ಅಂಗವಿಕಲ ಟೆರಿರಿಸ್ಟನಂತೆ ಕಂಡನಾ?
ಉದ್ಯಮಬಾಗ ಪೊಲೀಸರ ಅಮಾನವೀಯ ವರ್ತನೆ.
ಕ್ರೂರತನವನ್ನು ಸಮರ್ಥಿಸಿದ ಪೊಲೀಸ್ ಆಯುಕ್ತ.ರು.
ಪೊಲೀಸರ ಕೊರಳಪಟ್ಟಿ ಹಿಡಿದ ಎನ್ನಲಾದ ಸಿಸಿಟಿವಿ ಎಲ್ಲಿ?
ಆತ ಕುಡಿದಿದ್ದರೆ ವೈದ್ಯಕೀಯ ಪರೀಕ್ಷೆ ಏಕೆ ಮಾಡಿಸಲಿಲ್ಲ?
ಮಾರಣಾಂತಿಕ ಹಲ್ಲೆ ಮಾಡಲು ಅನುಮತಿ ಕೊಟ್ಟಿದ್ದು ಯಾರು?
ತಡರಾತ್ರಿವರೆಗೆ ತೆರೆದಿಟ್ಟ ಆ ಹೊಟೇಲ್ ಮೇಲೆ ಏಕಿಲ್ಲ ಕ್ರಮ?
ವಿಶೇಷ ವರದಿ
ಬೆಳಗಾವಿ.
ಇಡೀ ಸರ್ಕಾರದ ಚುಕ್ಕಾಣಿ ಹಿಡಿದುಕೊಂಡು ಕಾನೂನು ಚೌಕಟ್ಟಿನಡಿ ಅದನ್ನು ನಡೆಸಿಕೊಂಡು ಹೋಗುವ ಹಿರಿಯ ಅಧಿಕಾರಿಗಳು ಮನಸೋ ಇಚ್ಚೆ ಮಾತನಾಡಲು ಸಾಧ್ಯವೇ?
ಅಥವಾ ಅಧಿಕಾರ ಸಿಕ್ಕಿದೆ ಅಂತ ಬಾಯಿಗೆ ಬಂದಂತೆ ಮಾತನಾಡಬಹುದಾ?
ಇದೆಂತಹ ಹಿರಿಯ IPS ಮಾತು?
ಆ ರೀತಿ ಮಾತನಾಡಿದ್ದರೆ ಯಾರಿಗೆ ಕೆಟ್ಟ ಹೆಸರು? ಇಲ್ಲಿ ಜನಪರ ಆಡಳಿತಕೊಡಲು ಮುಂದಾಗಿರುವ ಸಿದ್ಧರಾಮಯ್ಯ ನೇತೃತ್ವದ ಸರ್ಕಾರ ‘ಇಂತಹ‘ ಅಧಿಕಾರಿಗಳನ್ನು ಇನ್ನೂ ಸಹಿಸಿ ಕೊಂಡಿದೆಯಲ್ಲಾ ಎನ್ನುವ ಚರ್ಚೆ ಸಾರ್ವಜನಿಕ ವಲಯದಲ್ಲಿ ನಡೆಯುತ್ತಿದೆ. ಅದು ಸಹಜ ಮತ್ತು ಸ್ವಾಭಾವಿಕ.
ಮನುಷ್ಯತ್ವ ಮರೆತ ಪೊಲೀಸ್..!
ಅಂದರೆ ಇಲ್ಲಿ ಅಧಿಕಾರಿಗಳದ್ದು ತೂಕದ ಮಾತಿರಬೇಕು. ಕಾನೂನು ಚೌಕಟ್ಟಿನಲ್ಲಿ ನೊಂದವರಿಗೆ ನ್ಯಾಯ ಕೊಡಿಸುವಂತಿರಬೇಕು. ಅದನ್ನು ಬಿಟ್ಟು ಅಧಿಕಾರ ಸಿಕ್ಕಿದೆ ಅಂತ ಬಾಯಿಗೆ ಬಂದಂತೆ ಮಾತಾಡಿದರೆ ಯಾರಿಗೆ ಶೋಭೆ ಎನ್ನುವುದು ಓದುಗರಿಗೆ ಬಿಟ್ಟ ವಿಚಾರ.
