುಕೊಂಡು ಚಚರ್ೆ ಕೂಡ ನಡೆಸಿದ್ದರು ಎಂದು ಗೊತ್ತಾಗಿದೆ

