Headlines

ಬೆಳಗಾವಿ ‘ಸ್ಮಾರ್ಟ’ ಟೀಕಾಕಾರರಿಗೆ ರಾಷ್ಟ್ರಪತಿ ಉತ್ತರ

ಸ್ಮಾರ್ಟ ಸಿಟಿ ಬೆಳಗಾವಿಗೆ ರಾಷ್ಟ್ರಪತಿ ಶಹಬ್ಬಾಷಗಿರಿ. ಮಧ್ಯಪ್ರದೇಶ ದ ಇಂದೋರನಲ್ಲಿ ರಾಷ್ಟ್ರಪತಿ ಮುರ್ಮು ಅವರಿಂದ ಪ್ರಶಸ್ತಿ ವಿತರಣೆ. ಬೆಳಗಾವಿ ಸ್ಮಾರ್ಟ ಟೀಕಾಕಾರರಿಗೆ ಪ್ರಶಸ್ತಿ ಮೂಲಕ ಉತ್ತರ ಕೊಟ್ಟ ರಾಷ್ಟ್ರಪತಿ. ಸ್ಮಾರ್ಟ ಪ್ರಶಸ್ತಿ ಖುಷಿ ತಂದಿದೆ ಎಂದ ಶಾಸಕ ಅಭಯ ಪಾಟೀಲ ಬೆಳಗಾವಿ.ಗಡಿನಾಡ ಬೆಳಗಾವಿ ಸ್ಮಾರ್ಟ ಸಿಟಿ ಬಗ್ಗೆ ಸದಾ ಇಲ್ಲ ಸಲ್ಲದ್ದೊಂದು ಮಾತನಾಡುವ ‘ಪ್ರಜ್ಞಾವಂತ’ ಟೀಕಾಕಾರರಿಗೆ ಖುದ್ದು ರಾಷ್ಟ್ರಪತಿ ಮುರ್ಮು ಉತ್ತರ ನೀಡಿದ್ದಾರೆ.ಬೆಳಗಾವಿ ಸ್ಮಾರ್ಟ ಸಿಟು ಕಾಮಗಾರಿ ಕಳಪೆ ಆಗಿದೆ. ‘ಸ್ಮಾರ್ಟ” ಆದವರೇ ಬೇರೆಯವರು’ ಎನ್ನುವ ರೀತಿಯಲ್ಲಿ…

Read More

ಸಿಡಿದೆದ್ದ ಗುತ್ತಿಗೆದಾರರು ಕೆಲಸ ಬಂದ್ ಗೆ ನಿರ್ಧಾರ.

16 ರಿಂದ ಸ್ವಚ್ಚತಾ ಕೆಲಸ ಬಂದ್ ಮಾಡಲು ನಿರ್ಧಾರ. ಪಾಲಿಕೆ ಆಯುಕ್ತರಿಗೆ ಪತ್ರ ಕೊಟ್ಟ ಗುತ್ತಿಗೆದಾರರು. ಕೆಲಸ ಸ್ಥಗಿತಕ್ಕೆ ಕಾರಣ ಏನು ಗೊತ್ತಾ? . 138 ಪಿಕೆಗಳ ಸಂಬಳ ಕೊಡಲು ಆಗಲ್ಲ. ಸಂಬಳ ಕೊಡಲು ಪಾಲಿಕೆ ಆಯುಕ್ತರ ಆದೇಶ ಇಲ್ಲ. ಸಂಬಳ ಕೊಡದಿದ್ದರೆ ಕಪ್ಪುಪಟ್ಟಿಗೆ ಸೇರಿಸುವ ಎಚ್ಚರಿಕೆ‌ ಕೊಟ್ಟವರು ಯಾರು?. ಲೋಕಾಯುಕ್ತರಿಗೂ ದೂರು ಕೊಡಲು ಮುಂದಾದ ಗುತ್ತಿಗೆದಾರರು. ಬೆಳಗಾವಿ. ಮಹಾನಗರ ಪಾಲಿಕೆಯಲ್ಲಿ ಉಲ್ಭಣಿಸಿದ 138. ಪೌರ ಕಾರ್ಮಿಕರ ನೇಮಕ ಮತ್ತು ಸಂಬಳ ಪ್ರಕರಣ ಈಗ ಮತ್ತಷ್ಟು ಗಂಭೀರ…

