ಇವರಿಗೊಂದು ಸಲಾಂ ಹೇಳಲೇಬೇಕು..!
ಬೆಳಗಾವಿ. ಉಳಿದ ವಿಷಯ ಏನೇ ಇರಲಿ. ಬೆಳಗಾವಿ ರಾಜ್ಯೋತ್ಸವ ಆಚರಣೆ ವಿಚಾರದಲ್ಲಿ ಬೆಳಗಾವಿ ಅಧಿಕಾರಿಗಳು ಪಟ್ಟ ಶ್ರಮಕ್ಕೊಂದು ‘ಸಲಾಂ’ ಹೇಳಲೇಬೇಕು. ಇಡೀ ರಾಜ್ಯದ ಕನ್ನಡಿಗರು ಬೆಳಗಾವಿ ರಾಜ್ಯೋತ್ಸವ ದತ್ತ ತಿರುಗಿ ನೋಡುವ ಹಾಗೆ ಮಾಡಿದ್ದಾರೆ.. ಹೀಗಾಗಿ ಬೆಳಗಾವಿಯಲ್ಲಿ ಒಂದು ದಿನ ಮುಂಚಿತವಾಗಿಯೇ ರಾತ್ರಿ ಹೊತ್ತು ಕನ್ನಡ ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ಸರ್ಕಾರ ರಾಜ್ಯೋತ್ಸವಕ್ಕೆ ಅನುದಾನ ಕೊಡುತ್ತೋ ಅಥವಾ ಬಿಡುತ್ತೋ ಎರಡನೇ ಮಾತು. ಆದರೆ ಅಧಿಕಾರಿಗಳು ರಾಜ್ಯೋತ್ಸವ ಆಚರಣೆಗೆ ವಿಶೇಷ ಮರೆಗು ಕೊಟ್ಟಿದ್ದನ್ನು ಗಮನಿಸಿದರೆ ವಾವ್ ಎನ್ನದೇ ಎರಡು…