Headlines

ರಸ್ತೆ ಕಹಾನಿ ತೆರೆದಿಟ್ಟ ಶಾಸಕ ಅಭಯ

ಅಭಯ ಪಾಟೀಲ ಮಾತಿಗೆ ತಲೆದೂಗಿದ ಪಾಲಿಕೆ ಸಭೆ.

ಆರಂಭದಲ್ಲಿ‌ ಏರಿದ ಧ್ವನಿಯಲ್ಲಿ ಮಾತಾಡಿದ ಶಾಸಕ ಆಸೀಫ್. ನಂತರ ಶಾಸಕರ ಮಾತಿಗೆ ಸಮ್ಮತಿ. ಅಧಿಕಾರಿಗಳ ಬೆಂಬಲಕ್ಕೆ ನಿಂತ ಶಾಸಕರು.

ಕ್ಷೇತ್ರದ ಜನರ ಅನುಕೂಲಕ್ಕೆ ರಸ್ತೆ‌ ನಿರ್ಮಾಣ. ಕ್ಷೇತ್ರದ ಜನರ ಹಿತಕ್ಕೆ ಬದ್ಧ.

ಅಭಿವೃದ್ಧಿ ವಿಷಯದಲ್ಲಿ ರಾಜಕಾರಣ ಬೇಡ.

ಬೆಳಗಾವಿ.

ಆ ಡಬಲ್ ರೋಡ ಕಹಾನಿಯನ್ನು ಎಳೆ ಎಳೆಯಾಗಿ‌ ಅತ್ಯಂತ ಕರಾರುವಕ್ಕಾಗಿ ದಾಖಲೆ ಸಮೇತ ಬಿಚ್ಚಿಟ್ಟ ಶಾಸಕ ಅಭಯ ಪಾಟೀಲರ ಮಾತಿಗೆ ಇಂದು‌ ನಡೆದ ಪಾಲಿಕೆ ಸಭೆ ಸಂಪೂರ್ಣ ಸಹಮತ ವ್ಯಕ್ತಪಡಿಸಿತು.

ಈ ಸಭೆಯಲ್ಲಿ ಅಧಿಕಾರಿಗಳ ತಪ್ಪನ್ನು ವಿವರಿಸಿದ ಅವರು, ಎಲ್ಲಿಯೂ ಅವರ ವಿರುದ್ಧ ಕ್ರಮ ತೆಗೆದುಕೊಳ್ಖುವ ಮಾತನ್ನು ಆಡಲಿಲ್ಲ. ಬದಲಾಗಿ ಅಧಿಕಾರಿಗಳನ್ನು ಬಲವಾಗಿ ಸಮರ್ಥಿಸಿಕೊಳ್ಳುವ ಕೆಲಸ ಮಾಡಿದರು.

ಶಹಾಪುರ ಡಬಲ್ ರಸ್ತೆ ನಿರ್ಮಿಸುವ ಮುನ್ನ ಅಲ್ಲಿನ ನಿವಾಸಿಗಳೊಂದಿಗೆ ಹಲವು ಸುತ್ತಿನ ಮಾತುಕತೆ ಮಾಡಲಾಗಿದೆ. ಅಷ್ಟೆ ಅಲ್ಲ ಅಲ್ಲಿ ಆಗುತ್ತಿರುವ ದಟ್ಟಣೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ರಸ್ತೆ ನಿರ್ಮಾಣಕ್ಕೆ‌ ಮುಂದಾಗಿದ್ದಾಗಿ ತಿಳಿಸಿದರು.

