3 ಕೋಟಿ ರೂ ತುಂಬುವಂತೆ ನೋಟೀಸ್..!

ಇದು ebelagavi ಫಲಶೃತಿ.

ಪಾಲಿಕೆ ಕಂದಾಯ ಶಾಖೆಗೆ ಬಿಸಿ ಮುಟ್ಟಿಸಿದ ಆಯುಕ್ತೆ ಶುಭ.

ಮತ್ತೇ ನಾಲ್ವರಿಗೆ ನೋಟೀಸ್ ಕೊಟ್ಟು ಕೆಲಸಕ್ಕೆ ಹಚ್ಚಿದ ಆಯುಕ್ತೆ.

ತಪ್ಪು ಮಾಡಿದವರಿಗೆ ನೋಟೀಸ್ ಒಂದೇ ಶಿಕ್ಷೆನಾ?

ಮೂರು ಕೋಟಿ ಬಾಕಿ ಉಳಿಸಿಕೊಂಡ ಕಂಪನಿ ವಿರುದ್ಧ ಕ್ರಮ ಏಕಿಲ್ಲ,?

ಬಡವರಿಗೊಂದು, ಶ್ರೀಮಂತರಿಗೊಂದು ನ್ಯಾಯನಾ?

ಬೆಳಗಾವಿ.

ಸ್ವಯಂಕೃತ ಅಪರಾಧದ ಹಿನ್ನೆಲೆಯಲ್ಲಿ ಆರ್ಥಿಕ ಸಂಕಷ್ಟದಿಂದ ಬಳಲುತ್ತಿರುವ ಬೆಳಗಾವಿ ಮಹಾನಗರ ಪಾಲಿಕೆಗೆ ebelagavi ಪ್ರಕಟಿಸಿದ ವರದಿ ಅಧಿಕಾರಿಗಳ ಕಣ್ಣುತೆರೆಸಿದೆ.

ಸುಮಾರು ಮೂರು ಕೋಟಿಗೂ ಅಧಿಕ ತೆರಿಗೆಯನ್ನು ಕಾನೂನು ಪ್ರಕಾರ ವಸೂಲಿ ಮಾಡಿ ಹಿರಿಯ ಅಧಿಕಾರಿಗಳಿಂದ ಶಹಬ್ಬಾಶಗಿರಿ ಪಡೆಯಬೇಕಾಗಿದ್ದ ಮಹಾನಗರ ಪಾಲಿಕೆಯ ಕಂದಾಯ ಶಾಖೆ ಕೆಂಗೆಣ್ಣಿಗೆ ಗುರಿಯಾಗಿತ್ತು.

ಅಂದರೆ ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದರೆ ಯಾರಿಗೂ ಗೊತ್ತಾಗುವುದೇ ಇಲ್ಲ ಎನ್ನುವ ಭ್ರಮೆಯಲ್ಲಿದ್ದ ಕಂದಾಯ ಶಾಖೆಗೆ ebelagavi. ಪ್ರಕಟಿಸಿದ ವರದಿ ಬಿಸಿ ಮುಟ್ಟಿಸಿತು. ಅಷ್ಟೇ ಅಲ್ಲ ಹಿರಿಯ ಅಧಿಕಾರಿಗಳ ಕಣ್ತೆರೆಸುವ ಕೆಲಸವೂ ಆಯಿತು.

ಜನರ ಅಂಗೈಗೆ ನೇರಾ ನೇರ ಸುದ್ದಿಗಳನ್ನು ಯಾವುದೇ ಮುಲಾಜಿಗೆ ಒಳಗಾಗದೇ , ಯಾರದೇ ಗೊಡ್ಡು ಬೆದರಿಕೆಗಳಿಗೆ ಬಗ್ಗದೆ ebelagavi ವರದಿಗಳನ್ನು ನೀಡುತ್ತ ಬಂದಿದೆ. ಮುಂದೆಯೂ ನೀಡುತ್ತದೆ.

ಇಲ್ಲಿ ಬೆಳಗಾವಿ ಮಹಾನಗರ ಪಾಲಿಕೆಯ ಕಂದಾಯ ಶಾಖೆಯಲ್ಲಿ ದೊಡ್ಡ ಪ್ರಮಾಣದ ಯಡವಟ್ಟುಗಳಾಗುತ್ತಿಚೆ ಎನ್ನುವ ಮಾಹಿತಿ ಬಂದಿತ್ತು. ಅಷ್ಟೇ ಅಲ್ಲ ತೆರಿಗೆ ವಸೂಲಾತಿಯ ವಿಷಯದಲ್ಲಿ ದೊಡ್ಡ ಪ್ರಮಾಣದ ಅವ್ಯವಹಾರ ನಡೆಯುತ್ತಿದೆ ಎನ್ನುವ ಖಚಿತ ಮಾಹಿತಿ ಲಭ್ಯವಾಗಿತ್ತು.

