ಬೆಂಗಳೂರು.
ರಾಜ್ಯದಲ್ಲಿ ಮೂರು ಕ್ಷೇತ್ರಗಳಿಗೆ ಉಪಚುನಾವಣೆ ಮುಗಿದಿದೆ. ಹೀಗಾಗಿ ಈಗ ಎಲ್ಲರ ಚಿತ್ತ ಫಲಿತಾಂಶ ದತ್ತ ನೆಟ್ಟಿದೆ.
ಅದರಲ್ಲೂ ರಾಜ್ಯದ ಈ ಚುನಾವಣೆ ತಾರಕಕ್ಕೆ ಹೋಗಿದ್ದ ಸಂದರ್ಭದಲ್ಲಿಯೇ ವಕ್ಫ್ ಸಚಿವ ಜಮೀರಗ ಅಹ್ಮದ ಖಾನ್ ಆಡಿದ ಮಾತು ಕಾಂಗ್ರೆಸ್ ಗೆ ಮರ್ಮಾಘಾತವನ್ನೇ ಕೊಟ್ಟಿದೆ.

ಇಲ್ಲಿ ಜಮೀರ ಅವರು ಕೇಂದ್ರ ಸಚಿವ ಕುಮಾರಸ್ಜಾಮಿ ಅವರನ್ನು ಕರಿಯ ಅಂದಿದ್ದಲ್ಲದೇ ಅವರ ಖಾಂದಾನ್ ವನ್ನು ಮುಸ್ಲೀಂರೇ ಪೈಸೆ ಟು ಪೈಸೆ ಕೊಟ್ಟು ಖರೀದಿಸುವ ತಾಕತ್ ಹೊಂದಿದ್ದಾರೆ ಎನ್ನುವ ಮಾತು ಕೇವಲ ಒಕ್ಕಲಿಗರನ್ನು ಅಷ್ಟೇ ಅಲ್ಲ ಅಖಂಡ ಹಿಂದುಸಮಾಜವನ್ನು ಬಡಿದೆಬ್ಬಿಸಿದಂತಾಗಿದೆ

ಈ ಎಲ್ಲವನ್ನು ಗಮನಿಸಿಯೇ ಚನ್ನಪಟ್ಟಣದ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ ಅವರು ಗೆಲ್ಲುವ ಬಗ್ಗೆ ಅನುಮಾನದ ಮಾತುಗಳನ್ನು ಆಡಿದರು ಎಂದು ಹೇಳಲಾಗುತ್ತದೆ.
ಸಹಜವಾಗಿ ಜಮೀರ್ ಮಾತು ಈಗ ಕಾಂಗ್ರೆಸ್ ದಲ್ಲಿ ಭಾರೀ ಸಂಚಲನ ಕೂಡ ಮೂಡಿಸಿದೆ. ಮೊದಲಿನಿಂದಲೂ ಮುಖ್ಯಮಂತ್ರಿ ಸಿದ್ಧರಾಮಯ್ಯ ಪರವಾಗಿ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರಿಗೆ ಟಾಂಗ್ ಕೊಡುತ್ತಲೇ ಬಂದಿರುವ ಜಮೀರ್ ಉದ್ದೇಶಪೂರ್ವಕವಾಗಿ ವಾತಾವರಣ ಹಾಳು ಮಾಡಲು ಅಂತಹ ಮಾತನ್ನಾಡಿದರಾ ಎನ್ನುವ ಚರ್ಚೆ ಕೂಡ ನಡೆದಿದೆ.
ಹೀಗಾಗಿ ಚನ್ನಪಟ್ಟಣ ದಲ್ಲಿ ಯೋಗೇಶ್ವರ ಸೋತರೆ ಜಮೀರ್ ಅವರನ್ನು ಮಂತ್ರಿ ಮಂಡಲದದ ಹೊರಗೆ ಹಾಕಬೇಕು ಎನ್ನುವ ಕೂಗು ಕೇಳಿ ಬರುತ್ತಿದೆ.
ಜಮೀರ ಮಾತು ಚನ್ನಪಟ್ಟಣ ಅಷ್ಟೇ ಅಲ್ಲ ಶಿಗ್ಗಾವಿ ಮತ್ತು ಸೊಂಡೂರು ಕ್ಷೇತ್ರದಲ್ಲೂ ಭಾರೀ ಪರಿಣಾಮ ಬೀರಿದೆ ಎಂದು ಹೇಳಲಾಗುತ್ತಿದೆ.
ಅದೇನೇ ಆಗಲಿ ಜಮೀರ್ ಖಾನ್ ಮಾತು ಬಿಜೆಪಿಗೆ ಬೂಸ್ಟ್ ಕೊಟ್ಟಂತಾಯಿತು ಎನ್ನುವುದು ಸುಳ್ಳಲ್ಲ.