ಇಲ್ಲಿ ಇಷ್ಟೆಲ್ಲ ಮಾತು ಒಬ್ಬ ಅಂಗವಿಕಲನ ಮೇಲೆ ಬೆಳಗಾವಿ ಉದ್ಯಮಬಾಗದ ಮೂವರು ಪೊಲೀಸರು ನಡೆದು ಕೊಂಡ ಅಮಾನುಷವಾಗಿ ನಡೆಸಿದ ಹಲ್ಲೆ.ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕಾಗಿದ್ದ ಬೆಳಗಾವಿ ನಗರ ಪೊಲೀಸ್ ಆಯುಕ್ತರು ಆಡಿದ ಆ ‘ಭಾರೀ‘ ಮಾತುಗಳಿಂದ ಉಲ್ಭಣಿಸಿವೆ
ಇಲ್ಲಿ ಘಟನೆ ನಡೆದ. ರೀತಿ, ಅದಕ್ಕೆ ಸಂಬಂಧಿಸಿದಂತೆ ಸಿಸಿಟಿವಿ ಸಾಕ್ಷಿ ಯನ್ನು ಗಮನಿಸಿದರೆ ಪೊಲೀಸ್ ಆಯುಕ್ತರು ಪ್ರಾಥಮಿಕವಾಗಿ ಆ ಮೂವರು ಹಲ್ಲೆಕೋರ ಪೊಲೀಸರನ್ನು ಮನೆಗಟ್ಟಿ ನಂತರ ಎಸಿಪಿಗೋ ಅಥವಾ ಡಿಸಿಪಿಗೋ ವಿಚಾರಣೆಗೆ ಆದೇಶ ಮಾಡಬೇಕಿತ್ತು.
ಆದರೆ ಇಲ್ಲಿ ಕನಿಷ್ಟ ಮಾನವೀಯತೆಯನ್ನೇ ತೋರದ ಆಯುಕ್ತರು, ಘಟನೆ ಬಗ್ಗೆ ಪ್ರಶ್ನೆ ಮಾಡಿದ ಪತ್ರಕರ್ತರಿಗೆ ಒಂದು ರೀತಿ ಹಾರಿಕೆ ಉತ್ತರ ಕೊಡುವ ಕೆಲಸ ಮಾಡಿದ್ದಾರೆ ಎನ್ನುವುದು ಇಲ್ಲಿ ಸ್ಪಷ್ಟ.
ಅಷ್ಟೇ ಅಲ್ಲ ಘಟನೆ ನಡೆದು 48 ಗಂಟೆ ಕಳೆದರೂ ಸಹ ಅದರ ಬಗ್ಗೆ ಶಿಸ್ತುಕ್ರಮದ ಮಾತಾಡಿಲ್ಲ
ಬದಲಾಗಿ ಸಧ್ಯ ಅವರು ಮಾತನಾಡಿದ ರೀತಿಯನ್ನು ಗಮನಿಸಿದವರಿಗೆನಕ್ಲೀನ್ ಚಿಟ್ ಕೊಡುವ ಕೆಲಸ ವಿಚಾರಣೆಗೆ ಮುನ್ನವೇ ಮಾಡಿದ್ದಾರೆ. ಬಹುಶಃ ಮುಂದಿನ ದಿನದಲ್ಲಿ ಅಂಗವಿಕಲನ ಮೇಲೆ ಪೌರುಷ ತೋರಿದ ಮೂವರು ಪೊಲೀಸರಿಗೆ ಅವಾರ್ಡಕೊಡುವ ಕೆಲಸ ಕೂಡ ಮಾಡಬಹುದು ಎನ್ನುವ ವ್ಯಂಗ್ಯನಮಾತುಗಳು ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿವೆ.
