Headlines

ಅಂಗನವಾಡಿ ಕಾರ್ಯಕರ್ತೆ ಆತ್ಮಹತ್ಯೆಗೆ ಯತ್ನ..

ಸಿಗದ ಸಂಬಳ. ಬರೀ ಬರುಡೆ ಮಾತು ಕೇಳಿ ರೋಸಿ ಹೋದ ಕಾರ್ಯಕರ್ತೆ. ಹಬ್ಬಕ್ಕೆ ದುಡ್ಡಿಲ್ಲದೆ ಬೇಸರ.

“ದಾವಣಗೆರೆ:

ಕಳೆದ ಮೂರು ತಿಂಗಳಿನಿಂದ ಅಂಗನವಾಡಿ ಕಾರ್ಯಕರ್ತೆಯರಿಗೆ ಸರಿಯಾಗಿ ಸಂಬಳ ಸಿಗದ ಕಾರಣ ಅಂಗನವಾಡಿ ಕಾರ್ಯಕರ್ತೆಯೊಬ್ಬರು ಆತ್ಮಹತ್ಯೆಗೆ ಯತ್ನಸಿದ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ಸಂಬಳ ಆಗದ ಹಿನ್ನಲೆ ಸಾಲದ ಹೊರೆಗೆ ಬೇಸತ್ತು ಅಂಗನವಾಡಿ ಸಹಾಯಕಿ ಮಹಿಳೆಯೊಬ್ಬರು  ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ದಾವಣಗೆರೆಯ ನಗರದ ಡಾಂಗೇ ಪಾರ್ಕ್ ನ ಅಂಗನವಾಡಿ ಕೇಂದ್ರದ ಸಹಾಯಕಿ ಭಾರತಿ ಅತ್ಮಹತ್ಯೆ ಗೆ ಯತ್ನಿಸಿದ ಮಹಿಳೆಯಾಗಿದ್ದಾರೆ .

ಮೂರು ತಿಂಗಳಿನಿಂದ ಸಂಬಳ ಆಗದ ಹಿನ್ನಲೆ ಮಹಿಳೆ ಕಷ್ಟದ ಜೀವನ ನಡೆಸುತ್ತಿದ್ದು. ಜೀವನ ನಡೆಸುವುದಕ್ಕಾಗಿ ಕೈಸಾಲ ಮಾಡಿದ್ದರು. ದಿನದಿಂದ ದಿನಕ್ಕೆ ಕೈ ಸಾಲ ಹೆಚ್ಚಾದ ಹಿನ್ನಲೆ ಸಾಲಗಾರರ ಕಾಟವು ಹೆಚ್ಚಾಗಿದೆ. ಇದಕ್ಕೆ ಬೇಸತ್ತ ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ್ದು ಮಹಿಳೆಯನ್ನು ಜಿಲ್ಲಾಸ್ಪತ್ರಗೆ ದಾಕಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ್ ಆಸ್ಪತ್ರೆಗೆ ಕೊಂಡೊಯ್ಯಲು ಸಾಧ್ಯವಾಗದೆ ಕುಟುಂಬಸ್ಥರು ಪರದಾಡುತ್ತಿದ್ದಾರೆ.”

Leave a Reply

Your email address will not be published. Required fields are marked *

error: Content is protected !!