ಇದೆಲ್ಲದರ ಬಗ್ಗೆ ಇನ್ನಷ್ಟು ವಿಚಾರಣೆಮಾಡಬೇಕು ಎನ್ನುವಷ್ಟರಲ್ಲಿ E belagavi ಯನ್ನು ಅರಸಿಕೊಂಡು ಬಂದಂತೆ ಅದೇ ಕಂದಾಯ ಶಾಖೆಯ ಮತ್ತೊಂದು ವಿಷಯ ಬಂದಿತು.

ಖಾಸಗಿ ಶಿಕ್ಷಣ ಸಂಸ್ಥೆಯವರು ನಾವು ಪಾಲಿಕೆಗೆ ದುಡ್ಡು ತುಂಬಬೇಕಾಗಿದೆ. ಅದಕ್ಕೆ ಚಲನ್ ಕೊಡಿ ಎಂದು ಎರಡ್ಮೂರು ವರ್ಷದಿಂದ ಪತ್ರ ಬರೆಯುತ್ತ ಬಂದಿದ್ದರು. ಆದರೆ ಅದಕ್ಕೆ ಕನಿಷ್ಟ ಸೌಜನ್ಯಕ್ಕಾದರೂ ಉತ್ತರ ಕೊಡುವ ಗೋಜಿಗೆ ಪಾಲಿಕೆ ಹೋಗಿರಲಿಲ್ಲ.

ಹೀಗಾಗಿ ಈ ವಿಷಯ ಮೊದಲು ಜಿಲ್ಲಾಧಿಕಾರಿ ಮೊಹಮ್ಮದ ರೋಷನ್ ಅವರ ಗಮನಕ್ಕೆ ಹೋಯಿತು. ಅವರು ಸಂಸ್ಥೆಯ ದಾಖಲೆ ಪರಿಶೀಲನೆ ನಡೆಸಿ ನೇರವಾಗಿ ಪಾಲಿಕೆ ಆಯುಕ್ತರಿಗೆ ಹೇಳಿ ಕೇವಲ ಎರಡು ದಿನದ ಕಾಲಾವಕಾಶ ನೀಡಿದರು.

ಇತ್ತ ಪಾಲಿಕೆ ಆಯುಕ್ತರು ಇದರ ಬಗ್ಗೆ ಕಂದಾಯ ಶಾಖೆಯವರನ್ನು ಕರೆಯಿಸಿ ತಕ್ಷಣ ಚಲನ್ ರೆಡಿ ಮಾಡಿಕೊಡುವಂತೆ ಸೂಚನೆ ನೀಡಿದರು.

ಇಷ್ಡೆಲ್ಲ ಹಿರಿಯರು ಹೇಳಿದ ತಕ್ಷಣ ಕೆಲಸ ಫಟಾಫಟ್ ಆಗುತ್ತದೆ ಎಂದು ಸಂಸ್ಥೆಯವರು ನಂಬಿದ್ದರು. ಆದರೆ ಅವರ ನಂಬಿಕೆ ಹುಸಿಯಾಯಿತು.

ಅಷ್ಟರೊಳಗೆ ಕಂದಾಯ ಶಾಖೆಯ ಒಬ್ಬರು ಈ ಸಂಸ್ಥೆಯವರ ಹತ್ತಿರ ವ್ಯವಹಾರ ಕುದುರಿಸೋಕೆ ಶುರು‌ಮಾಡಿದ್ದರು. ಅವರ ವ್ಯವಹಾರ ಹೇಗಿತ್ತು ಎಂದರೆ ಚಾರಣೆ ಮುರಗಿ, ಆಠ್ಠಣ್ಣೆ ಮಸಾಲಾ ಎನ್ನುವಂತಿತ್ತು. ಇಷ್ಟೆಲ್ಲ ಹಿರಿಯರು ಹೇಳಿದ ಮೇಲೂ ತಮ್ಮ ಸ್ವಂತ ಟ್ಯಾಕ್ಸ್ ವಸೂಲಿ ಮಾಡಿಕೊಂಡು ಮರುದಿನ ಚಲನ್ ಕೊಟ್ಟರು.

ಈ ವಿಷಯ ಕುರಿತಂತೆ e belagavi ಬೆಳಗಾವಿ ಪಾಲಿಕೆಯಲ್ಲಿ SPLVTAX ಎನ್ನುವ ಶೀರ್ಷಿಕೆಯಡಿ ವರದಿ ಪ್ರಕಟಿಸಿತ್ತು.

ಅದು ಸರ್ಕಾರದ ಮುಖ್ಯ ಕಾರ್ಯ ದರ್ಶಿ ಡಾ ಶಾಲಿನಿ ರಜನೀಶ್ ಅವರ ಗಮನಕ್ಕೂ ಹೋಯಿತು‌ ಇತ್ತ ಪಾಲಿಕೆ ಆಯುಕ್ತರು ಕಂದಾಯ ಉಪ ಆಯುಕ್ತೆ ರೇಷ್ಮಾ ತಾಳಿಕೋಟಿ ಸೇರಿದಂತೆ ನಾಲ್ವರಿಗೆ ನೋಟೀಸ್ ಕೊಟ್ಟರು.

