ಇದು ಡಿಸಿಸಿ ADJUSTMENT..!

ಬೆಳಗಾವಿ.

ಗಡಿನಾಡ ಬೆಳಗಾವಿ ಜಿಲ್ಲೆ ರಾಜಕಾರಣವೇ ವಿಚಿತ್ರ. ಇಲ್ಲಿ ಯಾರೂ ಶತ್ರುನೂ ಅಲ್ಲ, ಮಿತ್ರನೂ ಅಲ್ಲ. ಅಂದರೆ ಒಂದು ರೀತಿಯ ಹೊಂದಾಣಿಕೆ ರಾಜಕಾರಣ;,!

ಹೀಗಾಗಿ ಈ ಜಿಲ್ಲೆಯ ರಾಜಕಾರಣದ ಒಳಸುಳಿವು ಯಾರಿಗೂ ಬೇಗ ಅರ್ಥ ಆಗೋದೇ ಇಲ್ಲ.

ಈ ಹಿಂದಿನ ರಾಜಕಾರಣವನ್ನು ಗಮನಿಸಿದರೆ, ಕತ್ತಿ, ಸವದಿ, ಕೋರೆಯವರದ್ದು ಒಂದು ಗುಂಪಾಗಿದ್ದರೆ, ಜಾರಕಿಹೊಳಿ ಸಹೋದರರದ್ದು ಒಂದು ಗುಂಪು. ಆದರೂ ಎರಡೂ ಗುಂಪುಗಳು ಜಿಲ್ಲೆಯ ರಾಜಕಾರಣದಲ್ಲಿ ತಮ್ಮ ಬಲವಾದ ಹಿಡಿತ ಬಿಟ್ಟು‌ಕೊಟ್ಟಿರಲಿಲ್ಲ.

ಈ ಹಿಂದೆ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಯಾವಾಗಲೂ ಕತ್ತಿ ಮತ್ತು ಸವದಿಯವರದ್ದು ಒಂದೇ ಗುಂಪು.

ಆದರೆ ಇದೇ ಡಿಸಿಸಿ ಬ್ಯಾಂಕನ‌ ಅಧ್ಯಕ್ಷ ಮತ್ತುಉ ಪಾಧ್ಯಕ್ಷ ಸ್ಥಾನದ. ಚುನಾವಣೆ ಸಂದರ್ಭದಲ್ಲಿ ಕತ್ತಿ‌ ಮತ್ತು ಸವದಿ‌ ನಡುವೆ ಭಿನ್ನ ಮಾತುಗಳು ಕೇಳಿ ಬಂದವು. ಆಗ ಸವದಿ ಮಹಾಂತೇಶ ದೊಡಗೌಡ್ರ ಅವರನ್ನೇ ಉಪಾಧ್ಯಕ್ಷ ಮಾಡಬೇಕು ಎಂದು ಪಟ್ಟು ಹಿಡಿದಿದ್ದರು.ಆದರೆ ಅದಕ್ಕೆ ಬಾಲಚಂದ್ರ ಜಾರಕಿಹೊಳಿ ಬೇರೆಯವರ ಹೆಸರನ್ಬು ಸೂಚಿಸಿತ್ತು.

ಗಮನಿಸಬೇಕಾದ ಸಂಗತಿ ಎಂದರೆ ಇಲ್ಲಿ ದೊಡಗೌಡರ ಸಲುವಾಗಿ ಲಕ್ಷ್ಮಣ ಸವದಿ ತಮ್ಮ‌ ಅಧ್ಯಕ್ಷ ಸ್ಥಾನವನ್ನು ಬಿಟ್ಡು ಕೊಡಬೇಕಾಯಿತು.

ಇದೇ ಕಾರಣದಿಂದ ಸವದಿ ಮತ್ತು ಕತ್ತಿ ನಡುವೆ ಅಂತರ ಬಂದಿತು. ಕತ್ತಿ‌ ಮತ್ತು ಜಾರಕಿಹೊಳಿ ಒಂದಾದರು. ಈಗ ಇದೇ ಹೊಂದಾಣಿಕೆ ಲೋಕಸಭೆ ಚುನಾವಣೆಯಲ್ಲಿ ಸಹ ನಡೆದಿದೆ ಎನ್ನುವುದು ಗುಟ್ಟಾಗಿ ಉಳಿದಿಲ್ಲ.


