ಬೆಳಗಾವಿ.
ಒಂದಾನೊಂದು ಕಾಲದಲ್ಲಿ ಬರೀ ವಿವಾದದಿಂದಲೇ ಹೆಸರು ಮಾಡಿದ್ದ ಬೆಳಗಾವಿ ಹಾಲು ಒಕ್ಕೂಟದ ಚಿತ್ರಣವನ್ನು ಸಂಪೂರ್ಣ ಬದಲಾಯಿಸುವ ನಿಟ್ಟಿನಲ್ಲಿ ಕೆಲಸಗಳು ನಡೆಯುತ್ತಿವೆ.
ಅರಭಾವಿ ಕ್ಷೇತ್ರದ ಶಾಸಕರೂ ಆಗಿರುವ ಪ್ರಸಕ್ತ ಬೆಳಗಾವಿ ಹಾಲು ಒಕ್ಕೂಟದ ಅಧ್ಯಕ್ಷರೂ ಆಗಿರುವ ಬಾಲಚಂದ್ರ ಜಾರಕಿಹೊಳಿ ಇಂತಹ ಮಹತ್ವದ ಹೆಜ್ಜೆಯನ್ನು ಇಟ್ಟಿದ್ದಾರೆ.

ಈ ಒಕ್ಕೂಟದ ಅಧ್ಯಕ್ಷರಾದ ನಂತರ ಕೆಎಂಎಫ್ ಉತ್ಪನ್ನಗಳ ಮಾರಾಟದಲ್ಲೂ ಸೈ ಎನಿಸಿಕೊಳ್ಳುವಂತೆ ಮಾಡಿದ್ದಾರೆ. ಅಷ್ಟೆ ಉಳಿದ ಖಾಸಗಿ ಹಾಲು ಕಂಪನಿಗಳಿಗೆ ಪ್ರಭಲ ಪೈಪೋಟೊಯನ್ನು ಅವರು ನೀಡುವಂತೆ ಮಾಡಿದ್ದಾರೆ.
ಈಗಿನ ಮಾಹಿತಿ ಪ್ರಕಾರ ಬರುವ ಮಾರ್ಚ ಹೊತ್ತಿಗೆ ಬೆಳಗಾವಿ ಹಾಲು ಒಕ್ಕೂಟವು ಬರೊಬ್ವರಿ 6 ಕೋಟಿ ಲಾಭ ಗಳಿಸಬಹುದು ಎನ್ಬುವುದು ಅವರ ಅಭಿಪ್ರಾಯ.

ಬೆಳಗಾವಿ ಒಕ್ಕೂಟದಿಂದ ಸಭೆಗಳನ್ಬು ಕರೆದಾಗ ಇವರು ಅದಕ್ಕೆ ಸಂಬಂಧಿಸಿದಂತೆ ಯಾವುದೇ ಟಿಎ,ಡಿಎ ತೆಗೆದುಕೊಳ್ಳುವುದಿಲ್ಲ. ಆ ಹಣವನ್ಬು ರೈತರ ಕಲ್ಯಾಣ ನಿಧಿಗೆ ಜಮಾ ಮಾಡುತ್ತಿದ್ದಾರೆ. ಬರೀ ಟೀ ಬಿಸ್ಕಿಟ್ ಮಾತ್ರ ಹಾಲು ಒಕ್ಕೂಟದ ಖರ್ಚು. ಉಳಿದಿದ್ದೆಲ್ಲವೂ ಸ್ವಂತ ಖರ್ಚು ಮಾಡುತ್ತಾರಂತೆ.
ಈಗಾಗಲೇ ಬೆಳಗಾವಿ ಹಾಲು ಒಕ್ಕೂಟದಿಂದ ಈಗಾಗಲೇ ಮಹಾರಾಷ್ಟ್ರ, ಗೋವಾಕ್ಕೂ ಹಾಲು ಪೂರೈಕೆ ಆಗುತ್ತಿದೆ. ಅದರ ಮಾರುಕಟ್ಟೆಯನ್ನು ಇನ್ನಷ್ಟು ಸುಧಾರಿಸುವ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದೆ ಎಂದು ಜಾರಕಿಹೊಳಿ ಹೇಳಿದರು.