ಬೆಳಗಾವಿ. ಗಡಿನಾಡ ಬೆಳಗಾವಿಯಲ್ಲಿ ಈಗ ವಿಘ್ನನಿವಾರಕ ಗಣೇಶನ ಸ್ವಾಗತಕ್ಕೆ ಅದ್ದೂರಿ ಸಿದ್ಧತೆಗಳು ಜೋರಾಗಿ ನಡೆದಿವೆ.
ಮಹಾನಗರ ಪಾಲಿಕೆ, ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಝೆಗಳು ಜಂಟಿಯಾಗಿ ಎಲ್ಲ ಸಿದ್ಧತೆಗಳನ್ನು ಮಾಡುತ್ತಿವೆ.
ಕಳೆದ ದಿನವಷ್ಟೆ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು ಜಂಟೀಯಾಗಿ ಗಣೇಶ ಸಂಚರಿಸುವ ಮಾರ್ಗವನ್ನು ಪರಿಶೀಲಿಸಿದ್ದರು.
ಮತ್ತೊಂದೆಡೆ ಮೇಯರ್, ಉಪಮೇಯರ್ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷರು ಮತ್ತು ನಗರಸೇವಕರ ಉಪಸ್ಥಿತಿ ಯಲ್ಲಿ ಮುಂಜಾಗ್ರತಾ ಕ್ರಮಗಳ ಬಗ್ಗೆ ಚರ್ಚೆ ನಡೆಯಿತು.
ಇಂದು ಬೆಳಿಗ್ಗೆ ಕೂಡ ಮೇಯರ್ ಶೋಭಾ ಸೋಮನ್ನಾಚೆ, ಉಪಮೇಯರ್ ರೇಷ್ಮಾ ಪಾಟೀಲ, ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ವಾಣಿ ವಿಲಾಸ ಜೋಶಿ, ಕಂದಾಯ ಸ್ಥಾಯಿ ಸಮಿತಿ ಅಧ್ಯಕ್ಷೆ ವೀಣಾ ವಿಜಾಪುರೆ, ನಿತಿನ್ ಜಾಧವ, ಅಭಿಜಿತ್ ಜವಳಕರ, ಗಿರೀಶ ಧೋಂಗಡಿ, ಆಡಳಿತ ಪಕ್ಷದ ನಾಯಕಬರಾಜಶೇಖರ ಡೋಣಿ ಮುಂತಾದವರು ಸೇರಿದಂತೆ ಗಣೇಶ ಮಂಡಳದ ಪದಾಧಿಕಾರಿಗಳ ಜೊತೆ ಮಾರ್ಗವೀಕ್ಷಣೆ ಮಾಡಿದರು
ಬೆಳಗಾವಿಯಲ್ಲಿ ವರ್ಗಾವಣೆಗೂ ಟ್ಯಾಕ್ಸ್
https://ebelagavi.com/index.php/2023/09/06/hi-47/
ಈ ಸಂದರ್ಭದಲ್ಲಿ ಮೇಯರ್ ಸೇರಿದಂತೆ ಕೆಲವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಪಾಲಿಕೆ ಆಯುಕ್ತ ಅಶೋಕ ದುಡಗುಂಟೆ ಸಹ ಹಾಜರಿದ್ದರು.