Headlines

ಇವರ ಕೆಲಸ ಅದ್ಭುತ…!

ಬೆಳಗಾವಿ ಡಿಸಿಯಿಂದ ಸರ್ಕಾರದ ಮುಖ್ಯ ಕಾರ್ಯದರ್ಶಿ ಉನ್ನತ ಹುದ್ದೆಗೇರಿದ ಡಾ.‌ಶಾಲಿನಿ ರಜನೀಶ್.

ಅಧಿವೇಶನ ಸಂದರ್ಭದಲ್ಲೂ ಕೂಡ ಕಾಲಹರಣ ಮಾಡದ ಡಾ ಶಾಲಿನಿ. ರಜನೀಶ್.

ಕೋಟೆ ಕೆರೆ ವೀಕ್ಷಣೆ ಸಂದರ್ಭದಲ್ಲಿ ಅವ್ಯವಸ್ಥೆ ಕಂಡು ಅಸಮಾಧಾನ ವ್ಯಕ್ತಪಡಿಸಿದ್ದ ಮುಖ್ಯ ಕಾರ್ಯದರ್ಶಿಗಳು.

ವೆಗಾ ಹೆಲ್ಮೆಟ್ ತೆರಿಗೆ ವಸೂಲಿ ಲೋಪ.ಗಂಭೀರ ಪರಿಗಣನೆ

ಬೆಳಗಾವಿ.

ಗಡಿನಾಡ ಬೆಳಗಾವಿಯಲ್ಲಿ ಕಳೆದ ದಿ.9 ರಿಂದ ಚಳಿಗಾಲ ಅಧಿವೇಶನ ಶುರುವಾಗಿದೆ. ಇಡೀ ಮಂತ್ರಿ ಮಂಡಲವೇ ಗಡಿನಾಡಿಗೆ ಬಂದಿದೆ.

ಆದರೆ ಅಧಿವೇಶನದೊಳಗೆ ಎಷ್ಟರ ಮಟ್ಟಿಗೆ ಅಭಿವೃದ್ಧಿ ಪರ ಚರ್ಚೆ ನಡೆಯುತ್ತಿದೆ ಎನ್ನುವುದನ್ನು ನೀವೇ ನಿತ್ಯ ಗಮನಿಸುತ್ತಿದ್ದೀರಿ.

ಆದರೆ ಇದೆಲ್ಲದರ ನಡುವೆ ಯಾವುದೇ ಪ್ರಚಾರದ ಗೊಡವೆಗೆ ಹೋಗದೇ ಅಧಿಕಾರಿಗಳ ಬೆವರಿಳಿಸಿ ಬೆಳಗಾವಿ ಸುಧಾರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ.

ಅವರೇ ಡಾ. ಶಾಲಿನಿ ರಜನೀಶ್. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು.

ಹಿಂದೆ ಬೆಳಗಾವಿ ಜಿಲ್ಲಾಧಿಕಾರಿಗಳಾಗಿದ್ದ ಸಂದರ್ಭದಲ್ಲಿ ಅತ್ಯಂತ ಅಚ್ಚುಕಟ್ಟಾಗಿ ಕೆಲಸ ನಿರ್ವಹಿಸಿದ ಹೆಗ್ಗಳಿಕೆ ಶಾಲಿನಿ ರಜನೀಶ್ ಅವರಿಗಿದೆ. ಹೀಗಾಗಿ ಬೆಳಗಾವಿಯ ಆಳ ಅಗಲ ಎಲ್ಲವೂ ಗೊತ್ತು.

ಅಧಿವೇಶನ ಹಿನ್ನೆಲೆಯಲ್ಲಿ ಬೆಳಗಾವಿಗೆ ಆಗನಿಸಿದ್ದ ಅವರು ಒಂದೈದು ನಿಮಿಷ ಕೂಡ ಸುಮ್ಮನೆ ಕುಳಿತಿಲ್ಲ. ಬದಲಾಗಿ ಬೆಳ್ಳಂ‌ ಬೆಳಿಗ್ಗೆ ಕೋಟೆ ಕೆರೆ ಸುತ್ತುವುದು, ಅಲ್ಲಿನ ಅವ್ಯವಸ್ಥೆ ಗಮನಿಸುವುದು ಮಾಡುತ್ತಾರೆ.

ಅಷ್ಟೆ ಅಲ್ಲ ಪಾಲಿಕೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸಿ ಅಗತ್ಯ ಸಲಹೆ ಸೂಚನೆ ಕೊಡುವ ಕೆಲಸ ಮಾಡಿದರು. ಆದರೆ ಇದ್ಯಾವುದನ್ನೂ ಅವರು ಪ್ರಸ್ತಾಪಿಸಿ ಪ್ರಚಾರದ ಗೊಡವೆಗೆ ಹೋಗಲಿಲ್ಲ.

ಮತ್ತೊಂದು ಸಂಗತಿ ಎಂದರೆ, ಕಳೆದ ದಿನ ಕೋಟೆ ಕೆರೆ ಭೆಟ್ಟಿ ನೀಡಿದ ಸಂದರ್ಭದಲ್ಲಿ ಅಲ್ಲಿನ ಅವ್ಯವಸ್ಥೆ ಜೊತೆಗೆ ಗಲೀಜು ಕಂಡು ಅಸಮಾಧಾನ ವ್ಯಕ್ತಪಡಿಸಿದ್ದರು. ಅದನ್ನು ತಕ್ಷಣ ಸರಿ ಮಾಡುವಂತೆ ಪಾಲಿಕೆ ಆಯುಕ್ತರಿಗೆ ಸೂಚನೆ ಸಹ ಕೊಟ್ಟರು.

Oplus_131072

ಗಂಭೀರ ಪರಿಗಣನೆ

ಗಮನಿಸಬೇಕಾದ ಸಂಗತಿ ಎಂದರೆ, ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಇತ್ತೀಚೆಗೆ ನಡೆದ ಕೆಲ ಘಟನೆಗಳನ್ನೂ ಸಹ ಇವರು ಅತ್ಯಂತ ಗಂಭೀರವಾಗಿ ಪರಿಗಣಿಸುತ್ತಿದ್ದಾರೆ.

ಬೆಳಗಾವಿ ಮಹಾನಗರ ಪಾಲಿಕೆಗೆ ಬರುವ ಆದಾಯಕ್ಕೆ ಕಂದಾಯ ಶಾಖೆಯವರೇ ಅಡ್ಡಿಯಾಗುತ್ತಿದ್ದಾರೆ ಎನ್ನುವ ಸುದ್ದಿ ಹೊರ ಬಿದ್ದಿತ್ತು. ಪಾಲಿಕೆಯಲ್ಲಿನ ಲಂಚಾವತಾರ ಜೊತೆಗೆ ವೆಗಾ ಹೆಲ್ಮೆಟ್ ಕಂಪನಿಯಿಂದ ತೆರಿಗೆ ವಸೂಲಾತಿಯಲ್ಲಿ ಸಂಬಂಧಿಸಿದವರು ಮಾಡಿಕೊಂಡ ಯಡವಟ್ಟುಗಳನ್ನು ಸರ್ಕಾರದ ಮುಖ್ಯಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅತ್ಯಂತ ಸಿರಿಯಸ್ ತೆಗೆದುಕೊಂಡಿದ್ದರು. ಈಗ ಅದರಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ಗ್ಯಾರಂಟಿ ಮತ್ತು ಅನಿವಾರ್ಯ ಎನ್ನಲಾಗುತ್ತಿದೆ.

Leave a Reply

Your email address will not be published. Required fields are marked *

error: Content is protected !!