: *ಏನಾಗಿತ್ತು ಆವತ್ತು?*
ನಿರಂಜನ ಚೌಗಲಾ ಊಟದ ಪಾರ್ಸ್ಲ್ ತೆಗೆದುಕೊಂಡು ಹೋಗಲು ಉದ್ಯಮಬಾಗದಲ್ಲಿರುವ ವಿರಾಟ ಹೊಟೇಲ್ ಗೆ ಹೋಗಿದ್ದಾರೆ.
ಮೊದಲೇ ಅಂಗವಿಕಲ. ರಾತ್ರಿ ಧಾರಾಕಾರ ಮಳೆ ಬೇರೆ.ಹೀಗಾಗಿ ಊಟದ ಪಾರ್ಸಲ್ ತೆಗೆದುಕೊಂಡು ಹೊಟೇಲ್ ಮುಂಭಾಗ ನಿಂತುವಕೊಂಡಿದ್ದಾನೆ. ಆಗ ಅಲ್ಲಿಗೆ ಸಾಹಸಿ ಮೂವರು ಪೊಲೀಸರ ಕಣ್ಣಿಗೆ ಈ ಬಡಪಾಯಿ ಅಂಗವಿಕಲ ಟೆರಿರಿಸ್ಟನಂತೆ ಕಂಡನೊ ಏನೊ? ಇಲ್ಲೇಕೆ ನಿಂತಿದ್ದಿಯಾ ಎಂದು ಕೇಳಿದ ಪ್ರಶ್ನೆಗೆ ಆತ ಉತ್ತರಿದುವಾಗಲೇ ಪೊಲೀಸರು ನಡು ರಸ್ತೆಯಲ್ಲಿ ದನಕ್ಕೆ ಬಡಿದಂತೆ ಬಡಿದರು. ರಸ್ತೆಯಲ್ಲಿ ಉರುಳುಡಾಸಿ ಒಬ್ಬ ಹೊಟ್ಟೆಗೆ ಸೇರಿದಂತೆ ದೇಹದ ಎಲ್ಲ ಭಾಗಕ್ಕೆ ಒದ್ದನು. ಇನ್ನೊಬ್ಬನು ಲಾಠಿಯಿಂದ ಬಡೆಯತೊಡಗಿದನು. ಈ ಸಂದರ್ಭದಲ್ಲಿ ಅಂಗವಿಕಲ ಚೀರಾಟ ಮಾಡಿದರೂ ಪೊಲೀಸರಿಗೆ ಕರುಣೆ ಎನ್ನುವುದು ಬರಲೇ ಇಲ್ಲ.
ಕೊನೆಗೆ ಗಾಡಿ, ಮೊಬೈಲ್ ಕಸಿದುಕೊಂಡ ಆತನನ್ನು ಪೊಲೀಸರು ರೇಲ್ವೆ ಹಳಿ ಪಕ್ಕಕ್ಕೆ ಬಿಟ್ಟು ಹೋದರು.ಕೊನೆಗೆಅಲ್ಲಿಯೇ ತಡರಾತ್ರಿವರೆಗೆ ಕಳೆದ ಆತನನ್ನು ಬೇರೆ ಪೊಲೀಸರು ಆರ್ ಪಿಡಿವರೆಗೆ ಬಿಟ್ಟರಂತೆ.
ಕಥೆ* ಕಟ್ಟತೊಡಗಿದ ಖಾಕಿ ಪಡೆ..*
ಇಷ್ಟೆಲ್ಲ ರಂಪಾಟ ನಡೆದ ಸುದ್ದಿ ಸೋಷಿಯಲ್ ಮಿಡಿಯಾದಲ್ಲಿ ಸಿಸಿಟಿವಿ ದೃಶ್ಯಾವಳಿ ಸಮೇತ ವೈರಲ್ ಆಗತೊಡಗಿದವು.ಮಾಧ್ಯಮಗಳಲ್ಲಿ ಸಹ ಪೊಲೀಸ್ ಕ್ರೌರ್ಯದ ವರದಿಗಳು ಬಿತ್ತರಗೊಂಡವು.