Read More

ಗೋ ರಕ್ಷಣೆಗೆ ಬಾಲಚಂದ್ರ ಮನವಿ

ಜಾನುವಾರಗಳು ಈ ದೇಶದ ಆಸ್ತಿ. ಅವುಗಳ ಸಂರಕ್ಷಣೆ ಪ್ರತಿಯೊಬ್ಬರ ಹೊಣೆ- ಶಾಸಕ ಬಾಲಚಂದ್ರ ಜಾರಕಿಹೊಳಿ ರಾಜ್ಯವನ್ನು ಕಾಲು ಬಾಯಿ ರೋಗ ಮುಕ್ತವನ್ನಾಗಿಸಲು ಪಣ ತೊಡುವಂತೆ ರೈತರಿಗೆ ಬಾಲಚಂದ್ರ ಜಾರಕಿಹೊಳಿ ಕರೆಮೂಡಲಗಿ: ಜಾನುವಾರುಗಳಿಗೆ ಕಾಲು ಬಾಯಿ ರೋಗ ಲಸಿಕೆಯನ್ನು ಹಾಕಿಸುವ ಮೂಲಕ ರೋಗ ಬಾರದಂತೆ ಜಾನುವಾರುಗಳನ್ನು ರಕ್ಷಿಸಬೇಕು. ಈ ಮೂಲಕ ಕಾಲು ಬಾಯಿ ರೋಗ ಮುಕ್ತ ವಲಯವನ್ನಾಗಿ ಮಾಡುವಂತೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ರೈತ ಬಾಂಧವರಲ್ಲಿ ಮನವಿ ಮಾಡಿಕೊಂಡರು.ಪಟ್ಟಣದ ಪಶು ಆಸ್ಪತ್ರೆಯಲ್ಲಿ ಶನಿವಾರದಂದು ಜರುಗಿದ ಉಚಿತ ಕಾಲು…

Read More

ಸಾಕು ಪ್ರಾಣಿಗಳಿಗೆ ಉಚಿತ ಲಸಿಕಾ ಶಿಬಿರ ಇಂದು

ಬೆಳಗಾವಿ ಸಾಕು ಪ್ರಾಣಿಗಳಿಗೆ‌ ಉಚಿತ ಲಸಿಕಾ ಶಿಬಿರ ಮತ್ತು ಪೆಟ್ ಶಾಪ್ ಮಾಲೀಕರಿಗೆ ತಾತ್ಕಾಲಿಕ ನೊಂದಣಿ ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮ ಇಂದು ಕಾಲೇಜು ರಸ್ತೆಯಲ್ಕಿರುವ ಪಶು ಆಸ್ಪತ್ರೆ ಯಲ್ಲಿ ನಡೆಯಲಿದೆ. ಬೆಳಿಗ್ಗೆ 9.30 ಕ್ಕೆ ನಡೆಯುವ ಈ ಕಾರ್ಯಕ್ರಮವನ್ಬು ಶಾಸಕ ಆಸೀಫ್ ಶೇಠ ಉದ್ಘಾಟಿಸುವರು. ಸಾಕುಪ್ರಾಣಿಗಳಿಗೆ ಉಚಿತ ಆಂಟಿ ರೇಬೀಸ್ ಲಸಿಕೆ. ಪೆಟ್ ಶಾಪ್ ಮಾಲೀಕರಿಗೆ ತಾತ್ಕಾಲಿಕ ನೋಂದಣಿ ಪ್ರಮಾಣಪತ್ರಗಳ ವಿತರಣೆ ಮಾಡಲಾಗುತ್ತದೆ ಪ್ರಾಣಿ ಕಲ್ಯಾಣ ಕಾರ್ಯದಲ್ಲಿ ತೊಡಗಿರುವ ವ್ಯಕ್ತಿಗಳು ಮತ್ತು ಸಂಸ್ಥೆಗಳಿಗೆ ಮೆಚ್ಚುಗೆ ಪ್ರಮಾಣಪತ್ರಗಳನ್ನು…

Read More

ಮೋಡ ಬಿತ್ತನೆ. ಈಡೇರಿದ ಕನಸು

ಬೆಳಗಾವಿ: ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಜಿಲ್ಲೆಯ ರೈತರ ಅನುಕೂಲಕ್ಕಾಗಿ ಮೋಡ ಬಿತ್ತನೆ ಮಾಡಬೇಕೆಂದು ಬಹಳ ದಿನಗಳ ಹಿಂದೆಯೇ ನಿರ್ಧರಿಸಿದ್ದೆ, ಆದರೆ ಮೋಡ ಬಿತ್ತನೆ ಕನಸು ಇಂದು ಈಡೇರಿದೆ ಎಂದು ಲೋಕೋಪಯೋಗಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್‌ ಜಾರಕಿಹೊಳಿ ತಿಳಿಸಿದರು . ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಹುದಲಿಯ ಬೆಳಗಾಂ ಶುಗರ್ಸ್ ಪ್ರೈ.ಲಿಮಿಟಡ್ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಮೋಡ ಬಿತ್ತನೆ ಕಾರ್ಯಕ್ಕೆ ಚಾಲನೆ ನೀಡಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೋಡ ಬಿತ್ತನೆಗೆ ಕೇಂದ್ರದಿಂದ ಅನುಮತಿ ಪಡೆಯಲು 20…

