Headlines

ಸಿಡಿದೆದ್ದ ಗುತ್ತಿಗೆದಾರರು ಕೆಲಸ ಬಂದ್ ಗೆ ನಿರ್ಧಾರ.

16 ರಿಂದ ಸ್ವಚ್ಚತಾ ಕೆಲಸ ಬಂದ್ ಮಾಡಲು ನಿರ್ಧಾರ.

ಪಾಲಿಕೆ ಆಯುಕ್ತರಿಗೆ ಪತ್ರ ಕೊಟ್ಟ ಗುತ್ತಿಗೆದಾರರು. ಕೆಲಸ ಸ್ಥಗಿತಕ್ಕೆ ಕಾರಣ ಏನು ಗೊತ್ತಾ? .

138 ಪಿಕೆಗಳ ಸಂಬಳ ಕೊಡಲು ಆಗಲ್ಲ. ಸಂಬಳ ಕೊಡಲು ಪಾಲಿಕೆ ಆಯುಕ್ತರ ಆದೇಶ ಇಲ್ಲ.

ಸಂಬಳ ಕೊಡದಿದ್ದರೆ ಕಪ್ಪುಪಟ್ಟಿಗೆ ಸೇರಿಸುವ ಎಚ್ಚರಿಕೆ‌ ಕೊಟ್ಟವರು ಯಾರು?.

ಲೋಕಾಯುಕ್ತರಿಗೂ ದೂರು ಕೊಡಲು ಮುಂದಾದ ಗುತ್ತಿಗೆದಾರರು.

ಬೆಳಗಾವಿ.

ಮಹಾನಗರ ಪಾಲಿಕೆಯಲ್ಲಿ ಉಲ್ಭಣಿಸಿದ 138. ಪೌರ ಕಾರ್ಮಿಕರ ನೇಮಕ ಮತ್ತು ಸಂಬಳ ಪ್ರಕರಣ ಈಗ ಮತ್ತಷ್ಟು ಗಂಭೀರ ಸ್ವರೂಪಕ್ಕೆ ಹೋಗುವ ಎಲ್ಲ ಲಕ್ಷಣಗಳು ಕಾಣ ಸಿಗುತ್ತವೆ.

ಇದೇ ದಿ.‌16 ರಿಂದ ಬೆಳಗಾವಿ ನಗರದಲ್ಲಿ ಸ್ವಚ್ಚತೆ ಕೆಲಸವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗುವುದು ಎಂದು ಸ್ವಚ್ಚತಾ ಗುತ್ತಿಗೆದಾರರು ಎಚ್ಚರಿಕೆ ನೀಡಿದ್ದಾರೆ. ಅಷ್ಟೇ ಅಲ್ಲ ಪಾಲಿಕೆ ಆಯುಕ್ತರು, ಮೇಯರ್ ಅವರಿಗೆ ಲಿಖಿತ ಮನವಿ ಪತ್ರ ಕೂಡ ಕೊಟ್ಟಿದ್ದಾರೆ.

ಮೂಲಗಳ ಪ್ರಕಾರ ಪಾಲಿಕೆಯಲ್ಲಿಂದು‌ ಸ್ಥಾಯಿ ಸಮಿತಿಯ ಸಭೆ ಇತ್ತು. ಈ ಸಂದರ್ಭದಲ್ಲಿ ಎಲ್ಲ ಗುತ್ತಿಗೆದಾರರನ್ನು ಕರೆಯಿಸಿಕೊಂಡು, ಅವರಿಗೆ‌138 ಪಿಕೆಗಳ ಸಂಬಳ ನೀವೇ ಕೊಡಬೇಕು ಎನ್ನುವ ಒತ್ತಡವನ್ನು ಹೇರಲಾಯಿತಂತೆ.

ಆದರೆ ಅದಕ್ಕೆ ಅಲ್ಲಿದ್ದ. ಗುತ್ತಿಗೆದಾರರಾದ ಎನ್.ಡಿ. ಪಾಟೀಲ ಮತ್ತು ವೈ.ಬಿ. ಗೊಲ್ಲರ ಅವರು ಆಗಲ್ಲ ಅಂದರು. ಅದಕ್ಕೆ ಪಾಲಿಕೆ ಆಯುಕ್ತರ‌ ಆದೇಶ ಕೂಡ ಇಲ್ಲ. ಹೀಗಾಗಿ ನಾವು ಎಲ್ಲಿಂದ ಕೊಡಬೇಕು ಎಂದು ಪ್ರಶ್ನೆ ಮಾಡಿದರು ಎಂದು ಗೊತ್ತಾಗಿದೆ.