ಅಭಿವೃದ್ಧಿ ಕೆಲಸ ಮಾಡುವ ಸಂದರ್ಭದಲ್ಲಿ ಶೇ 95 ರಷ್ಟು ಜನರಿಗೆ ಅನುಕೂಲ ಆದರೆ ಶೇ 5 ರಷ್ಡು ಜನರಿಗೆ ತೊಂದರೆ ಆಗಬಹುದು.‌ಅದರರ್ಥ ತೊಂದರೆ ಆದವರನ್ನು ಸಂಪೂರ್ಣ ನಿರ್ಲಕ್ಷಿಸಬೇಕು ಎಂದಲ್ಲ. ಅವರಿಗೂ ಅನುಕೂಲ ಮಾಡಿಕೊಡಬೇಕು ಎನ್ನುವುದು ನಮ್ಮ ಉದ್ದೇಶ ಎಂದರು.

ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಈ ಹಿಂದೆ ರಸ್ತೆ ನಿರ್ಮಾಣ‌ ಸಂದರ್ಭದಲ್ಲಿ ಮೇಯರ್ ಮತ್ತು ಶಾಸಕರೂ ಆಗಿದ್ದ ಸಂಭಾಜಿರಾವ್ ಪಾಟೀಲರ ಕಾರ್ಯವನ್ನು ಸಭಾಂಗಣದಲ್ಲಿ ಮುಕ್ತವಾಗಿ ಪ್ರಶಂಸಿಸಿದರು.ನನಗೂ‌ ಮತ್ತು ಸಂಭಾಜಿರಾವ್ ಪಾಟೀಲರ ನಡುವೆ ರಾಜಕೀಯವಾಗಿ ಭಿನ್ನಾಭಿಪ್ರಾಯ ಇದ್ದರೂ ಕೂಡ ಅವರ ಆಗಿನ ನಿರ್ಣಯ ಸ್ವಾಗತಾರ್ಹ ಎಂದರು.

ಮಕ್ಕಳ ಜೀವ ನೋಡಿ..

ಬ್ಯಾಂಕ್ ಆಫ್ ಇಂಡಿಯಾದಿಂದ ಜುನ್ನೆ ಬೆಳಗಾವಿವರೆಗೆ ರಸ್ತೆ ನಿರ್ಮಾಣ ಮಾಡುವುದರ ಹಿಂದೆ ಬಲವಾದ ಕಾರಣ ಇತ್ತು ಎನ್ನುವುದನ್ಬು ಶಾಸಕ ಅಭಯ ಪಾಟೀಲ ಹೊರಹಾಕಿದರು.

ಈ ಪ್ರದೇಶದಲ್ಲಿ ಭಾತಖಾಂಡೆ ಸೇರಿದಂತೆ ಇನ್ನಿತರ ಶಾಲೆಗಳಿವೆ. ಈ ಶಾಲೆಯ ಮಕ್ಕಳು ಶಾಲೆಗೆ ಕೈಯ್ಯಲ್ಲಿ ಜೀವ ಹಿಡಿದುಕೊಂಡು ಹೋಗುವ ಪರಿಸ್ಥಿತಿ ಇತ್ತು.‌ಮೇಲಾಗಿ ಆ ಪ್ರದೇಶದ ಬಹುತೇಕ ವ್ಯಾಪಾರಿಗಳು ನಿವಾಸಿಗಳು ಇಲ್ಲೊಂದು ರಸ್ತೆ ಆಗಬೇಕು ಎನ್ನುವ ಮಾತನ್ನು ಹೇಳುವಾಗ ಅಭಯ ಪಾಟೀಲ ಭಾವುಕರಾದರು.

ಈ ಸಂದರ್ಭದಲ್ಲಿ ವಿರೋಧ ಪಕ್ಷದವರು ಅಲ್ಲಿದ್ದ ಗರಗಟ್ಟಿ ಕಾರ್ಖಾನೆ ಅಷ್ಟೆ ಅಲ್ಲ ಇನ್ನುಳಿದವರ ಬಗ್ಗೆ ಪ್ರಸ್ತಾಪಿಸಿ ಕಾನೂನು ಬಾಹಿರ ರಸ್ತೆ ನಿರ್ಮಾಣ ತಪ್ಪು ಎಂದು ವಾದ ಮಾಡಿದರು.