ಪ್ರಕರಣ ಗಂಭೀರ ಸ್ವರೂಪ ಪಡೆದು ಕೊಳ್ಳುತ್ತಿದೆ ಎನ್ನುವುದು ಗೊತ್ತಾಗುತ್ತಿದ್ದಂತೆ ಸಾಹಸ ಶೂರ ಖಾಕಿಧಾರಿಗಳು ಅದಕ್ಕೊಂದು ಕಥೆ ಕಟ್ಟತೊಡಗಿದರು
*ಪೊಲೀಸರ ಕಥೆ ಏನಿದೆ?*
:ನಿರಂಜನ ಚೌಗಲಾ ಮೂಲತಃ ಅಂಗವಿಕಲ ಅಲ್ಲ.ಅಪಘಾತ ಪ್ರಕರಣದಲ್ಲಿ ಅಂಗವಿಕಲ ಆಗಿದ್ದಾನೆ.ಆತ ಆವತ್ತು ಕುಡಿದಿದ್ದನು.ಪೊಲೀಸರನ್ನು ಕಂಡ ತಕ್ಷಣ ಅವರ ಕೊರಳಪಟ್ಟಿ ಹಿಡಿದನು. ಕೆಟ್ಟದಾಗಿ ಬೈದನು
ಹೀಗಾಗಿ ಪೊಲೀಸರು ಒಂದೆರೆಡು ಏಟು ಹೊಡೆದರು. ಸಿಸಿಟಿವಿಯಲ್ಲಿ ಏನೂ ಕ್ಲೀಯರೆನಿಲ್ಲ.ಲಾಠಿ ಮುರಿದಿದ್ದು ನೀವ್ ನೋಡಿದ್ದಿರಾ ಎನ್ನುವುದು ಪೊಲೀಸ್ ಆಯುಕ್ತರ ಪತ್ರಕರ್ತರಿಗೆ ಕೇಳಿದ ಬಹುದೊಡ್ಡ ಪ್ರಶ್ನೆ.
: *ಅ ವಿಡಿಯೊ ಎಲ್ಲಿದೆ ತೋರಿಸಿ..*
ಈಗ ಸಿಸಿಟಿವಿಯಲ್ಲಿ ಪೊಲೀಸರು ಹಲ್ಲೆಮಾಡಿದ ದೃಶ್ಯ ದಾಖಲಾಗಿದೆ.ಆದರೆಅಂಗವಿಕಲನ ಪೊಲೀಸರ ಕೊರಳಪಟ್ಟಿ ಹಿಡಿದ ದೃಶ್ಯ ಎಲ್ಲಿದೆ? ಮೇಲಾಗಿ ಆತನ ಕುಡಿದಿದ್ದರೆ ಆತನನ್ನು ವೈದ್ಯಕೀಯ ಪರೀಕ್ಷೆಗೆ ಏಕೆ ಕರೆದುಕೊಂಡು ಹೋಗಲಿಲ್ಲ,?
ಇದೆಲ್ಲದರ ಜೊತೆಗೆ ರಾತ್ರಿ 11.45 ರವರೆಗೆ ತೆರೆದಿಟ್ಟ ಆ ಹೊಟೇಲ್ ಮೇಲೆ ಏಕೆ ಕಾನೂನು ಕ್ರಮತೆಗೆದುಕೊಂಡಿಲ್ಲ ಎನ್ನುವುದನ್ನು ಸೂಕ್ಷ್ಮವಾಗಿ ಗಮನಿಸಿದರೆ ಪೊಲೀಸ್ ಸಿಟ್ಟು ಹೊಟೇಲ್ ಮೇಲಿತ್ತು ಎನ್ನುವುದು ಸ್ಪಷ್ಟ.ಕಾರಣ ಬೇಕಿದ್ದರೆ ಆ ಪೊಲೀಸರನ್ನೇ ಕೇಳಿ