ಈ ಸಂದರ್ಭದಲ್ಲಿ ಸಿಡಿಮಿಡಿಗೊಂಡ ಸಮಿತಿಯ ಕೆಲವರು ಗುತ್ತಿಗೆದಾರರನ್ನು ಕಪ್ಪು ಪಟ್ಡಿಗೆ ಸೇರಿಸುವ ಮಾತನ್ನು ಆಡಿದರು ಎನ್ನಲಾಗಿದೆ.

ಗಮನಿಸಬೇಕಾದ ಸಂಗತಿ ಎಂದರೆ, ಸದಸ್ಯರ‌ ಮಾತಿನಿಂದ ಕೆಙಡಾಮಂಡಲವಾದ ಗುತ್ತಿಗೆದಾರು ಪರಿಸ್ಥಿತಿ ಬಂದರೆ ಅಗತ್ಯ ದಾಖಲೆಗಳೊಂದಿಗೆ ಲೋಕಾಯುಕ್ತ ಕಚೇರಿಯ ಮೆಟ್ಟಿಲು ಹತ್ತುವುದಾಗಿ ಹೇಳಿದರು ಎಂದು ಗೊತ್ತಾಗಿದರ. ಈಗ ಅದರ ಮೊದಲ ಹಂತವಾಗಿ 16 ರಿಂದ ಕೆಲಸ ಸ್ಥಗುತಗೊಳಿಸಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಗುತ್ತಿಗೆದಾರರ ಪತ್ರ.

——

ಪತ್ರದಲ್ಲಿ‌ ಏನಿದೆ?
ಜನಸಂಖ್ಯೆ ಹಾಗೂ ವಾರ್ಡಗಳ ರಚನೆ ಹೆಚ್ಚುವರಿ ವಿಸ್ತೀರ್ಣವಾಗಿರುವ ಕಾರಣ ಇದ್ದ ಕಾರ್ಮಿಕರಿಂದ ಕೆಲಸ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ.
ಹೀಗಾಗಿ ಸ್ವಚ್ಛತಾ ಗುತ್ತಿಗೆಯನ್ನು ಮುಂದುವರಿಸಲು ಸಾಧ್ಯವಿಲ್ಲ, ವಾರ್ಡಗಳ ರಚನೆಯಾದ ನಂತರ ಜನಸಂಖ್ಯೆ ಹಾಗೂ ವಾರ್ಡಗಳ ವಿಸ್ತೀರ್ಣ ಹೆಚ್ಚಾಗಿರುವುದರಿಂದ ನಮಗೆ ಕೆಲಸ ನಿರ್ವಹಣೆ ಕಷ್ಟ ಆಗುತ್ತಿದೆ. ಅಷ್ಟೇ ಅಲ್ಲ ಹೇಲ್ತ್ ಕಮಿಟಿ ಸದಸ್ಯರು ಮೇಅಂದ ಮೇಲೆ ವಾರ್ಡಗಳ ಪರಿಶೀಲನೆಯ ವೇಳೆ ನಮಗೆ ನೋಟೀಸ್ ಕೊಡಲು ಮುಂದಾಗಿ ತೊಂದರೆ ಕೊಡುತ್ತಿದ್ದಾರೆ.. ಇವತ್ತೂ ಸಹ ಪೇಲ್ತ್ ಕಮಿಟಿ ಮಿಟಿಂಗನಲ್ಲಿ ಸಹ ಒತ್ತಡ ಹೇರುವ ತಂತ್ರಗಾರಿಕೆ ನಡೆಸಿದರು.

138 ಪಿಕೆಗಳ ಬಗೆಹರಿಯದ ಗೋಳು.

https://ebelagavi.com/index.php/2023/09/29/y-2/

Leave a Reply

Your email address will not be published. Required fields are marked *

error: Content is protected !!