ಇದೆಲ್ಕವನ್ನು ಗಮನಿಸಿದ ಶಾಸಕ ಅಭಯ ಪಾಟೀಲರು, ಪಿರೋಜ ಶೇಠ್ ಶಾಸಕರಿದ್ದಾಗ ಎಷ್ಡು ರಸ್ತೆಗಳನ್ನು ಮಾಡುವಾಗ ನೋಟೀಸ್ ಕೊಟ್ಟಿದ್ದೀರಿ ಎಂದು ಪ್ರಶ್ನೆ ಮಾಡಿದರು. ಆಗ ಇದಕ್ಕೆ ಅಧಿಕಾರಿಗಳು ನೋಟೀಸ್ ಕೊಟ್ಟಿರಲಿಲ್ಲ ಎಂದು ಹೇಳಿದಾಗ ವಿರೋಧ ಪಕ್ಷದವರು ಮೌನಕ್ಕೆ ಜಾರಿದರು.

ಕೊನೆಗೆ ಅಭಿವೃದ್ಧಿ ವಿಷಯದಲ್ಲಿ ಯಾವುದೇ ರೀತಿಯ ರಾಜಕಾರಣ ಮಾಡದೇ ಎಲ್ಲರೂ ಕೂಡಿ ಹೋಗೊಣ ಎನ್ನುವ ತೀರ್ಮಾನಕ್ಕೆ ಶಾಸಕದ್ವಯರು ಬಂದರು

ಗಮನಿಸಬೇಕಾದ ಸಂಗತಿ ಎಂದರೆ, ರಸ್ತೆ ವಿಷಯದಲ್ಲಿ ಇಬ್ಬರೂ ಶಾಸಕರ ನಡುವೆ ಮಾತಿನ ಸಮರ ನಡೆದ ಸಂದರ್ಭದಲ್ಲಿ ಮೂಗು ತೂರಿಸಲು ಕೆಲ‌ನಗರಸೇವಕರು ಮಾತನಾಡಲು ಎದ್ದು ನಿಂತಾಗ ಶಾಸಕರು ಅದಕ್ಕೆ ಅವಕಾಶ ಕೊಡಲಿಲ್ಲ.

ಶಿವಚರಿತ್ರೆ ಮುಚ್ಚುವ ಹುನ್ನಾರ?

ಈ ರಸ್ತೆ ನಿರ್ಮಾಣಕ್ಕೆ ಅಡ್ಡಿ ಮಾಡುವವರ ಹಿಂದೆ ಶಿವಚರಿತ್ರೆ ಮುಚ್ವುವ ಹುನ್ನಾರ ಅಡಗಿದೆ ಎಂದು ಶಾಸಕ ಅಭಯ ಪಾಟೀಲರು ಹೇಳಿದರು.

ಕೆಲವೇ ಕೆಲವರು ಈ ರಸ್ತೆಗೆ ಅಡ್ಡಿ ಮಾಡುತ್ತಿದ್ದಾರೆ. ಇದರಲ್ಲಿ ಅಭಯ ಪಾಟೀಲರದ್ದೇ ತಪ್ಪು ಎನ್ನುವ ರೀತಿ ಬಿಂವಿಸಲಾಗುತ್ತಿದೆ.ನಾನೂ ಕೂಡ ಕೋರ್ಟ್ ಆದೇಶ ಹಿನ್ನೆಲೆಯಲ್ಲಿ ಏನೂ ಮಾತನಾಡಬಾರದು ಎಂದು ನಿರ್ಧರಿಸಿದ್ದೆ. ಆದರೆ ಕೆಲವರ ಮಾತಿಗೆ ಉತ್ತರ ಕೊಡುವುದು ಅನಿವಾರ್ಯವಾಗಿದ್ದರಿಂದ ಉತ್ತರಿಸುತ್ತಿದ್ದೇನೆ ಎಂದರು.

Leave a Reply

Your email address will not be published. Required fields are marked *

error: Content is protected !!