ಬೆಂಗಳೂರು.
ಸರ್ಕಾರ ಬದಲಾದಂತೆ ಅಧಿಕಾರಿಗಳ ವರ್ಗಾವಣೆ ಪಟ್ಟಿ ಬರುತ್ತಲೇ ಇದೆ.
ಹೀಗಾಗಿ ಅಧಿಕಾರಿಗಳು ತಮ್ನ ಕುರ್ಚಿ ಉಳಿಸಿಕೊಳ್ಳಲು ಕೊನೆ ಕ್ಷಣದವರೆಗೂ ಕಸರತ್ತು ನಡೆಸುತ್ತಿದ್ದಾರೆ.
ಅದರಲ್ಲೂ ಪೊಲೀಸ್ ಇಲಾಖೆಯಲ್ಲಿ ಅಧಿಕಾರಿಗಳ ಪಟ್ಡಿ ಬರುತ್ತದೆ . ದಿನಕ್ಕೆ ಒಂದಲ್ಲ ಎರಡು ಬಾರಿ ಪಟ್ಟಿಗಳು ಬರುತ್ತಲೇ ಇವೆ.
ಶನಿವಾರ ಬಂದ ಮೊದಲ ಪಟ್ಟಿಯಲ್ಲಿ ಬೆಳಗಾವಿ ಡಿಸಿಪಿ ಶೇಖರನ್ ವರ್ಗಾವಷೆ ಆಗಿದ್ದಾರೆ. ಅವರ ಜಾಗೆಗೆ ರೋಹನ್ ಜಗದೀಶ ಬಂದಿದ್ದಾರೆ.

ಇನ್ನು ಮತ್ತೇ ಸಂಜೆ ಹೊತ್ತು ಮತ್ತೊಂದು ಪಟ್ಟಿ ಹೊರಬರುವ ಸಾಧ್ಯತೆ ಇದೆ.ಅದರಲ್ಲಿ ಬಹುಶಃ ಡಿಸಿಪಿ ಪಿ.ವಿ.ಸ್ನೇಹ ಅವರ ಹೆಸರೂ ಬರಬಹುದು ಎನ್ನಲಾಗುತ್ತಿದೆ. ಸ್ನೇಹ ಅವರೇ ಕೆಲ ಕಾರಣ ನೀಡಿ ಬೆಂಗಳೂರು ಕೇಳಿದ್ದಾರೆ ಎನ್ನುವ ಮಾತಿದೆ.ಆದರೆ ಅವರ ಜಾಗೆಗೆ ಗುಪ್ತಚರ ಇಲಾಖೆಯ ನಂದಗಾವಿ ಅವರು ಬರುವ ಸಾಧ್ಯತೆಗಳು ಹೆಚ್ಚಾಗಿವೆ.