ಬೆಳಗಾವಿ.
ಗಡಿನಾಡ ಬೆಳಗಾವಿಯಲ್ಲಿ ಈಗ ಹೆಜ್ಜೆ ಹೆಜ್ಜೆಗೂ ಪೊಲೀಸರ ಬೂಟಿನ ಸದ್ದು ಕೇಳಿಸುತ್ತಿದೆ.
ಅಷ್ಟೇ ಅಲ್ಲ ಸೂಕ್ಷ್ನ ಪ್ರದೇಶ ಸೇರಿದಂತೆ ಮೆರವಣಿಗೆ ಮಾರ್ಗ ಸಂಚರಿಸುವ ಮಾರ್ಗದಲ್ಲಿ ಹದ್ದಿನ ಕಣ್ಣಿಡಲು ನಾಲ್ಕು ನೂರಕ್ಕೂ ಹೆಚ್ಚು ಸಿಸಿಟಿವಿಗಳನ್ನು ಅಳವಡಿಸಲಾಗಿದೆ.
ಇದರ ಜೊತೆಗೆ ದ್ರೋಣ ಕ್ಯಾಮೆರಾಗಳೂ ಕೂಡ ಹಾರಾಡಲಿವೆ

ವಿಸರ್ಜನಾ ಮೆರವಣಿಗೆಯು ನಾಳೆ ದಿ. 28 ರಂದು ಮಧ್ಯಾಹ್ನ 4 ಕ್ಕೆ ಆರಂಭವಾಗಲಿದೆ. ಅದು ಮುಕ್ತಾಯಗೊಳ್ಳುವುದು ಮರುದಿನ ಅಂತ್ಯಗೊಳ್ಳಲಿದೆ.

ಬೆಳಗಾವಿ ನಗರದಲ್ಲಿ ಒಟ್ಟು 937 ಸಾರ್ವಜನಿಕ ಗಣೇಶ ಮೂರ್ತಿಗಳು ವಿಸರ್ಜನೆಗೊಳ್ಳಲಿವೆಈ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಿಕೊಂಡು ಬರುವ ನಿಟ್ಟಿನಲ್ಲಿ 3500 ಜನ ಪೊಲೀಸ್ ಸಿಬ್ಬಂದಿಗಳು ಬಂದೋ ಬಸ್ತಿಗೆ ಆಗಮಿಸಲಿದ್ದಾರೆ.

ರಾಜ್ಯದ ವಿವಿಧ ಅಲ್ಲೆಗಳಿಂದ ಒಟ್ಟು ಎಸ್ಪಿ ದರ್ಜೆಯ 05, ಡಿಎಸ್ಪಿ-20, ಪಿಐ-72, ಪಿಎಸ್ಐ, 106 ಎಎಸ್ಐ-210, ಎಚ್ಸಿ , ಪಿಸಿ 2048 ಹೋಮ್ ಗಾರ್ಡ 405 ಹಾಗೂ ಕೆಎಸ್ಆರ್ಪಿ ಪ್ರಹಾರ ದಳಗಳು -10 ಹೀಗೆ ಬಂದೋಬಸ್ತಗೆ ಬರಲಿದ್ದಾರೆ.

ಇವರೊಂದಿಗೆ ಸ್ಥಳೀಯ 03 ಎಸ್ಪಿ ದರ್ಜೆಯ, ಡಿಎಸ್ಪಿ-05, ಪಿಐ-21, ಪಿಎಸ್ಐ, 36 ಎಎಸ್ಐ-90, ಎಚ್ಸಿ , ಪಿಸಿ 731 ಸಿಎಆರ್ ಪ್ರಹಾರ ದಳಗಳು -08 ಈ ಪ್ರಕಾರ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರನ್ನು ನಿಯೋಜಿಸಿ ಮೆರವಣಿಗೆ ಹಾಗೂ ನಗರದ ಸೂಕ್ಷ್ಮ ಸ್ಥಳಗಳಲ್ಲಿ ಬಂದೋಬಸ್ತ ಕೈಗೊಳ್ಳಲಾಗಿದೆ.

ಇದಕ್ಕೆ ಪೂರಕವಾಗಿ ನಗರದಲ್ಲಿ ಮೆರವಣಿಗೆ ಮಾರ್ಗದಲ್ಲಿ ಹಾಗೂ ನಗರದ ಅತೀ ಸೂಕ್ಷ್ಮ ಸ್ಥಳಗಳಲ್ಲಿ ಒಟ್ಟು 487 ಸಿಸಿಟಿವಿಗಳನ್ನು ಅಳವಡಿಸಲಾಗಿದೆ. ಮೆರವಣಿಗೆ ಮಾರ್ಗ ಮತ್ತು ಆತೀ ಸೂಕ್ಷ್ಮ ಸ್ಥಳಗಳಲ್ಲಿ ನಿಗಾವಹಿಸಿಲು OB ದ್ರೋಣಗಳ ಕ್ಯಾಮೆರಾಗಳನ್ನು ಉಪಯೋಗಿಸಲಾಗುತ್ತಿದೆ. ತಪಾಸಣೆಗಾಗಿ 03 ವಿದ್ಯಂಸಕ ಕೃತ್ಯ ತಪಾಸಣೆ ತಂಡ (ಎಎಸ್ಸಿ)ಗಳನ್ನು ನಿಯೋಜಿಸಿದೆ ಮೆರವಣಿಗೆ ಕಾಲಕ್ಕೆ ಯಾವುದೇ ವ್ಯಕ್ತಿ ಕಾನೂನು ಸುವ್ಯವಸ್ಥೆಗೆ ದಕ್ಕೆ ತರಲು ಪ್ರಯತ್ನಿಸಿದ. ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.