Read More

ಮಂತ್ರಿ, ಶಾಸಕರ ಹೆಸರು ದುರ್ಬಳಕೆ- ಆರೋಪ

ಬೆಳಗಾವಿ ಪಾಲಿಕೆಯಲ್ಲಿ ಬಗೆಹರಿಯದ ಪಿಕೆಗಳ ಗೋಳು. ದಿನೇ ದಿನೇ ಕಗ್ಗಂಟಾಗುತ್ತಿರುವ 138 ಪಿಕೆಗಳ ನೇಮಕಾತಿ ವಿಷಯ ಪಿಕೆಗಳ ನಿಯಮಬಾಹಿರ ನೇಮಕದಲ್ಲಿ ಮಂತ್ರಿ, ಶಾಸಕರ ಹೆಸರು‌ ದುರ್ಬಳಕೆ ಮಾತು. ಎರಡು ತಿಂಗಳಾದರೂ ಸಿಗದ ಸಂಬಳ. ಸರ್ಕಾರಕ್ಕೆ ಪತ್ರ ಬರೆದ ಆಯುಕ್ತರು. ಪಿಕೆ ವಿಷಯದಲ್ಲಿ ನಗರಸೇವಕರನ್ನೇ ದಾರಿ ತಪ್ಪಿಸುತ್ತಿರುವವರು ಯಾರು?. ಸಂಬಳ ಕೊಡಲಾಗದ ಇಕ್ಕಟ್ಟಿನ ಸ್ಥಿತಿಗೆ ಪಾಲಿಕೆ. ಬೆಳಗಾವಿ. ವಿಘ್ನನಿವಾರಕನನ್ನು ಹನ್ನೊಂದು ದಿನಗಳ ಕಾಲ ಭಕ್ತಿ ಪೂರ್ವಕವಾಗಿ ಪೂಜಿಸಿದರೂ ಕೂಡ ಬೆಳಗಾವಿ ಪಾಲಿಕೆಯಲ್ಲಿ 138 ಪೌರಕಾರ್ಮಿಕರಿಗೆ ಸಂಬಳ ಮಾತ್ರ ಸಿಕ್ಕಿಲ್ಲ….

Read More

ಬಾಗೇವಾಡಿ ಟೋಲ್ ಬಂದ್ ಬಂದ್..!

ಬೆಳಗಾವಿ.ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಬಾರದು ಎಂದು ರೈತರು ಬಾಗೇವಾಡಿ ಟೋಲ್ ನಾಕಾ ಬಂದ್ ಮಾಡಿದ್ದಾರೆ. ಕರ್ನಾಟಕ ಬಂದ್ ಗೆ ಬೆಂಬಲಾರ್ಥವಾಗಿ ರೈತರು ಬೆಳಿಗ್ಗೆಯಿಂದ ಟೋಲ್ ಬಳಿ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ತಮಿಳುನಾಡಿಗೆ ನೀರು ಹರಿಸುತ್ತಿರುವ ರಾಜ್ಯ ಸರ್ಕಾರದ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ರೈತರ ಈ ಪ್ರತಿಭಟಬೆಯಿಂದ ಸಂಚಾರದಲ್ಲಿ ಅಸ್ತವ್ಯಸ್ತವಾಯಿತು. ಪೊಲೀಸರು ಬಂದೋಬಸ್ತ್ ಮಾಡಿದರು.