ಆದರೆ ನೋಟೀಸ್ ಗೆ ತಕ್ಷಣ ಉತ್ತರ ಕೊಡಬೇಕು ಎಂದು ಆಯುಕ್ತರು ಹೇಳಿದ್ದರು. ಇಲ್ಲಿ ನೋಟೀಸ್ ಕೊಟ್ಟ ನಂತರ ಮುಂದಿನ ಕ್ರಮ ಏನು ಎನ್ನುವುದು ಚಿದಂಬ್ ರಹಸ್ಯ ವಾಗಿಯೇ ಉಳಿದಿದೆ.

ಉಙಡ ಮನೆಗೆ ದ್ರೋಹ..ಆದರೂ‌ NO ACTION

ಇದೆಲ್ಲದರ ನಡುವೆ ಪಾಲಿಕೆ ಕಂದಾಯ ಶಾಖೆಯ ಕೆಲವರು ತೆರಿಗೆ ವಸೂಲಾತಿಯಲ್ಲಿ ಬೆಳಗಾವಿ ಮಹಾನಗರ ಪಾಲಿಕಗೆ ವಂಚನೆ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಬಂದಿತು

ಅದರ ಬಗ್ಗೆ ಆರಂಭದಲ್ಲಿಯೇ ಕ್ರಾಸ್ ಚೆಕ್ ಮಾಡಿದಾಗ ಸತ್ಯ ಅಡಗಿದೆ ಎನ್ನುವ ಮಾಹಿತಿ ಹೊರಬಂದಿತು.

ನಗರದ ಹೊರವಲಯದಲ್ಲಿ ಇರುವ ವೆಗಾ ಕಂಪನಿಯವರು ಬೆಳಗಾವಿ ಪಾಲಿಕೆಗೆ ಸುಮಾರು ಎಂಟತ್ತು ವರ್ಷದಿಂದ ತೆರಿಗೆಯನ್ನೇ ತುಂಬಿರಲಿಲ್ಲ. ಅದರ ಮೊತ್ತ ಬರೊಬ್ಬರಿ ಮೂರು ಕೋಟಿ ದಾಟುತ್ತದೆ ಅಂತೆ.

ಈ ಬಗ್ಗೆ e belagavi ವರದಿ ಪ್ರಕಟಿಸಿದಾಗ ಆಯುಕ್ತರು ಮತ್ತೇ ಕಂದಾಯ ಇಲಾಖೆಯ ನಾಲ್ವರಿಗೆ ನೋಟೀಸ್ ಜಾರಿ ಮಾಡಿದರು. ಅಷ್ಟೆ ಅಲ್ಲ ಕಂಪನಿಯವರಿಗೆ ಬರೊಬ್ಬರಿ 3 ಕೋಟಿ ರೂ ತೆರಿಗೆ ಕಟ್ಟಬೇಕು ಎಂಬ ನೋಟೀಸ್ ತಲುಪಿಸುವ ಕೆಲಸ ನಡೆಯಿತು‌

ಆದರೆ ಇಲ್ಲಿ ತಪ್ಪು ಮಾಡಿದವರಿಗೆ ಮತ್ತು ವೆಗಾ ಕಂಪನಿಯವರಿಗೆ ನೋಟೀಸ್ ಕೊಟ್ಟ ತಕ್ಷಣ ಆಯುಕ್ತರ ಜವಾಬ್ದಾರಿ ಮುಗಿಯಲಿಲ್ಲ.

ಇಲ್ಲಿ ಇದೊಂದೇ ಅಲ್ಲ ಮಾರಿಹಾಳ ಕಡೆಗೆ ಇರುವ ಮತ್ತೊಂದು ಖಾಸಗಿ ಶಿಕ್ಷಣ ಸಂಸ್ಥೆಯ ತೆರಿಗೆ ತುಂಬಿದ ಪರಿಯ ಬಗ್ಗೆ ಆಯುಕ್ತರು ಸಮಗ್ರ ವಿಚಾರಣೆ ಮಾಡಬೇಕಿದೆ

ಇಲ್ಲಿ ಈ ವಸೂಲಾತಿಯಲ್ಲಿ ತಪ್ಪು ಮಾಡಿದವರ ಮೇಲೆ ಇನ್ನುಳಿದವರು ತಪ್ಪು ಮಾಡಲು ಹಿಂದೇಟು ಹಾಕುವ ರೀತಿಯಲ್ಲಿ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳುವ ಕೆಲಸವನ್ಬು ಆಯುಕ್ತರು ಮಾಡಬೇಕಿದೆ.ಜೊತೆಗೆ ಇಷ್ಟು ವರ್ಷ ತೆರಿಗೆ ತುಂಬದೇ ಚಲ್ಲಾಟ ಆಡುತ್ಯಿರುವ ಆ ಕಂಪನಿಗೂ ಪಾಠ ಕಲಿಸುವ ಕೆಲಸವನ್ನು ಆಯುಕ್ತರು ಮಾಡಬೇಕಿದೆ. ಮಾಡ್ತಾರೊ ಇಲ್ಲವೋ ಎನ್ನುವುದನ್ನು ಕಾದು ನೋಡೊಣ

Leave a Reply

Your email address will not be published. Required fields are marked *

error: Content is protected !!