Headlines

ಪಾಲಿಕೆಗೆ ಇನ್ನು `ಶುಭ’

ಅಶೋಕ ದುಡಗುಂಟಿ ಎತ್ತಂಗಡಿ
ಪಾಲಿಕೆಗೆ ಹೊಸ `ಶುಭ’ ಆಯುಕ್ತರು

ಬೆಳಗಾವಿ.
ಕಳೆದ ಕೆಲ ದಿನಗಳಿಂದ ವಿವಾದಕ್ಕೆ ಹೆಸರು ಮಾಡಿದ್ದ ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ಅವರನ್ನು ರಾಜ್ಯ ಸಕರ್ಾರ ಕೊನೆಗೂ ಎತ್ತಂಗಡಿ ಮಾಡಿ ಆದೇಶ ಹೊರಡಿಸಿದೆ.
ಅವರ ಸ್ಥಾನಕ್ಕೆ ಮೈಸೂರು ನಗರಾಭಿವೃದ್ಧಿ ಕೋಶ ಯೋಜನಾ ನಿದರ್ೇಶಕರಾಗಿದ್ದ ಶುಭ ಬಿ ಅವರನ್ನು ನೇಮಕ ಮಾಡಲಾಗಿದೆ.
ಹಾಲಿ ಆಯುಕ್ತ ಅಶೋಕ ದುಡಗುಂಟಿ ಅವರಿಗೆ ಯಾವುದೇ ಸ್ಥಳ ನಿಯುಕ್ತಿ ಮಾಡಲಾಗಿಲ್ಲ.

ಗಮನಿಸಬೇಕಾದ ಸಂಗತಿ ಎಂದರೆ, ಕಳೆದ ಹಲವು ದಿನಗಳಿಂದ ಪಾಲಿಕೆಯಲ್ಲಿ ಬರೀ ವಿವಾದಗಳೇ ಸದ್ದು ಮಾಡಿದ್ದವು. ಆದರೆ ಇವರು ಕನ್ನಡ ವಿಷಯದಲ್ಲಿ ಕೆಲವೊಂದು ಗಟ್ಟಿ ನಿಧರ್ಾರ ತೆಗೆದುಕೊಂಡಿದ್ದರು.
ಈ ಹಿಂದೆ ಇವರ ಅಧಿಕಾರವಧಿಯಲ್ಲಿಯೇ ಪಾಲಿಕೆ ಸೂಪರ್ ಸೀಡ್ ನೊಟೀಸ್ ಬಂದಿತ್ತು, ನಂತರ 138 ಪೌರ ಕಾಮರ್ಿಕರ ನೇಮಕ ವಿಷಯದಲ್ಲಿ ದೊಡ್ಡ ರಾದ್ದಾಂತವೇ ನಡೆದುಹೋಗಿತ್ತು, ಪಾಲಿಕೆ ಸಾಮಾನ್ಯ ಸಭೆಯಲ್ಲಿಯೇ ಈ ನೇಮಕ ಅಕ್ರಮ ಎಂದವರು ಕೊನೆಗೆ ಅದಕ್ಕೆ ಸಮ್ಮತಿ ನೀಡಿದ್ದು ಈಗಲೂ ಚಿದಂಬರ ರಹಸ್ಯವಾಗಿಯೇ ಉಳಿಯಿತು,


ಬೆಳಗಾವಿ ಶಹಾಪುರ ಭಾಗದ ರಸ್ತೆ ನಿಮರ್ಾಣ ಮತ್ತು ಅದರ ನಂತರ ಪರಿಹಾರ ವಿಷಯದಲ್ಲಿ ದೊಡ್ಡ ಮಟ್ಟದ ಚಚರ್ೆ ನಡೆದಿತ್ತು, ರಸ್ತೆ ನಿಮರ್ಿಸುವ ವಿಷಯದಲ್ಲಿ ನಿಯಮ ಪಾಲನೆಯಾಗಿಲ್ಲ ಎನ್ನುವುದು ಒಂದು ಕಡೆಯಾದರೆ, ಮತ್ತೊಂದು ಕಡೆಗೆ ಪರಿಹಾರ ವಿಷಯದಲ್ಲಿ ಇಡೀ ಪಾಲಿಕೆಯನ್ನು ತಪ್ಪು ದಾರಿಗೆ ಎಳೆಯುವ ಕೆಲಸ ಆಗಿತ್ತು,


ಪಾಲಿಕೆ ವಿಶೇಷ ಸಭೆಯಲ್ಲಿ ಪರಿಹಾರ ರೂಪದಲ್ಲಿ 20 ಕೋಟಿ ರೂ ಕೊಡುವುದನ್ನು ಬಿಟ್ಟರೆ ಪರ್ಯಾಯ ಮಾರ್ಗವಿಲ್ಲ ಎಂದಿದ್ದ ಆಯುಕ್ತರು, ಕೋರ್ಟನಲ್ಲಿ ಪಾಲಿಕೆ ಸಭೆ ಗಮನಕ್ಕೆ ತಾರದೇ ಜಾಗೆಯನ್ನೇ ವಾಪಸ್ಸು ಕೊಡುವುದಾಗಿ ಹೇಳಿದ್ದರು,
ಇದೆಲ್ಲಕ್ಕಿಂತ ಮುಖ್ಯವಾಗಿ ಪಾಲಿಕೆ ಸಾಮಾನ್ಯ ಸಭೆಯಲ್ಲಿ ತೆಗೆದುಕೊಂಡ ಬಹುತೇಕ ನಿರ್ಣಯಗಳನ್ನು ಇವರು ಅನುಷ್ಠಾನಕ್ಕೆ ತರುವ ಕೆಲಸ ಮಾಡಲಿಲ್ಲ ಎನ್ನುವ ಆರೋಪ ಇವರ ಮೇಲಿದೆ.
ಈ ಹಿನ್ನೆಲೆಯಲ್ಲಿ ಸಕರ್ಾರಕ್ಕೆ ದುಡಗುಂಟಿ ವಿರುದ್ಧ ದೂರಗಳು ಹೋಗಿದ್ದವು ಎನ್ನಲಾಗಿದೆ, ಈ ಹಿನ್ನೆಲೆಯಲ್ಲಿ ಬೆಳಗಾವಿ ಪಾಲಿಕೆಯನ್ನು ವಿವಾದ ಮುಕ್ತ ಮಾಡುವ ನಿಟ್ಟಿನಲ್ಲಿ ಹೊಸ ಆಯುಕ್ತರನ್ನು ನೇಮಕ ಮಾಡಿದೆ ಎಂದು ಗೊತ್ತಾಗಿದೆ.

Leave a Reply

Your email address will not be published. Required fields are marked *

error: Content is protected !!