Read More

ಇನ್ನೂ‌ ಮುಗಿಯದ ವಿಸರ್ಜನೆ

ಅಲ್ಲಲ್ಲಿ ನಿದ್ರೆಗೆ ಜಾರಿದ ಕಾರ್ಯಕರ್ತರು. ಮೂರ್ತಿ ಮುಂದಕ್ಕೆ ಸಾಗುವುದೇ ಕಷ್ಡ ಎನ್ನುತ್ತಿರುವ ಪೊಲೀಸರು.9 ಗಂಟೆ ಆದರೂ ಮುಗಿಯದ ವಿಸರ್ಜನೆ. ಬೆಳಗಾವಿ – ನಗರದಲ್ಲಿ ನಿನ್ನೆ ಸಂಜೆ ಆರಂಭವಾದ ಶ್ರೀ ಮೂರ್ತಿ ವಿಸರ್ಜನೆ ಮೆರವಣಿಗೆ ಶುಕ್ರವಾರ ಬೆಳಗ್ಗೆ ಒಂಬತ್ತು ಗಂಟೆವರೆಗೂ ಮುಂದುವರೆದಿತ್ತು.. ಡಾಲ್ಬಿ ಸದ್ದಿನಿಂದಾಗಿ ಈ ವರ್ಷವೂ ಶ್ರೀಮೂರ್ತಿ ವಿಸರ್ಜನೆ ವಿಳಂಬವಾಗಿ ಸಾಗುತ್ತಿದೆ . ಡಾಲ್ಬಿ ಸದ್ದಿಗೆ ಕುಣಿದು ಕುಪ್ಪಳಿಸುತ್ತಿರುವವರನ್ನು ಕಂಡು ಜನಬೆಚ್ಚಿ ಬಿದ್ದಿದ್ದಾರೆ ಗಮನಿಸಬೇಕಾದ ಸಂಗತಿ ಎಂದರೆ, ಗಣೇಶ ಮಂಡಳದ ಕಾರ್ಯಕರ್ತರು ಮೂರ್ತಿಯನ್ನು ಹೊಂಡಕ್ಕೆ ತೆಗೆದುಕೊಂಡು ಹೋಗುವ…

Read More

ಕನ್ನಡ ಧ್ವಜ ಕಸಿದುಕೊಂಡರು..!

ಬೆಳಗಾವಿ. ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಕನ್ನಡ ಬಾವುಟ ಹಿಡಿದು ಕುಣಿಯುತ್ತಿದ್ದುದಕ್ಕೆ ಓರ್ವ ಆಕ್ಷೇಪಿಸಿ ಬಾವುಟ ಕಿತ್ತುಕೊಂಡು ಹೋದ ಘಟನೆ ಬೋಗಾರವೇಸ್ ವೃತ್ತದಲ್ಲಿ 1.ಗಂಟೆ 7 ನಿಮಿಷದಲ್ಲಿ‌ ನಡೆದಿದೆ . ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಹಾಡಿಗೆ ತಕ್ಕಂತೆ ಗುಂಪಿನಲ್ಲಿದ್ದ ವ್ಯಕ್ತಿ ಕನ್ನಡ ಬಾವುಟ ಹಿಡಿದುಕೊಂಡು ಕುಣಿಯುತ್ತಿದ್ದನು. ಈ ಸಂದರ್ಭದಲ್ಲಿ ಅಲ್ಲಿಯೇ ಇದ್ದ ವ್ಯಕ್ಯಿ ಆ ಕನ್ನಡ ಬಾವುಟವನ್ನು ಕಸಿದುಕೊಂಡು ಹೋದನು.

Read More

ಮೆರವಣಿಗಿಯೊಳಗ ಪೋಜ್ ಕೊಟ್ಟಾಳೊ…!

ಬೆಳಗಾವಿ. ಗಣೇಶ ವಿಸರ್ಜನೆ ಮೆರವಣಿಗೆ ನ ಭೂತೊ ನ ಭವಿಷ್ಯತಿ ಎನ್ನುವಂತೆ ಸಾಗಿದೆ. ಬೋಗಾರವೇಸ್ ವೃತ್ತದಲ್ಲಿ ಎಲ್ಲಿ ನೋಡಿದಲ್ಲಿ ಜನರೇ ಜನ‌. ಗಣಪತಿ ಬಪ್ಪ ಮೋರಯಾ ಎಬ್ನುವ ಘೋಷಣೆ ನಡುವೆ ಡಿಜೆ ಸಂಗೀತ ಭಾರೀ ಸದ್ದು ಮಾಡುತ್ತಿದೆ. ಇದೆಲ್ಲದರ ನಡುವೆ ಸಿಕ್ಕಾಪಟ್ಟೆ ವೈರಲ್ ಆಗಿರುವ ಶಾಂತಾಬಾಯಿ ..ಹಾಡಿಗೆ ಜನ‌ಹುಚ್ಚೆದ್ದು ಕುಣಿದು ಕುಪ್ಪಳಿಸಿದರು. ಇದೆಲ್ಲಕ್ಕಿಂತ ಮುಖ್ಯವಾಗಿ ಪೋಜ್ ಕೊಟ್ಟಾಳೊ ಹುಡುಗಿ ಪೋಜ್ ಕೊಟ್ಟಾಳೊ ಎನ್ನುವ ಕನ್ನಡ ಹಾಡಿಗೆ ಕುಣಿದ ದೃಶ್ಯ ಎಲ್ಲರ ಗಮನ ಸೆಳೆಯಿತು.

Read More
error: Content is protected !!