ಲೋಕಸಭೆ ಚುನಾವಣೆಗೆ ಇನ್ನೂ ಗಾವುದ ದೂರ ಇರುವಾಗಲೇ ಅಭ್ಯರ್ಥಿಗಳ ಆಯ್ಕೆ ಕಸರತ್ತು ಎರಡೂ ಪಕ್ಷದಲ್ಲಿ ಜೋರಾಗಿ ನಡೆದಿದೆ.
ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಈ ಬಾರಿ ಜಿಲ್ಲೆಯ ಎರಡೂ ಲೋಕಸಭೆಗೆ ಯಾರು ಎನ್ನುವ ಪ್ರಶ್ನೆ


ಚಿಕ್ಕೋಡಿ ಲೋಕಸಭೆ ಕ್ಷೇತ್ರಕ್ಕೆ ಮತ್ತೇ ಅಣ್ಣಾಸಾಹೇಬ ಜೊಲ್ಲೆ ಹೆಸರು ಪ್ರಮುಖವಾಗಿ ಕೇಳಿ ಬರುತ್ತಿದೆ. ಮತ್ತೊಂದು ಗಮನಿಸಬೇಕಾದ ಸಂಗತಿ ಎಂದರೆ, ಖುದ್ದು ಅಮಿತ್ ಶಾ ಅವರೇ ಹಾಲಿ ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಅವರೊಂದಿಗೆ ವಾಪಸ್ಸು ಬಿಜೆಪಿಗೆ ಬರುವಂತೆ ಮನವಿ ಮಾಡಿದ್ದಾರೆ ಎನ್ನುವ ಸುದ್ದಿ ಬಹಳ ಹಬ್ಬಿದೆ,

ಇಲ್ಲಿ ಎಲ್ಲರೂ ಅಂದುಕೊಂಡಂತೆ ಸವದಿ ಮತ್ತೇ ಘರವಾಪಸಿ ಆದರೆ ಅವರಿಗೆ ಚಿಕ್ಕೋಡಿ ಟಿಕೆಟ್ ಕೊಡುವ ಸಾಧ್ಯತೆಗಳನ್ನು ಅಲ್ಲಗಳೆಯಲಾಗದು. ಆದರೆ ಸವದಿ ಅವರು ಎಷ್ಟರ ಮಟ್ಟಿಗೆ ಘರವಾಪಸಿಗೆ ಮನಸ್ಸು ಮಾಡುವರು ಎನ್ನುವುದನ್ನು ಕಾದು ನೋಡಬೇಕು.


ಇನ್ನು ಬೆಳಗಾವಿ ಲೋಕಸಭೆ ಕ್ಷೇತ್ರಕ್ಕೆ ಯಾರು ಎನ್ನುವುದು ಬಹುದೊಡ್ಡ ಪ್ರಶ್ನೆಯಾಗಿ ಬಿಟ್ಟಿದೆ.
ಹಾಗೆ ನೋಡಿದರೆ ಇಲ್ಲಿ ಬಹಳ ಜನ ಘಟಾನುಘಟಿಗಳ ಹೆಸರು ಮುನ್ನೆಲೆಗೆ ಬರುತ್ತಿದೆ. ಆದರೆ ಅದರಲ್ಲೊಬ್ಬರು ಯಾರು? ಅಥವಾ ಹೊಸಮುಖದತ್ತ ಬಿಜೆಪಿ ನೋಡುತ್ತಿದೆಯಾ ಎನ್ನುವುದು ಸ್ಪಷ್ಟವಾಗಿಲ್ಲ.
ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೆಸರು ಚಾಲ್ತಿಯಲ್ಲಿದೆ.


ಇದೆಲ್ಲದರ ನಡುವೆ ಸಂಘ ಪರಿವಾರ ಮತ್ತು ಬಿಜೆಪಿ ಹೈ ಕಮಾಂಡ ತಲೆಯಲ್ಲಿರುವ ಮತ್ತೊಂದು ಹೆಸರು ಹರಿದಾಡುತ್ತಿದೆ. ಅದು ದಿ. ಉಮೇಶ ಕತ್ತಿ ಸಹೋದರ ಮಾಜಿ ಸಂಸದ ರಮೇಶ ಕತ್ತಿ.!


ಈ ಹಿಂದೆ ಚಿಕ್ಕೋಡಿ ಲೋಕಸಭೆ ಸದಸ್ಯರಾಗಿ ಅವರು ಕೆಲಸ ಮಾಡಿದವರು. ಹಾಗೆ ನೋಡಿದರೆ ಬೆಳಗಾವಿ ಲೋಕಸಭೆ ಕ್ಷೇತ್ರದ ಸಂಪರ್ಕ ಕೂಡ ಅವರು ಹೊಂದಿದ್ದಾರೆ. ಹಾಗೆ ನೋಎಇದರೆ ರಮೇಶ್ ಜಾರಕಿಹೊಳಿ ಹಠವಾದಿ. ಮಾತು ಆಡುವಾಗ ಹಿಂದೆಮುಂದೆ ನೋಡಲ್ಲ. ಸೆನ್ಸಾರ್ ಇರೋದೇ ಇಲ್ಲ.


