Headlines

ಸಚಿವೆಯ ತವರು ಜಿಲ್ಲೆಯಲ್ಲಿ ಸಿಗದ ನ್ಯಾಯ..!

ಅಂಗವಿಕಲನ ಪ್ರಮಾಣ ಪತ್ರ ರದ್ದತಿಗೆ ಖಾಕಿ ಹರಸಾಹಸ.,

ಸರ್ಕಾರಿ‌ ದಾಖಲೆಯನ್ನು ಸುಳ್ಳಾಗಿಸಲು ಖಾಕಿ ಯತ್ನ

ಅಂಗವಿಕಲ‌ ಇಲಾಖೆ ಆಯುಕ್ತರ ಪತ್ರಕ್ಕೆ ಸಿಗದ ಉತ್ತರ.

ಸಚಿವೆಯ ತವರು ಜಿಲ್ಲೆಯಲ್ಲಿ ಅಂಗವಿಕಲನ ರೋದನ.

ಎರಡು ಪತ್ರ ಬರೆದರೂ ಪೊಲೀಸ್ ಆಯುಕ್ತರ ಮೌನ.ಪ್ರಕರಣ ಬೆಂಗಳೂರಿಗೆ ಶಿಫ್ಟ್ ‌ಸಾಧ್ಯತೆ.

ಸಿಎಂ, ಗೃಹ ಮಂತ್ರಿ, ಜಿಲ್ಲಾ ಮಂತ್ರಿ ಮಾತಿಗೂ ಡೋಂಟ್ ಕೇರ್.

ಮತ್ತೊಂದು ವಿವಾದದಲ್ಲಿ ಬೆಳಗಾವಿ ಪೊಲೀಸ್..!

ನಿರಂಜನ‌ ಚೌಗಲಾ ಅಂಗವಿಕಲ ಎನ್ನುವ ಸರ್ಕಾರಿ‌ ದಾಖಲೆ

ಬೆಳಗಾವಿ.

ಗಡಿನಾಡ ಬೆಳಗಾವಿ ಪೊಲೀಸರಿಗೆ ವಿವಾದವನ್ನು ಮೈಮೇಲೆ ಎಳೆದುಕೊಳ್ಳದಿದ್ದರೆ ನಿದ್ದೆನೇ ಬರಲ್ಲ ಎನ್ನುವ ಹಾಗಾಗಿದೆ.
ಒಂದು ವಿವಾದ. ಬಗೆಹರಿಯಿತು ಎನ್ನುವಾಗಲೇ ಮತ್ತೊಂದು ಅನಗತ್ಯ ಅವಾಂತರ ಸೃಷ್ಟಿಸುವ ಕೆಲಸವನ್ನು ಖುದ್ದು ಪೊಲೀಸರೇ ಮಾಡುತ್ತಿರುವುದು ಚರ್ಚೆಗೆ ಎಡೆ ಮಾಡಿಕೊಟ್ಡಿದೆ


ಗಮನಿಸಬೇಕಾದ ಸಂಗತಿ ಎಂದರೆ, ಅಧೀನ ಅಧಿಕಾರಿಗಳು ಮಾಡುವ ಯಡವಟ್ಟುಗಳನ್ನು ಸರಿ ಮಾಡುವುದರಲ್ಲಿಯೇ ಹಿರಿಯ ಅಧಿಕಾರಿಗಳು ಸಮಯ ವ್ಯರ್ಥಮಾಡಬೇಕಾದ ಪರಿಸ್ಥಿತಿ ಬಂದೊದಗಿದೆ.,
ಉದ್ಯಮಬಾಗ ಠಾಣೆಯ ಮೂವರು ಪೊಲೀಸರು‌ ಅಂಗವಿಕಲ ನಿರಂಜನ‌‌ ಚೌಗಲಾರನ್ನು ಥಳಿಸಿದ ರೀತಿ ಭಯಾನಕವಾಗಿತ್ತು. ಆ ದೃಶ್ಯವನ್ನು ಗಮನಿಸಿದ ಜಿಲ್ಲೆಯ ಇಬ್ಬರೂ ಸಚಿವರು ಬೆಚ್ವಿ‌ಬಿದ್ದರು. ಅದನ್ನು ಸಮರ್ಥಿಸಿಕೊಳ್ಳಲಾಗದು ಎಂದಿದ್ದರು.

