ಸಿಎಂಗೆ ಲಿಂಬೆ ಹಣ್ಣು ಕೊಟ್ಟ ಯಡಿಯೂರಪ್ಪ..!


ಸವದತ್ತಿ.
ಯಲ್ಲಮ್ನದೇವಿ ಸನ್ನಿಧಿಗೆ ಬಂದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಯಡಿಯೂರಪ್ಪ ಲಿಂಬೆ ಹಣ್ಣು ನೀಡಿದರು.
ಸವದತ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಚಾಲನೆ ನೀಡಲು ಆಗಮಿಸಿದ್ದ ಅವರು ಶಕ್ತಿ ದೇವತೆ ಯಲ್ಲಮ್ನದೇವಿ ದರ್ಶನ ಪಡೆದರು.


ದೇವಸ್ಥಾನಕ್ಕೆ ಕಾಲಿಟ್ಟ ಸಂದರ್ಭದಲ್ಲಿ ಅಲ್ಲಿನ ಅರ್ಚಕ ಯಡಿಯೂರಪ್ಪ ಅವರು ಸಿಎಂ ಸೇರಿದಂತೆ ಇನ್ನುಳಿದ ಸಚಿವರಿಗೂ ಲಿಂಬೆ ಹಣ್ಣು ನೀಡಿದರು.
ರೇಣುಕಾದೇವಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ವಿಶೇಷ ಪೂಜೆ ಸಲ್ಲಿಸಿದರು. ಅಷ್ಟೆ ಅಲ್ಲ ಕೆಲ ಹೊತ್ತು ಕೈ‌ಮುಗಿದುಕೊಂಡು ನಿಂತು ಬೇಡಿಕೊಂಡರು.
ಮುಖ್ಯಮಂತ್ರಿಗಳನ್ನು ಮಂತ್ರ ಘೋಷಗಳೊಂದಿಗೆ ದೇವಿ ದರ್ಶನಕ್ಕೆ ದೇಗುಲದ ಅರ್ಚಕರು ಕರೆದುಕೊಂಡು ಬಂದರು.

ನಾಗಮೂರ್ತಿಯ ಬೆಳ್ಳಿ ಕಿರಿಟ ತಲೆಗೆ ಹಚ್ಚಿ ಸಿಎಂ ಸಿದ್ದರಾಮಯ್ಯಗೆ ಆಶೀರ್ವಾದ ಮಾಡಿದರು.
ಮುಖ್ಯಮಂತ್ರಿ ಗಳು ತಾವೇ ಕುಂಕುಮ ಹಚ್ಚಿಕೊಂಡರಲ್ಲದೆ ಆರತಿ ತಟ್ಟೆಗೆ 500 ರೂ ಹಾಕಿದರು. ಯಾವುದಕ್ಕೂ ಮುಖ್ಯಮಂತ್ರಿ ಸಿದ್ಧರಾಮಯ್ಯ ಬೇಡ ಅನ್ನಲಿಲ್ಲ.
ಇನ್ನು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಯಲ್ಲಮ್ಮದೇವಿ ಮುಂದೆ 10 ನಿಮಿಷ ಕುಳಿತು ಪ್ರಾರ್ಥಿಸಿದರು. ಅಷ್ಟೆ ಅಲ್ಲ ದೀರ್ಘದಂಡ ನಮಸ್ಕಾರ ಹಾಕಿ ಅಲ್ಲಿಯೇ ಕೆಲ ಹೊತ್ತು ಕುಳಿತುಬಿಟ್ಟರು. ಇತ್ತ ಮುಖ್ಯಮಂತ್ರಿಗಳು
ದೇವಸ್ಥಾನದ ಹೊರಗೆ ಡಿ.ಕೆ.ಶಿವಕುಮಾರ ಬರೋವರೆಗೆ ಕಾದು ನಿಂತಿದ್ದರು.

Leave a Reply

Your email address will not be published. Required fields are marked *

error: Content is protected !!