ಡಿಸಿಸಿ ರಾಜಕಾರಣ..!
ಗಡಿನಾಡಿನಲ್ಲಿ ಮುಖ್ಯವಾಗಿ ಡಿಸಿಸಿ ಬ್ಯಾಂಕ್ ರಾಜಕಾರಣ ಹೆಚ್ಚು ನಡೆಯುತ್ತದೆ, ಅದರ ಮೂಲಕವೇ ಬೆಳಗಾವಿ ಜಿಲ್ಲೆಯ ರಾಜಕಾರಣ ನಿಂತಿದೆ.
ಅದನ್ನು ಸೂಕ್ಷ್ಮವಾಗಿ ಗಮನಿಸಿದರೆ ಕತ್ತಿ ಮತ್ತು ಜಾರಕಿಹೊಳಿ ಒಂದಾಗಬಹುದು ಎನುವ ಮಾತಿದೆ.
ಬೆಳಗಾವಿ ಲೋಕಸಭೆ ಚುನಾವಣೆಯ ಹಿನ್ನೆಲೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ, ಜಾರಕಿಹೊಳಿ ಮತ್ತು ಕತ್ತಿ ಸಹೋದರರು ಒಂದಾದರೆ ಬಿಜೆಪಿ ಬಲಿಷ್ಠ ಆಗುವುದರಲ್ಲಿ ಎರಡನೇ ಮಾತಿಲ್ಲ.
ಕಳೆದ ಬಾರಿ ಬಿಜೆಪಿಯ ಮಂಗಲ ಅಂಗಡಿ ಗೆಲ್ಲಲು ಗೋಕಾಕ ಮತ್ತು ಬೆಳಗಾವಿ ದಕ್ಷಿಣ ಕ್ಷೇತ್ರಗಳೇ ಕಾರಣವಾಗಿದ್ದವು. ಇಲ್ಲಿ ಡಿಸಿಸಿ ಬ್ಯಾಂಕ್ ರಾಜಕಾರಣದಲ್ಲಿ ಒಂದಾಗಿದ್ದ ಜಾರಕಿಹೊಳಿ ಸಹೋದರರು ಈ ಬಾರಿ ರಮೇಶ ಕತ್ತಿ ಸ್ಪರ್ಧಿಸಿದರೆ ಎಲ್ಲ ರೀತಿಯಿಂದ ಕೈಜೋಡಿಸುವುದರಲ್ಲಿ ಅನುಮಾನವೇ ಇಲ್ಲ.
ಇನ್ನು ಬೆಳಗಾವಿ ದಕ್ಷಿಣದ ಶಾಸಕ ಅಭಯ ಪಾಟೀಲರು ಬಿಜೆಪಿ ನಿಷ್ಠೆಯುಳ್ಳವರು. ಇಲ್ಲಿಯವರೆಗೆ ಬಿಜೆಪಿಯವರನ್ನೇ ಬೆಂಬಲಿಸುತ್ತ ಬಂದವರು. ಹೀಗಾಗಿ ಪ್ರತಿ ಬಾರಿ ಲೋಕ ಚುನಾವಣೆಯಲ್ಲಿ ದಕ್ಷಿಣದಲ್ಲಿ ಬಿಜೆಪಿಗೇ ಲೀಡ್ ಮತಗಳು ಬಂದಿವೆ.


ಇಲ್ಲಿ ರಮೇಶ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ, ಅಭಯ ಪಾಟೀಲ ಸೇರಿದಂತೆ ಇನ್ನಿತರರು ಮನಸ್ಸು ಮಾಡಿದರೆ ಬೆಳಗಾವಿಯಲ್ಲಿ ಬಿಜೆಪಿಗೆ ಗೆಲುವು ಕಷ್ಟ ಏನಲ್ಲ.
ಈ ನಿಟ್ಟಿನಲ್ಲಿ ಈಗಿನಿಂದಲೇ ಸಂಘ ಪರಿವಾರ ಅಷ್ಟೇ ಅಲ್ಲ ಬಿಜೆಪಿ ಹೈ ಕಮಾಂಡ ಕೂಡ ರಮೇಶ ಕತ್ತಿಯತ್ತ ಮುಖ ಮಾಡಿದೆ ಎಂದು ಹೇಳಲಾಗುತ್ತಿದೆ.


ಹೀಗಾಗಿ ಈ ಬಾರಿ ನಡೆಯುವ ಜಿದ್ದಾಜಿದ್ದಿ ರಾಜಕಾರಣಕ್ಕೆ ಕತ್ತಿ ಕುಟುಂಬದವರನ್ನೇ ಕಣಕ್ಕಿಳಿಸಬೇಕು ಎನ್ನುವ ಚಿಂತನೆ ನಡೆದಿದೆ.
ಇಲ್ಲಿ ಎಲ್ಲಕ್ಕಿಂತ ಮುಖ್ಯವಾಗಿ ಪ್ರಭಲ ಲಿಂಗಾಯತ ಸಮಾಜದ ವ್ಯಕ್ತಿಗೆ ಆಧ್ಯತೆ ಕೊಡಬೇಕು ಎನ್ನುವ ಮಾತುಗಳೂ ಸಹ ಕೇಳಿ ಬರುತ್ತಿದೆ
.

Leave a Reply

Your email address will not be published. Required fields are marked *

error: Content is protected !!