ಇನ್ನು‌ ಮುಖ್ಯಮಂತ್ರಿ, ಗೃಹಮಂತ್ರಿಗಳು ಕೂಡ ಪೊಲೀಸರ‌ ಕ್ರಮವನ್ನು ಸಮರ್ಥಿಸಿಕೊಳ್ಳಲಿಲ್ಲ. ಅಷ್ಟೇ ಅಲ್ಲ ಕಢಿಣ ಕ್ರಮಕ್ಕೆ ಸೂಚನೆ ನೀಡಲಾಗುವುದು ಎಂದಿದ್ದರು.

ಮತ್ತೊಂದು ಸಂಗತಿ ಎಂದರೆ, ಸಚಿವೆ ಹೆಬ್ಬಾಳಕರ ಅವರು ಈ‌ ಬಗ್ಗೆ ಖುದ್ದು ಗೃಹ ಮಂತ್ರಿಗಳಿಗೆ ಪತ್ರವನ್ನು ರವಾನಿಸಿದ್ದರು. ಆದರೆ ಅವರ ಆಪ್ತ ಸಹಾಯಕರು ಅದನ್ನು ಸಚಿವರ ಗಮನಕ್ಕೆ ತಾರದೇ ಮುಚ್ಚಿಟ್ಡರಾ ಎನ್ನುವ ಪ್ರಶ್ನೆ ಸಾರ್ವಜನಿಕರನ್ನು ಕಾಡುತ್ತದೆ. ಅಥವಾ‌ ಈ ಮೂವರೂ ಪೊಲೀಸರು ಮತ್ತು ಅವರ‌ ರಕ್ಷಣೆಗೆ ನಿಂತವರು ಸರ್ಕಾರಕ್ಕಿಂತ ದೊಡ್ಡವರಾ ಎನ್ನುವ ಸಂಶಯ ಕೂಡ ಕಾಡತೊಡಗುತ್ತದೆ.

ಅದೇನೇ ಇರಲಿ ಈಗ ಪೊಲೀಸರೇ ಆ ಬಡಪಾಯಿ ಅಂಗವಿಕಲನ ಪ್ರಮಾಣ ಪತ್ರ ರದ್ದತಿ ಮಾಡಿಸುವ ಬಗ್ಗೆ ತೆರೆಮರೆಯ ಕಸರತ್ತು ನಡೆಸಿದ್ದು ಗುಟ್ಡಾಗಿ ಉಳಿದಿಲ್ಲ. ಈ ಬಗ್ಗೆ ಕೆಲ ಇಲಾಖೆಯವರನ್ನು ಸಂಪರ್ಕ ಸಹ ಮಾಡಿದ್ದರು ಎನ್ನಲಾಗಿದೆ.

ಗಮನಿಸಬೇಕಾದ ಸಂಗತಿ ಎಂದರೆ, ಬೆಂಗಳೂರಿನ‌ ಅಂಗವಿಕಲ ಕಲ್ಯಾಣ ಇಲಾಖೆಯ ಆಯುಕ್ತರು ಇದರ ಬಗ್ಗೆ ತೆಗೆದುಕೊಂಡ ಕ್ರಮವೇನು ಎಂದು ಪೊಲೀಸ್ ಆಯುಕ್ತರಿಗೆ ಕಳೆದ ದಿ. 1 ರಂದು ಪತ್ರ ಬರೆದಿದ್ದರು..‌ಅದರಲ್ಲಿ‌ ಏಳು ದಿನದೊಳಗೆ ಉತ್ತರ ಕೊಡಬೇಕೆಂದು ಕೋರಿದ್ದರು. ಆದರೆ ಈಗ ನೆನಪೋಲೆ ಎನ್ನುವಂತೆ ಮತ್ತೊಂದು ಪತ್ರವನ್ನು ಕಳೆದ ದಿ.‌19 ರಂದು ಮತ್ತೆ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದಾರೆ.‌ಅದರಲ್ಲಿ ಹಿಂದಿನ ಪತ್ರ ದ ಸಾರಾಂಶವನ್ನು ಉಲ್ಲೇಖಿಸಿ ಹಲವು ಪ್ರಶ್ನೆ ಕೂಡ ಎತ್ತಿದ್ದಾರೆ.

