ATM ನ್ನೂ ಬಿಡದ ಕಳ್ಳ..!

::ಬೆಳಗಾವಿ.
ಎಟಿಎಂ ನಿಂದ ಹಣ ಕಳ್ಖತನ ಮಾಡಿದವರನ್ನು ಹೆಡಮುರಿ ಕಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಬೆಳಗಾವಿ ನಗರದ ಮಾರ್ಕೇಟ್ ಪೊಲೀಸ್ ಠಾಣೆಯ ವ್ಯಾಪ್ತಿಯ ಅಂಜುಮನ್ ಬಿಲ್ಡಿಂಗ್‌ದಲ್ಲಿರುವ ಹೆಚ್.ಡಿ.ಎಪ್.ಸಿ, ಬ್ಯಾಂಕದ ಎ.ಟಿ.ಎಮ್,ದಲ್ಲಿ 8.65.500/- ರೂ. ಹಣವನ್ನು ಕಳ್ಳತನ ಮಾಡಲಾಗಿತ್ತು. ಎಸ್.ಐ.ಎಸ್ ಪ್ರೋಸಿಗರ ಹೋಲ್ಡಿಂಗ ಪ್ರೈವೇಟ್ ಲಿಮಿಟೆಡ್” ಕಂಪನಿಯಲ್ಲಿ ಕೆಲಸ ಮಾಡುವ ಕೆಲಸಗಾರನ ಕ್ರಿಷ್ಣಾ ಸುರೇಶ ದೇಸಾಯಿ, (23) ಜ್ಯೋತಿ ನಗರ, ಕಂಗ್ರಾಳಿ ಕೆ.ಹೆಚ್. ಇವರು ಎ.ಟಿ.ಎಮ್,ದ ಕಾಂಬಿನೇಶನ ಪಾಸ್‌ವರ್ಡವನ್ನು ಉಪಯೋಗಿಸಿ ಹಣವನ್ನು ದೋಚಿದ್ದನು.


ಈ ಕುರಿತು ಪ್ರಕರಣ ದಾಖಲು ಮಾಡಿಕೊಂಡ ಮಾರ್ಕೆಟ ಪೊಲೀಸರು ಎ.ಟಿ.ಎಮ್.ದಿಂದ ದೋಚಿದ 5,74,000-ರೂ. , ಕಳ್ಳತನ ಹಣದಿಂದ ಖರೀದಿ ಮಾಡಿದ ಬಂಗಾರದ ಆಭರಣ (20 ಗ್ರಾಂ, ಅಕಿ=1,56,000/-ರೂ ಸೇರಿದಂತೆ ಒಟ್ಟು 7.30.000 ರೂ.ವನಗನು ಜಪ್ತಿ ಮಾಡಿದ್ದಾರೆ.
ಪೊಲೀಸ್ ಆಯುಕ್ತ ಇಡಾ ಮಾರ್ಟಿನ್ ಮಾರ್ಬನ್ಯಾಂಗ್, ಪೊಲೀಸ್ ಉಪ ಆಯುಕ್ತರು ಹಾಗೂ ಎಸಿಪಿ ಸಂತೋಷ ಸತ್ಯನಾಯಕ, ಮಾರ್ಗದರ್ಶನದಲ್ಲಿ ಪೊಲೀಸ್ ಇನ್ಸಪೆಕ್ಟರ್ ಮಹಾಂತೇಶ ಧಾಮಣ್ಣವರ ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

Leave a Reply

Your email address will not be published. Required fields are marked *

error: Content is protected !!