ಸಧ್ಯ ಬಂದಿರುವ ಮಾಹಿತಿ ಪ್ರಕಾರ ಅಂಗವಿಕಲನ ಮೇಲೆ ನಡೆದ ಹಲ್ಲೆಯ ಪ್ರಕರಣವನ್ನು ಸಂಪೂರ್ಣವಾಗಿ ಬೆಂಗಳೂರಿಗೆ ಶಿಫ್ಟ್ ಮಾಡುವ ಸಾಧ್ಯತೆಗಳಿವೆ.

ಇಲ್ಲಿ ಹಲ್ಲೆಗೊಳಗಾದ ಅಂಗವಿಕಲ ಸೇರಿದಂತೆ ಹಲ್ಲೆ ಮಾಡಿದ ಮೂವರು ಪೊಲೀಸರನ್ನು ವಿಚಾರಣೆಗೆ ಕರೆಯಿಸಿಕೊಳ್ಳುವ ಸಾಧ್ಯತೆಇದೆ. ಇಲ್ಲಿ ಬೆಳಗಾವಿ ಅಂಗವಿಕಲ ಇಲಾಖೆಯ ಕಲ್ಯಾಣ ಅಧಿಕಾರಿಯನ್ನು ಸಹ ಪ್ರತಿವಾದಿಯನ್ನಾಗಿ‌ ಮಾಡಬಹುದು ಎನ್ನಲಾಗುತ್ತದೆ.

ದೂರಿನ ಕಥೆ ಹೆಣೆದ ಖಾಕಿ

ವಿರಾಟ ಹೊಟೇಲ್ ಬಳಿ ಮಾರಣಾಂತಿಕವಾಗಿ ಹಲ್ಲೆಗೊಳಗಾದ ಅಂಗವಿಕಲ‌ ನಿರಂಜನ ಚೌಗಲಾ ಅವನ ದ್ವಿಚಕ್ರ ಮತ್ತು ನೊಬೈಲ್ ನ್ನು ‌ಪೊಲೀಸರು ಕಸಿದುಕೊಂಡು ಹೋಗಿದ್ದರು. ಅಷ್ಟೇ ಅಲ್ಲ ಅವನನ್ನು ರೇಲ್ವೆ ಹಖಿಯ. ಬಳಿ‌ಮಲಗಿ ಹೋಗಿದ್ದರು.

ಇಸೆಲ್ಕದ ನಡುವೆ ಪ್ರಕರಣದ ಗಂಭೀರತೆ ಹೆಚ್ಚಾಗುತ್ತಿದ್ದಂತೆಯೇ ಉದ್ಯಮವಾಗ ಪೊಲೀಸರು‌ ಆತನ ಮೇಲೆ ಗೂಬೆ ಕೂರಿಸುವ ಕೆಲಸ ನಡೆಸಿದರು ಎನ್ನುವ. ಮಾತುಗಳು ಕೇಳಿ ಬಙದವು.ಒಂದು ಪ್ರದೇಶದ ನಿವಾಸಿಗಳಿಂದ. ನಿರಙಜನ ಚೌಗಲೆ ರಾತ್ರಿ ಹೊತ್ತು ನಮ್ಮ ಮನೆಯ ಬಾಗಿಲು ಬಡಿದ ಎನ್ನು‌ದೂರು ಪಡೆದು ಅದನ್ನೇ ಎಲ್ಲರಿಗೆ ತೋರಿಸಿ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆಂದು ಹೇಳಲಾಗುತ್ತಿದೆ.

ಈಗ ಜಿಲ್ಲಾಧಿಕಾರಿಗಳೆ ಮುಖ್ಯಸ್ಥರಾಗಿರುವ ಜಿಲ್ಲಾ ಮಟ್ಟದ ಅಂಗವಿಕಲರ ಕಲ್ಯಾಣ ಸಮಿತಿ‌ ಈ‌‌ ನಿಟ್ಟಿನಲ್ಲಿ ಯಾವ ಕ್ರಮ ತೆಗೆದುಕೊಂಡಿದೆ ಎನ್ನುವ ಬಹುದೊಡ್ಡ ಪ್ರಶ್ನೆ ಚರ್ಚೆಗೆ ಎಡೆಮಾಡಿಕೊಟ್ಟಿದೆ.

One thought on “ಸಚಿವೆಯ ತವರು ಜಿಲ್ಲೆಯಲ್ಲಿ ಸಿಗದ ನ್ಯಾಯ..!

Leave a Reply

Your email address will not be published. Required fields are marked *

error: Content is protected !!